ಬುರುಡೆ ಜಲಪಾತವು ತನ್ನ ಹೆಸರನ್ನು ಬುರುಡೆ ಎಂಬ ಕನ್ನಡ ಅಕ್ಷರದಿಂದ ಪಡೆದುಕೊಂಡಿದೆ. ಈ ಜಲಪಾತವು ಸಿದ್ದಾಪುರ-ಕುಮಟಾ ರಸ್ತೆಯಲ್ಲಿದೆ. ಈ ಜಲಪಾತಕ್ಕೆ ಹೋಗಲು ಸೂಕ್ತ ಕಾಲವೆಂದರೆ ಚಳಿಗಾಲ ಮತ್ತು ಬೇಸಿಗೆಯ ಆರಂಭ ಕಾಲ. ಯಾಕೆಂದರೆ ಮಳೆಗಾಲದಲ್ಲಿ ಕಣಿವೆಯನ್ನು ದಾಟುವುದು ಅಸಾಧ್ಯ. ಬೇಸಿಗೆಕಾಲದಲ್ಲಿ ಪ್ರವಾಸಿಗರು ಇಲ್ಲಿ ಚಾರಣ ನಡೆಸುವುದಕ್ಕೆ ಅನುಕೂಲವಾಗುವಂತೆ ಸಣ್ಣ ನಾಲೆಯೂ ಇದೆ. ಬುರುಡೆ ಜಲಪಾತದ ಇನ್ನೊಂದು ತುದಿಗೆ ತಲುಪುವ ಪ್ರವಾಸಿಗರು ಎಚ್ಚರದಿಂದ ಚಾರಣ ಮಾಡಬೇಕಾದ್ದು ಅಗತ್ಯ. ಜಲಪಾತದ ಮೊದಲ ಮೆಟ್ಟಿಲಿನ ಸಮೀಪದಲ್ಲಿ ಅಂಗಣದಂಥಾ ಒಂದು ವ್ಯವಸ್ಥೆ ಇದೆ. ಇಲ್ಲಿ ನೀವು ಜಲಪಾತದ ಶಬ್ದವನ್ನು ಮತ್ತು ಮೇಲಿನಿಂದ ಬೀಳುವ ನೀರಿನಿಂದ ಉಂಟಾಗುವ ಮಂಜಿನ ಪದರವನ್ನು ನೋಡಿ ಆನಂದಿಸಬಹುದು.