ಆನೆ ಸವಾರಿಯು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ದೊರೆಯುವ ಜೀವನ ಪರ್ಯಂತ ಮರೆಯಲಾಗದ ಅನುಭವವಾಗಿದೆ. ಈ ಸವಾರಿಯು ಪ್ರವಾಸಿಗರನ್ನು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಕೋರ್ ಮತ್ತು ಬಫ್ಫರ್ ವಲಯಗಳಿಗೆ ಕರೆದೊಯ್ಯುತ್ತದೆ. ಅಲ್ಲಿ ಪ್ರವಾಸಿಗರು ಕಾಡಿನ ಅನುಪಮವಾದ ಪ್ರಾಣಿ ಸಂಪತ್ತನ್ನು ನೋಡಬಹುದು. ಈ ಸಫಾರಿಗಾಗಿ ಪಳಗಿಸಿದ ಆನೆಗಳನ್ನು ಮತ್ತು ವೃತ್ತಿಪರ ಮಾವುತರನ್ನು ನೇಮಿಸಿಕೊಳ್ಳಲಾಗಿರುತ್ತದೆ. ಈ ನುರಿತ ಮಾವುತರು ಈ ರಾಷ್ಟ್ರೀಯ ಉದ್ಯಾನವನದ ಮೂಲೆ ಮೂಲೆಯ ಅಂಗುಲಗಳನ್ನು ಸಹ ತಿಳಿದಿರುತ್ತಾರೆ. ಈ ಸಫಾರಿಗಳು ಬಿಜ್ರಾನಿ ಮತ್ತು ಧಿಕಲ ಪ್ರಾಂತ್ಯಗಳಲ್ಲಿ ಪ್ರವಾಸಿಗರಿಗೆ ಕೈಗೆಟುಕುವ ದರದಲ್ಲಿ ದೊರೆಯುತ್ತದೆ. ಇದರ ಜೊತೆಗೆ ಬಫ್ಫರ್ ವಲಯದಲ್ಲಿ (ಕುಮೇರಿಯ ಮತ್ತು ರಿಂಗೊಡ) ಸಹ ಸಫಾರಿಗಳು ದೊರೆಯುತ್ತವೆ.