Search
  • Follow NativePlanet
Share
ಮುಖಪುಟ » ಸ್ಥಳಗಳು » ಚೋಪ್ಟಾ » ಹವಾಮಾನ

ಚೋಪ್ಟಾ ಹವಾಮಾನ

ಬೇಸಿಗೆ ಮತ್ತು ಮಳೆಗಾಲಗಳು ಚೋಪ್ಟಾ ಭೇಟಿಗೆ ಆದರ್ಶ ಕಾಲಗಳೆಂದು ಪರಿಗಣಿಸಲಾಗುತ್ತದೆ.

ಬೇಸಿಗೆಗಾಲ

(ಮಾರ್ಚ್-ಮೇ ): ಚೋಪ್ಟಾದಲ್ಲಿ ಬೇಸಿಗೆಯು, ಮಾರ್ಚ್ ತಿಂಗಳಲ್ಲಿ ಆರಂಭಗೊಂಡು ಮೇ ತನಕ ಇರುತ್ತದೆ. ಈ ಸಮಯದಲ್ಲಿ ಸ್ಥಳದ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ  30°C ಮತ್ತು 10°C  ದಾಖಲಾಗಿದೆ. ಈ ಕಾಲದಲ್ಲಿ ಸ್ಥಳದ ಹವಾಮಾನ ಪ್ರಶಾಂತವಾಗಿರುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು  ಆಕರ್ಷಿಸುತ್ತದೆ.

ಮಳೆಗಾಲ

(ಜುಲೈ-ಸೆಪ್ಟೆಂಬರ್): ಜುಲೈಯಿಂದ ಸೆಪ್ಟೆಂಬರ್ ವರೆಗೆ ವ್ಯಾಪಿಸುವ ಮಳೆಗಾಲದಲ್ಲಿ, ಪ್ರದೇಶದ ಹವಾಮಾನ ಅತ್ಯಂತ ಆಹ್ಲಾದಕರವಾಗಿರುತ್ತದೆ. ಸೌಮ್ಯ ಮಳೆಯಾಗುವ ಈ ಪ್ರದೇಶಕ್ಕೆ ಮಳೆಗಾಲದಲ್ಲಿ ಪ್ರಯಾಣ ಬೆಳೆಸಬಯಸುವವರು ಮಳೆಯಿಂದ ರಕ್ಷಿಸಿಕೊಳ್ಳುವಲ್ಲಿ ಉಪಯುಕ್ತವಾಗುವ ಸಾಮಗ್ರಿಗಳನ್ನು ಕೊಂಡೊಯ್ಯಬೇಕು.

ಚಳಿಗಾಲ

(ನವೆಂಬರ್-ಫೆಬ್ರವರಿ ): ಚೋಪ್ಟಾದಲ್ಲಿ ಚಳಿಗಾಲವು ನವೆಂಬರ್ ಮತ್ತು ಫೆಬ್ರವರಿ ತಿಂಗಳ ನಡುವೆ ವಿಸ್ತರಿಸುತ್ತಿದ್ದು, ಈ ಕಾಲದಲ್ಲಿ, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 15°C ಮತ್ತು -15°C, ದಾಖಲಾಗಿದೆ. ಚಳಿಗಾಲದಲ್ಲಿ  ಈ ಪ್ರದೇಶವು ಭಾರೀ ಹಿಮಪಾತವನ್ನು ಅನುಭವಿಸುತ್ತದೆ. ಆದ್ದರಿಂದ ಈ ಸಮಯವು ಚೋಪ್ಟಾ ಭೇಟಿಗೆ ಸೂಕ್ತವಲ್ಲ.