Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಬೆಟ್ ರಾಷ್ಟ್ರೀಯ ಉದ್ಯಾನ » ಆಕರ್ಷಣೆಗಳು » ಮೀನುಗಾರಿಕೆ

ಮೀನುಗಾರಿಕೆ, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ

1

ಪ್ರವಾಸಿಗರ ವಲಯದಲ್ಲಿ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಮೀನುಗಾರಿಕೆಯು ಸಹ ಒಂದು ಪ್ರಸಿದ್ಧ ಚಟುವಟಿಕೆಯಾಗಿದೆ. ಕೋಸಿ ನದಿ ಮತ್ತು ರಾಮ್‍ಗಂಗಾ ನದಿಗಳು ಯಥೇಚ್ಛವಾಗಿ ಮಹಷೀರ್ ಮೀನುಗಳನ್ನು ಹೊಂದಿದ್ದು, ಈ ಉದ್ಯಾನವನದಲ್ಲಿ ಮೀನುಗಾರಿಕೆಗೆ ಹೇಳಿ ಮಾಡಿಸಿದ ತಾಣಗಳಾಗಿವೆ. ಪ್ರವಾಸಿಗರು ಇಲ್ಲಿ ಹಾರುವ ಮೀನುಗಳನ್ನು ಹಿಡಿದು ಆನಂದಿಸಬಹುದು ಮತ್ತು ಗಾಳ ಹಾಕಿ ಸಹ ಮೀನು ಹಿಡಿಯಬಹುದು. ಇದಲ್ಲದೆ ರಾಮ್‍ಘಡ್, ಪಂಚೇಶ್ವರ್ ಮತ್ತು ಬಿನ್ಸರ್ ಗಳಲ್ಲಿ ಸಹ ಮೀನುಗಾರಿಕೆಗೆ ಅನುಮತಿಯನ್ನು ನೀಡಲಾಗುತ್ತದೆ. ಆದರೂ ಸಹ ಪ್ರವಾಸಿಗರು ಅರಣ್ಯ ಇಲಾಖೆಯಿಂದ ವಿಶೇಷ ಅನುಮತಿಯನ್ನು ಪಡೆದು ಮೀನುಗಳನ್ನು ಹಿಡಿಯಬಹುದು.

ಮೀನುಗಾರಿಕೆಯಲ್ಲಿ ಆಸಕ್ತಿಯಿರುವ ಪ್ರವಾಸಿಗರು ಈ ಉದ್ಯಾನವನಕ್ಕೆ ಬರುವಾಗ ರಕ್‍ಸ್ಯಾಕ್ (ಚಾರಣದ ಚೀಲ), ಟೋಪಿ, ತಂಪು ಕನ್ನಡಕ, ಕೆಡ್ಸ್, ನಂಜು ನಿವಾರಕ ಕ್ರೀಮ್, ಕೀಟ ನಿವಾರಕಗಳು, ವಿಂಡ್ ಚೀಟರ್ಸ್, ಕೈ ಗವಸು ಮತ್ತು ಸನ್‍ಟ್ಯಾನ್‍ಗಳನ್ನು ಮರೆಯದೆ ತರುವುದು ಉತ್ತಮ. ಜಿಮ್ ಕಾರ್ಬೆಟ್ ತಮ್ಮ ಪ್ರಸಿದ್ಧ ಪುಸ್ತಕವಾದ "ಕುಮಾವ್‍ನ ನರಭಕ್ಷಕಗಳು" ಪುಸ್ತಕದಲ್ಲಿ ಉಲ್ಲೇಖಿಸಿದಂತೆ, ಅವರು ಈ ರಾಷ್ಟ್ರೀಯ ಉದ್ಯಾನವನದಲ್ಲಿನ ನದಿಗಳಲ್ಲಿ ಮಹಷೀರ್ ಮೀನುಗಳನ್ನು ಹಿಡಿದಿದ್ದರಂತೆ.

ರಾಮ್‍ಗಂಗಾ, ಕೋಸಿ, ಮಂಡಲ್ ಮತ್ತು ಕೋತ್ರಿ ನದಿಗಳಲ್ಲಿ ಮೀನುಗಳನ್ನು ಹಿಡಿಯಬೇಕಾದರೆ ಪ್ರವಾಸಿಗರು ಅನುಮತಿಯನ್ನು ಪಡೆಯಬೇಕಾದುದು ಅತ್ಯಾವಶ್ಯಕ. ಇಲ್ಲಿ ಮೀನುಗಾರಿಕೆಗಾಗಿ ಗಾಳಗಳು ದೊರೆಯುತ್ತವೆ. ಅದಕ್ಕಾಗಿ ದಿನವೊಂದಕ್ಕೆ 500 ರೂಪಾಯಿಗಳ ಬಾಡಿಗೆಯನ್ನು ತೆರಬೇಕಾಗುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu

Near by City