Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಕ್ಕಬಳ್ಳಾಪುರ » ಹವಾಮಾನ

ಚಿಕ್ಕಬಳ್ಳಾಪುರ ಹವಾಮಾನ

ಅಕ್ಟೋಬರ್ ಮತ್ತು ಮಾರ್ಚ್ ತಿಂಗಳುಗಳು ಪ್ರವಾಸಿಗರಿಗೆ ಉತ್ತಮ ಕಾಲವಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆಯಲ್ಲಿ ಹೆಚ್ಚಿನ ಬಿಸಿಲಿನ ಪ್ರಖರತೆ ಇರುವುದರಿಂದ ಇಲ್ಲಿನ ಉಷ್ಣಾಂಶ 40 ಡಿ.ಸೆ.ವರೆಗೆ ಏರಿರುತ್ತದೆ. ರಾತ್ರಿಯ ಹೊತ್ತಿನಲ್ಲಿ 22 ಡಿ.ಸೆ.ನಷ್ಟು ಉಷ್ಣಾಂಶ ಇಳಿಕೆಯಾಗಿರುತ್ತದೆ. ಕಾರಣ ಬೇಸಿಗೆ ಕಾಲದಲ್ಲಿ ಇಲ್ಲಿನ ವಾತಾವರಣ ಸೂಕ್ತವಾಗಿರುವುದಿಲ್ಲ.

ಮಳೆಗಾಲ

(ಜೂನ್ ನಿಂದ ಅಗಸ್ಟ್) : ನೈರುತ್ಯ ಮಾರುತಗಳ ಸರಹದ್ದಿನಲ್ಲಿ ಬರುವ ಚಿಕ್ಕಬಳ್ಳಾಪುರ ಪ್ರದೇಶದಲ್ಲಿ ಮಳೆಗಾಲದಲ್ಲಿ ಹೊರಗಿನ ಪ್ರೇಕ್ಷಣೀಯ ಸ್ಥಳಗಳು ನೋಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರವಾಸಿಗರು ಚಿಕ್ಕಬಳ್ಳಾಪುರಕ್ಕೆ ಮಳೆಗಾಲದಲ್ಲಿ ಬರಲು ಯೋಚಿಸದಿರುವುದು ಒಳ್ಳೆಯದೆನ್ನಬಹುದು.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ) : ಆಹ್ಲಾದಕರ ಮತ್ತು ಹಿತಕರ ವಾತಾವರಣವಿರುವ ಚಳಿಗಾಲದಲ್ಲಿ ಚಿಕ್ಕಬಳ್ಳಾಪುರಕ್ಕೆ ಪ್ರವಾಸಿಗರು ಭೇಟಿ ನೀಡಬಹುದು. ಈ ಸಮಯದಲ್ಲಿ ಗರಿಷ್ಠ 32 ಡಿ.ಸೆ.ಮತ್ತು ಕನಿಷ್ಠ 19 ಡಿ.ಸೆ.ಉಷ್ಣಾಂಶವಿರುವುದರಿಂದ ಚಿಕ್ಕಬಳ್ಳಾಪುರದ ಪ್ರವಾಸವನ್ನು ಸಂತಸದಿಂದ ಮಾಡಬಹುದು.