ಸಾತ್ಬಿಸ್ ದಿಯೋರಿ ದೇವಸ್ಥಾನವು ಜೈನರಿಗೆ ಪವಿತ್ರವಾದದ್ದು. ಇದು ಮೋಹನ್ ಮಗ್ರಿಯ ಒಳಗಿದೆ. ಮೋಹನ್ ಮಗ್ರಿಯು 1567ರಲ್ಲಿ ಮೊಘಲ್ ರಾಜ ಅಕ್ಬರನಿಂದ ನಿರ್ಮಿಸಲ್ಪಟ್ಟ ಸುಂದರ ರಚನೆ. ಈ ಕಟ್ಟಡವನ್ನು ಎಷ್ಟು ಎತ್ತರಕ್ಕೆ ಕಟ್ಟಲಾಗಿದೆಯೆಂದರೆ ಇಲ್ಲಿಂದ ನೇರವಾಗಿ ಚಿತ್ತೋರಗಢ ಕೋಟೆಗೆ ಬೆಂಕಿ ಹೊತ್ತಿಸಬಹುದು. ಜೈನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರದರ್ಶಿಸುವ ಈ ಸಾತ್ಬಿಸ್ ದೇವಸ್ಥಾನವು ಅತ್ಯದ್ಭುತ ರಚನಾ ಕೌಶಲವಾಗಿದೆ. ಈ ದೇವಸ್ಥಾನದ ಕಲಾತ್ಮಕ ಕೆತ್ತನೆಯು ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದ ನೆನಪನ್ನು ಉಳಿಸುತ್ತದೆ. ತುಳಜಾ ಭವಾನಿ ದೇವಸ್ಥಾನ, ಸಿಂಗರ್ ಚೌರಿ ಮತ್ತು ನೌಲಖ ಭಂಡಾರವು ಮೋಹನ್ ಮಗ್ರಿಯ ಸುತ್ತಮುತ್ತಲಿನ ಇನ್ನಿತರ ಆಕರ್ಷಕ ಸ್ಥಳಗಳು.