ಕಾಲಾಘಢ್ ಜಲಾಶಯವು ಈ ರಾಷ್ಟ್ರೀಯ ಉದ್ಯಾನವನದ ವಾಯುವ್ಯಕ್ಕೆ ನೆಲೆಗೊಂಡಿದ್ದು, ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಜಲಾಶಯವು ಉದ್ಯಾನವನದಲ್ಲಿ ನೆಲೆಗೊಂಡಿದ್ದು, ಒಂದು ಜಲವಿದ್ಯುತ್ ಕೇಂದ್ರವನ್ನು ಸಹ ಹೊಂದಿದೆ. ಇದರ ಜೊತೆಗೆ ಈ ಸ್ಥಳವು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿನ ಪ್ರಸಿದ್ಧ ಪಕ್ಷಿ ವೀಕ್ಷಣೆಯ ಸ್ಥಳವಾಗಿ ಸಹ ಗುರುತಿಸಲ್ಪಟ್ಟಿದೆ. ಪ್ರವಾಸಿಗರು ಇಲ್ಲಿ ಚಳಿಗಾಲದ ಸಮಯದಲ್ಲಿ ವಲಸೆ ಬರುವ ನೀರುಕೋಳಿಗಳನ್ನು ನೋಡಬಹುದಾಗಿದೆ.