Search
  • Follow NativePlanet
Share
ಮುಖಪುಟ » ಸ್ಥಳಗಳು» ಚಿಲ್ಕಾ

ಚಿಲ್ಕಾ ಪ್ರವಾಸೋದ್ಯಮ : ಉಪ್ಪು ನೀರಿನ ನಾಡು

46

ಚಿಲ್ಕಾ ಹೆಸರುವಾಸಿಯಾಗಿರುವುದು ಭಾರತದಲ್ಲೇ ಅತಿ ಉದ್ದದ ಉಪ್ಪು ನೀರಿನ ಕರಾವಳಿಯನ್ನು ಹೊಂದಿರುವ ಚಿಲ್ಕಾಸರೋವರದಿಂದಾಗಿ. ಈ ಸರೋವರ ವಿಶ್ವದ ಎರಡನೇ ಅತಿ ವಿಶಾಲವಾದ ಉಪ್ಪು ನೀರಿನ ಪ್ರದೇಶ. ಚಿಲ್ಕಾಇಲ್ಲಿ ಇರುವುದರಿಂದ ಒಡಿಶಾ(ಒರಿಸ್ಸಾ)ದ ಅತಿ ಜನಪ್ರಿಯ ಪ್ರವಾಸಿ ತಾಣದಲ್ಲೊಂದಾಗಿದೆ.

ಒಡಿಶಾ(ಒರಿಸ್ಸಾ)ದ ರಾಜಧಾನಿ ಭುವನೇಶ್ವರದಿಂದ 81 ಕಿಲೋಮೀಟರ್ ದೂರದಲ್ಲಿರುವ ಚಿಲ್ಕಾದ ಗಡಿ ಭಾಗದಲ್ಲಿ ಗಂಜಾಂ, ಖುರ್ದಾ ಮತ್ತು ಪುರಿ ಜಿಲ್ಲೆಗಳಿವೆ.

ಚಿಲ್ಕಾದ ಇತಿಹಾಸದ ಬಗ್ಗೆ

ಭೂಗರ್ಭ ಶಾಸ್ತ್ರದ ಸರ್ವೇ ಪ್ರಕಾರ, ಚಿಲ್ಕಾ ಪ್ಲೆಸ್ಟೋಸ್ಟೋನ್ ಬಂಗಾಳ ಕೊಲ್ಲಿಯ ಭಾಗವಾಗಿತ್ತು. ಈ ಪ್ರದೇಶವು ಭಾರತದ ಇತಿಹಾಸದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಕಳಿಂಗ ರಾಜನ ಸಾಮ್ರಾಜ್ಯದಲ್ಲಿ, ಚಿಲ್ಕಾ ವಾಣಿಜ್ಯ ಕೇಂದ್ರವಾಗಿತ್ತು ಮತ್ತು ಪ್ರಮುಖ ಬಂದರು ನಗರಿಯಾಗಿತ್ತು. ಪ್ಟೊಲೆಮಿ ಕೂಡಾ ತಾನು ಬರೆದ ಪುಸ್ತಕದಲ್ಲಿ ಚಿಲ್ಕಾ ಒಂದು ಪ್ರಮುಖ ಬಂದರಾಗಿತ್ತು ಎಂದು ನಮೂದಿಸಿದ್ದಾನೆ.

ಚಿಲ್ಕಾ ಸುತ್ತಮುತ್ತವಿರುವ ಪ್ರವಾಸಿ ತಾಣಗಳು

ಚಿಲ್ಕಾದ ಪ್ರವಾಸೋದ್ಯಮ ಹೆಸರುವಾಸಿಯಾಗಿರುವುದು ಚಿಲ್ಕಾಸರೋವರದಿಂದಾಗಿ. ಈ ಸರೋವರದ ಹೊರತಾಗಿ, ಇಲ್ಲಿನ ಪ್ರವಾಸೋದ್ಯಮದಲ್ಲಿ ಬೋಟಿಂಗ್, ಮೀನುಗಾರಿಕೆ, ಹಕ್ಕಿ ವೀಕ್ಷಣೆ, ವನ್ಯಜೀವಿ ಗಳನ್ನೂ ವೀಕ್ಷಿಸಬಹುದಾಗಿದೆ.

ಚಿಲ್ಕಾ- ಪ್ರಕೃತಿಯ ಐಕ್ಯಮತ್ಯ

ಚಿಲ್ಕಾದ ಪ್ರವಾಸೋದ್ಯಮದ ನೈಸರ್ಗಿಕ ಮತ್ತು ಪ್ರಾಕೃತಿಕ ಶ್ರೀಮಂತಿಕೆಯೆಂದರೆ ವಿವಿಧ ಜಾತಿಯ ಪಕ್ಷಿಗಳು, ಜಲಚರ ಪ್ರಾಣಿಗಳು ಮತ್ತು ಸರೀಸೃಪಗಳು. ಪ್ರತಿ ವರ್ಷ ಚಳಿಗಾಲದಲ್ಲಿ ಸಾವಿರಾರು ಹಕ್ಕಿಗಳು ಚಿಲ್ಕಾಸರೋವರಕ್ಕೆ ಭೇಟಿ ನೀಡುತ್ತವೆ. ಜಲಚರ ಪ್ರಾಣಿಗಳಾದ ಮೀನುಗಳು, ಆಮೆಗಳು, ನಳ್ಳಿ, ಪ್ರಾನ್ ಮುಂತಾದ ಮೃದು ಜಲಚರಗಳು ಇಲ್ಲಿ ಕಾಣಸಿಗುತ್ತವೆ. ಅವಯವವಿಲ್ಲದ ಜಲಚರಗಳು ಮತ್ತು ಇರವಾಡಿ ಡಾಲ್ಫಿನ್ಸ್ ಗಳನ್ನೂ ಇಲ್ಲಿ ನೋಡಬಹುದಾಗಿದೆ.

ಚಿಲ್ಕಾ ವಾತಾವರಣ

ಚಿಲ್ಕಾಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಚಳಿಗಾಲದ ಸಮಯವಾದ ಅಕ್ಟೋಬರ್ ಮತ್ತು ಮಾರ್ಚ್ ತಿಂಗಳ ಅವಧಿಯಲ್ಲಿ. ಈ ಅವಧಿಯಲ್ಲಿ ಚಿಲ್ಕಾ ಸ್ವರ್ಗದಂತೆ ಭಾಸವಾಗುತ್ತದೆ, ಪ್ರಮುಖವಾಗಿ ಹಲವು ವಲಸೆ ಹಕ್ಕಿಗಳು ಇಲ್ಲಿ ಆಶ್ರಯ ಪಡೆದಿರುತ್ತವೆ. ಇದು ಇಲ್ಲಿನ ಪ್ರವಾಸೋದ್ಯಮಕ್ಕೆ ಇನ್ನಷ್ಟು ತೂಕ ನೀಡುತ್ತದೆ. ಅಲ್ಲದೇ ಈ ಸಮಯದಲ್ಲಿ ವಾತಾವರಣವು ತಂಪಾಗಿರುತ್ತದೆ. ಉಷ್ಣಾಂಶ ದಿನದ ಸಮಯದಲ್ಲಿ ಆಹ್ಲಾದಕರವಾಗಿರುತ್ತದೆ.

ಚಿಲ್ಕಾತಲುಪುವುದು ಹೇಗೆ

ಚಿಲ್ಕಾ ವನ್ನು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ತಲುಪಬಹುದು. ಭುವನೇಶ್ವರ ವಿಮಾನ ನಿಲ್ದಾಣ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಸಮೀಪದ ರೈಲು ನಿಲ್ದಾಣವೆಂದರೆ ರಂಭಾ ಮತ್ತು ಬಲುಗಾನ್ ನಿಲ್ದಾಣ. ಬಸ್ ಮತ್ತು ಟ್ಯಾಕ್ಸಿ ಸೇವೆಯ ಮೂಲಕ ಪುರಿ ಮತ್ತು ಕಟಕ್ ನಗರದಿಂದ ಇಲ್ಲಿಗೆ ತಲುಪಬಹುದು.

ಚಿಲ್ಕಾ ಪ್ರಸಿದ್ಧವಾಗಿದೆ

ಚಿಲ್ಕಾ ಹವಾಮಾನ

ಉತ್ತಮ ಸಮಯ ಚಿಲ್ಕಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಚಿಲ್ಕಾ

  • ರಸ್ತೆಯ ಮೂಲಕ
    ಚಿಲ್ಕಾನ್ನು ರಸ್ತೆಯ ಮೂಲಕ ಕೂಡಾ ತಲುಪಬಹುದು. ಹತ್ತಿರದ ಪ್ರದೇಶಗಳಿಂದ ಚಿಲ್ಕಾ ತಲುಪಬಹುದು. ಟ್ಯಾಕ್ಸಿ ಬಾಡಿಗೆ ಮಾಡಿಕೊಂಡು ಇಲ್ಲಿಗೆ ತಲುಪಬಹುದು. ಇಲ್ಲಿನ ಮತ್ತು ಇಲ್ಲಿಗೆ ಸಮೀಪದ ಪ್ರವಾಸವನ್ನು ಒಟಿಡಿಸಿ (ಒರಿಸ್ಸಾ ಪ್ರವಾಸೋದ್ಯಮ ಇಲಾಖೆ) ಆಯೋಜಿಸುತ್ತದೆ. ಎಸಿ ಬಸ್ ಮೂಲಕ ತಲಾ ಒಬ್ಬರಿಗೆ ಐದು ನೂರು ರೂಪಾಯಿ ತಗುಲಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹತ್ತಿರದ ರೈಲು ನಿಲ್ದಾಣವೆಂದರೆ ರಂಭಾ ಮತ್ತು ಬಲುಗಾನ್. ರಂಭಾ ಚಿಲ್ಕಾದಿಂದ 32 ಕಿಲೋಮೀಟರ್ ದೂರದಲ್ಲಿದ್ದರೆ, ಬಲುಗಾನ್ ಸಮೀಪದಲ್ಲಿದೆ. ಈ ಪ್ರದೇಶಗಳಿಂದ ಚಿಲ್ಕಾಗೆ ಹೇರಳ ಬಸ್ ಸೌಲಭ್ಯವಿದೆ. ಟ್ಯಾಕ್ಸಿ ಸೇವೆಯನ್ನೂ ಪಡೆಯಬಹುದಾಗಿದೆ. ಬೋಟಿಂಗ್ ಮೂಲಕ ಪ್ರವಾಸದ ಮಜಾವನ್ನು ಮತ್ತಷ್ಟು ಸವಿಯಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಚಿಲ್ಕಾಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಭುವನೇಶ್ವರದ ಬಿಜು ಪಟ್ನಾಯಕ್ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣದಿಂದ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಹಾರಾಟವಿದೆ. ಈ ವಿಮಾನ ನಿಲ್ದಾಣಕ್ಕೆ ತಲುಪಲು ಸುಮಾರು ಎರಡು ಘಂಟೆ ಪ್ರಯಾಣಿಸ ಬೇಕಾಗುತ್ತದೆ. ರಾಜ್ಯ ರಾಜಧಾನಿ ಭುವನೇಶ್ವರದಿಂದ ಚಿಲ್ಕಾಗೆ ಬಸ್ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat