Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು » ಸ್ಯಾನ್ ಥೋಮ್ ಚರ್ಚ್

ಸ್ಯಾನ್ ಥೋಮ್ ಚರ್ಚ್, ಚೆನ್ನೈ

3

16 ನೇಯ ಶತಮಾನದ ಆಸುಪಾಸಿನಲ್ಲಿ ವ್ಯಾಪಾರಕ್ಕೆಂದು ಭಾರತ ಪ್ರವೇಶಿಸಿದ ಪೋರ್ಚುಗೀಸರಿಂದ ಸ್ಯಾನ್ ಥೋಮ್ ಚರ್ಚ್ ಚೆನ್ನೈನಲ್ಲಿ ನಿರ್ಮಿತವಾಯಿತು. ಪೋರ್ಚುಗೀಸರು ಇದನ್ನು ಚಿಕ್ಕ ಬೆಸಿಲಿಕಾದಂತೆ ನಿರ್ಮಿಸಿದ್ದರು, ಆದರೆ ನಂತರ ಬಂದ ಬ್ರಿಟೀಷರು ಇದನ್ನು1893 ರಲ್ಲಿ ಮರುನಿರ್ಮಾಣ ಮಾಡಿ ಕ್ಯಾಥೆಡ್ರಲ್ ಸ್ಥಾನಮಾನವನ್ನು ಒದಗಿಸಿದರು. ಪ್ರಸ್ತುತ ಕಾಣಬಹುದಾದ ಈ ರಚನೆಯು ಬ್ರಿಟೀಷರಿಂದ ನಿರ್ಮಿತವಾದುದಾಗಿದೆ. 19 ನೇ ಶತಮಾನದ ಬ್ರಿಟೀಷ್ ವಾಸ್ತುಶಿಲ್ಪಿಗಳಲ್ಲಿ ಹೆಸರುವಾಸಿಯಾಗಿದ್ದ ನಿಯೊ-ಗೋಥಿಕ್ ಪ್ರಕಾರವನ್ನು ಈ ರಚನೆಯಲ್ಲಿ ಕಾಣಬಹುದು.  

ಕ್ರೈಸ್ತ ಪೌರಾಣಿಕ ಕಥೆಯ ಪ್ರಕಾರ, ಸಂತ ಥಾಮಸ್ ಅವರು ಏಸು ಕ್ರಿಸ್ತನ ಹನ್ನೆರಡು ಶಿಷ್ಯರಲ್ಲಿ ಒಬ್ಬರಾಗಿದ್ದರು. ಒಂದೊಮ್ಮೆ ಪವಿತ್ರ ಭೂಮಿಯಿಂದ ಸುಮಾರು ಕ್ರಿ.ಶ. 52 ರಲ್ಲಿ ಕೇರಳದ ಕರಾವಳಿ ತೀರದಲ್ಲಿ ಬಂದಿಳಿದರು ಮತ್ತು ಕ್ರಿ.ಶ. 72 ರ ವರೆಗೂ ಅಲ್ಲೆ ವಾಸ ಮಾಡಿದರು. ಕೊನೆಯದಾಗಿ ಕ್ರಿ.ಶ. 72 ರಲ್ಲಿ, ಪ್ರಸ್ತುತ ಸೇಂಟ್ ಥಾಮಸ್ ಮೌಂಟ್ ಎಂದು ಕರೆಯಲಾಗುವ ಗಿರಿ ಶೃಂಗದಲ್ಲಿ ಹುತಾತ್ಮರಾದರು.  

ಇಂದು ಸ್ಯಾನ್ ಥೋಮ್ ಚರ್ಚ್ ಪ್ರದೇಶದ ಮಹತ್ತರವಾದ ಚರ್ಚ್ ಆಗಿದ್ದು, ಮದ್ರಾಸ-ಮೈಲಾಪೋರ್ ಆರ್ಚ್ ಬಿಷಪ್ಪರ ಅಧೀನದಲ್ಲಿದೆ. ಏಕೆಂದರೆ ಇದೊಂದು ರೋಮನ್ ಕ್ಯಾಥೋಲಿಕ್ ಚರ್ಚ್ ಆಗಿದೆ. ಭಾರತದಲ್ಲಿರುವ ಕ್ರೈಸ್ತರ ಪ್ರಮುಖ ಯಾತ್ರಾ ಸ್ಥಳವಾಗಿದೆ ಈ ಚರ್ಚ್.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat