ಸಿಂಗನಲ್ಲೂರ್ ಕೆರೆಯು ಕೊಯಮತ್ತೂರಿನ ಸಿಂಗನಲ್ಲೂರು ಪ್ರಾಂತ್ಯದಲ್ಲಿ ನೆಲೆಗೊಂಡಿದೆ. ಈ ಕೆರೆಯು ಪ್ರವಾಸಿಗರ ಮತ್ತು ಸ್ಥಳೀಯರ ವಲಯದಲ್ಲಿ ಅತ್ಯಂತ ಪ್ರಸಿದ್ಧವಾದ ವಿಹಾರ ತಾಣವಾಗಿ ಗುರುತಿಸಿಕೊಂಡಿದೆ. ಏಕೆಂದರೆ ಇಲ್ಲಿರುವ ಸಸ್ಯ ಮತ್ತು ಪ್ರಾಣಿ ಸಂಪತ್ತು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿವೆ. ಈ ಕೆರೆಯ ಸಮೀಪದ ಹುಲ್ಲುಗಾವಲುಗಳಲ್ಲಿ ಮನೆ ಮಾಡಿಕೊಂಡಿರುವ ಹಲವಾರು ಪಕ್ಷಿಗಳು ಈ ಕೆರೆಯನ್ನು ಪಕ್ಷಿ ವೀಕ್ಷಕರ ಸ್ವರ್ಗವಾಗಿ ಮಾಡಿವೆ. ನಂಬಿಕೆಗಳ ಪ್ರಕಾರ ಈ ಪ್ರಾಂತ್ಯದಲ್ಲಿ ಸುಮಾರು 100 ಜಾತಿಯ ಪಕ್ಷಿಗಳು ಮನೆ ಮಾಡಿಕೊಂಡಿವೆ ಎಂದು ಹೇಳಲಾಗುತ್ತದೆ.
ಈ ಪ್ರದೇಶವು ವಸಂತ ಋತುವಿನ ಅವಧಿಯಲ್ಲಿ ವೈವಿಧ್ಯಮಯವಾದ ಪಕ್ಷಿಗಳ ಕಲರವದಿಂದ ಕೂಡಿರುತ್ತದೆ. ಇದನ್ನು ನೋಡಲು ಬರುವ ಸ್ಥಳೀಯರು ಮತ್ತು ಪ್ರವಾಸಿಗರಿಂದ ಈ ಕೆರೆ ತುಂಬಿ ತುಳುಕುತ್ತಿರುತ್ತದೆ. ಇಲ್ಲಿ ಮಾತ್ರವೇ ಕಂಡು ಬರುವ ಕೆಲವು ಪಕ್ಷಿಗಳನ್ನು ನೋಡಲು ಮತ್ತು ಅವುಗಳ ಅಧ್ಯಯನ ಮಾಡುವ ಸಲುವಾಗಿ ಪಕ್ಷಿ ವೀಕ್ಷಕರು ಈ ಕೆರೆ ಭೇಟಿಕೊಡುತ್ತಿರುತ್ತಾರೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಎಗ್ರೆಟ್, ಕೊಕ್ಕರೆ, ಸ್ಟಾರ್ಕ್, ಹಾವಕ್ಕಿ, ಹೆರ್ಜಾಲೆ, ಹದ್ದು, ಹೆಣ್ಣು ನವಿಲುಗಳು, ಹಾರಿಯರ್ ಗಳು ಮತ್ತು ಟೀಲ್ಗಳನ್ನು ಕಾಣಬಹುದು.