Search
  • Follow NativePlanet
Share
ಮುಖಪುಟ » ಸ್ಥಳಗಳು » ಚೆನ್ನೈ » ಆಕರ್ಷಣೆಗಳು » ಚೆನ್ನೈ ಮಾಲ್ಸ್

ಚೆನ್ನೈ ಮಾಲ್ಸ್, ಚೆನ್ನೈ

4

ಎಕ್ಸ್ ಪ್ರೆಸ್ ಅವೆನ್ಯೂ ಮಾಲ್

ಚೆನ್ನೈ ನಗರದಲ್ಲಿ ನೆಲೆಸಿದೆ ಎಕ್ಸ್ ಪ್ರೆಸ್ ಅವೆನ್ಯೂ ಮಾಲ್(ವಿಹಾರಿ ಖರೀದಿ ಸಂಕೀರ್ಣ). 'ದಿ ಇಂಡಿಯನ್ ಎಕ್ಸ್ ಪ್ರೆಸ್'ನ ಉಪವಿಭಾಗವಾದ ಎಕ್ಸ್ ಪ್ರೆಸ್ ಇನ್ಫ್ರಾಸ್ಟ್ರಕ್ಚರ್ ನಿಂದ ಇಂಡಿಯನ್ ಎಕ್ಸ್ ಪ್ರೆಸ್ ನ ವಸತಿ ಸಮುಚ್ಛಯದಲ್ಲೆ ನಿರ್ಮಿತವಾಗಿದೆ ಈ ಮಾಲ್. ಇಲ್ಲಿರುವ ಗೇಮಿಂಗ್ ಆರ್ಕೇಡ್ ಈ ಮಾಲ್ ನ ವಿಶೇಷತೆ. ಇಡಿ ದಕ್ಷಿಣ ಭಾರತದಲ್ಲಿ ಇದನ್ನು ದೊಡ್ಡದಾದ ಗೇಮಿಂಗ್ ಆರ್ಕೇಡ್ ಎಂದು ನಂಬಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದ ವಿವಿಧ ಖ್ಯಾತ ಕಂಪನಿಗಳ ಉಡುಗೆಗಳ ಮುಗ್ಗಟ್ಟುಗಳು ಮತ್ತು ಖ್ಯಾತ ಹ್ಯಾಮ್ಲೇಸ್ ಉದ್ಯಮದ ಆಟಿಕೆಗಳ ಅಂಗಡಿಯನ್ನು ಇಲ್ಲಿ ಕಾಣಬಹುದಾಗಿದೆ. ವಿವಿಧ ಕ್ರೀಡೆಗಳನ್ನೂ ಇಲ್ಲಿ ಆಸ್ವಾದಿಸಬಹುದಾಗಿದ್ದು, ಬಂಪರ್ ಕಾರ್ ರೈಡ್ಸ್ ಮತ್ತು ಕರೌಸಲ್ ಕೂಡ ಇಲ್ಲಿ ಲಭ್ಯ. ಇನ್ನು ಉಪಹಾರ ಸವಿಯಬೇಕೆಂದರೆ ಪ್ರಖ್ಯಾತ ಔಟ್ ಲೆಟ್ ಗಳಾದ ಪಿಜ್ಜಾ ಹಟ್ ಮತ್ತು ಕೆ.ಎಫ್.ಸಿ ಗಳಿಗೆ ಭೇಟಿ ನೀಡಬಹುದು. ಇಷ್ಟೆ ಅಲ್ಲ, ಫುಡ್ ಕೋರ್ಟ್ ಕೂಡ ಇಲ್ಲಿದ್ದು, ವೈವಿಧ್ಯಮಯ ಖಾದ್ಯಗಳ ರುಚಿ ನೋಡಬಹುದು.  

ಎಂಟು ಪರದೆಗಳುಳ್ಳ 'ಸತ್ಯಂ ಸಿನೆಮಾಸ್' ಮಲ್ಟಿಪ್ಲೆಕ್ಸ್ ಇಲ್ಲಿದ್ದು, ನಿಮಗಿಷ್ಟವಾದ ಚಲನಚಿತ್ರಗಳನ್ನು ನೋಡಿ ಆನಂದಿಸಬಹುದು.

ಸ್ಪೆನ್ಸರ್ ಪ್ಲಾಜಾ

ಚೆನ್ನೈನ ಅಣ್ಣಾಸಲೈ ರಸ್ತೆಯಲ್ಲಿ ನೆಲೆಸಿದೆ ಸ್ಪೆನ್ಸರ್ ಪ್ಲಾಜಾ. ಇದೊಂದು ಶಾಪಿಂಗ್ ಮಾಲ್ ಆಗಿದ್ದು, ಇಂತಹದ್ದೊಂದು ಮಾಲ್ ಚೆನ್ನೈನಲ್ಲೆ ಪ್ರಪ್ರಥಮವಾಗಿ ನಿರ್ಮಾಣಗೊಂಡದ್ದಾಗಿದೆ. ಆದ್ದರಿಂದ ಇದು ನಗರದ ಪ್ರಸಿದ್ಧ ಲ್ಯಾಂಡ್ ಮಾರ್ಕ್ ಕೂಡ ಹೌದು. ಸುಮಾರು 1863-64 ರಲ್ಲಿ ಚಾರ್ಲ್ಸ್ ಡುರಾಂಟ್ ಮತ್ತು ಜೆ.ಡಬ್ಲ್ಯು.ಸ್ಪೆನ್ಸರ್ ಅವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಲಾಗಿದ್ದ, ಈ ಹಿಂದಿನ ಸ್ಪೆನ್ಸರ್ ಪ್ಲಾಜಾದ ಸ್ಥಳದಲ್ಲೆ ಇಂದು ಈ ಮಾಲ್ ನಿಂತಿದೆ. ಅಲ್ಲದೆ ಇಂದಿನ ಈ ಅಣ್ಣಾಸಲೈ ರಸ್ತೆಯನ್ನು ಹಿಂದೆ ಮೌಂಟ್ ರೋಡ್ ಎಂದು ಕರೆಯಲಾಗುತ್ತಿತ್ತು.  

ಭಾರತದ ಅತಿ ಹಳೆಯ ಶಾಪಿಂಗ್ ಮಾಲ್ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಇದನ್ನು 1985 ರಲ್ಲಿ ನವೀಕರಣಗೊಳಿಸಲಾಯಿತು. ಸುಮಾರು ಎಂಬತ್ತರ ದಶಕದಲ್ಲಿ ಇದು ಇಡಿ ದಕ್ಷಿಣ ಏಷಿಯಾದಲ್ಲೆ ಅತಿ ದೊಡ್ಡದಾದ ಶಾಪಿಂಗ್ ಮಾಲ್ ಆಗಿತ್ತು ಎನ್ನುವುದು ವಿಶೇಷ.

ವೆಸ್ಟ್ ಸೈಡ್ ನಂತಹ ಹಲವು ಅಂತಾರಾಷ್ಟ್ರೀಯ ಖ್ಯಾತಿಯ ಉಡುಪುಗಳ ಬ್ರ್ಯಾಂಡ್ ಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ, ನೈಕಿ, ಅಡಿಡಾಸ್, ವ್ಯಾನ್ ಹ್ಯುಸ್ಸೇನ್, ಅಲ್ಲನ್ ಸಾಲ್ಲೆ, ಪ್ರೊಲೈನ್, ಲೂಯಿಸ್ ಫಿಲಿಪ್ಪೆ, ಲಿವೈಸ್,ಸ್ವಾಚ್, ಪ್ಯಾಂಟಾಲೂನ್ಸ್ ಗಳಂತಹ ಇತರೆ ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳು ಕೂಡ ಇಲ್ಲಿ ಲಭ್ಯ. ಇವೆಲ್ಲವುಗಳ ಹೊರತಾಗಿ ಇಲ್ಲಿ ಬ್ಯಾಂಕಿಂಗ್ ಹಾಗು ಎ.ಟಿ.ಎಮ್ ಸೇವೆಗಳು ಕೂಡ ಲಭ್ಯವಿದೆ.

ಸಿಟಿ ಸೆಂಟರ್

ಚೆನ್ನೈನ ಮೈಲಾಪೋರ್ ಪ್ರದೇಶದಲ್ಲಿದೆ ಈ ಸಿಟಿ ಸೆಂಟರ್ ಮಾಲ್. 2006 ರಲ್ಲಿ ಪ್ರಾರಂಭವಾದ ಈ ಶಾಪಿಂಗ್ ಮಾಲ್ ಅನ್ನು ಚೆನ್ನೈನಲ್ಲೆ ಅತಿ ದುಬಾರಿಯಾದ ಖರೀದಿಯ ಸ್ಥಳವೆಂದು ನಂಬಾಲಗಿದೆ.

ಕೆಲವು ಪ್ರಮುಖ ಭಾರತೀಯ ಹಾಗು ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳನ್ನು ಇಲ್ಲಿ ಕಾಣಬಹುದಾಗಿದೆ. ಕೆಲವು ಪ್ರಮುಖವಾದವುಗಳೆಂದರೆ ಹೆಲ್ತ್ ಆಂಡ್ ಗ್ಲೋವ್(ಸೌಂದರ್ಯ ಮತ್ತು ಕ್ರಾಂತಿವರ್ಧಕಗಳ ಸ್ಟೋರ್), ಲಿಲಿಪುಟ್(ಮಕ್ಕಳ ಆಟಿಕೆ ಮತ್ತು ಉಡುಪುಗಳ ಸ್ಟೋರ್), ಲ್ಯಾಂಡ್ ಮಾರ್ಕ್(ಪುಸ್ತಕಗಳು), ಅಲ್ಲನ್ ಸಾಲ್ಲೆ, ಅಡಿಡಾಸ್, ಮೋಚಿ(ಪಾದರಕ್ಷೆಗಳು), ವಿಲ್ಸ್ ಲೈಫ್ ಸ್ಟೈಲ್(ಉಡುಪು), ವ್ಯಾನ್ ಹ್ಯುಸ್ಸೇನ್(ಪುರುಷರ ಉಡುಪುಗಳು) ಮತ್ತು ಲೈಫ್ ಸ್ಟೈಲ್. ಅಲ್ಲದೆ ವೈವಿಧ್ಯಮಯವಾದ ಮಿಠಾಯಿಗಳ ಪ್ರತ್ಯೇಕವಾದ ಅಂಗಡಿ ಮುಗ್ಗಟ್ಟುಗಳು ಕೂಡ ಇಲ್ಲಿ ಲಭ್ಯ.

ಐನಾಕ್ಸ್ ಚಿತ್ರಮಂದಿರ ಈ ಶಾಪಿಂಗ್ ಮಾಲ್ ನ ಪ್ರಮುಖ ಆಕರ್ಷಣೆ. ವಾರದ ದಿನಗಳಲ್ಲಾಗಲಿ ಅಥವಾ ವಾರಾಂತ್ಯವಾಗಲಿ ಯಾವಾಗಲೂ ಇದು ತುಂಬಿ ತುಳುಕುತ್ತಿರುತ್ತದೆ. ಇನ್ನು ಮಾಲ್ ನಲ್ಲಿ ಸುತ್ತಾಡುತ್ತಾ ಹಸಿವಾದರೆ ಚಿಂತಿಸಬೇಕಾಗಿಲ್ಲ, ಸ್ವಲ್ಪ ಅತ್ತಿತ್ತ ಕಣ್ಣು ಹಾಯಿಸಿ ಕೆ.ಎಫ್.ಸಿ, ಪಿಜ್ಜಾ ಹಟ್, ಕಾಪರ್ ಚಿಮ್ನಿ, ಸಬ್ ವೆ, ಗಂಗೋತ್ರಿ ಮತ್ತು ಅರೇಬಿಯನ್ ಹಟ್ ಪ್ರತ್ಯಕ್ಷವಾಗುತ್ತವೆ. ಪ್ರತ್ಯೆಕವಾಗಿ ಮಕ್ಕಳಿಗೆ ಹಾಗು ಯುವಜನರಿಗೆ ಕ್ರೀಡಾ ವಿಭಾಗವೂ ಇದೆ.

ಗೊಲ್ಡ್ ಮಾಲ್

ಚೆನ್ನೈನಲ್ಲಿ ನೆಲೆಸಿದೆ ಈ ಪ್ರಸಿದ್ಧ ಗೊಲ್ಡ್ ಸೌಕ್ ಗ್ರ್ಯಾಂಡೆ ಮಾಲ್ ಅರ್ಥಾತ್ ಗೊಲ್ಡ್ ಮಾಲ್. ಕ್ರಿಸೆಂಟ್ ಇಂಜಿನೀಯರಿಂಗ್ ಕಾಲೇಜಿಗೆ ಹತ್ತಿರದಲ್ಲಿರುವ ಈ ಮಾಲ್ನಲ್ಲಿ ಭಾರತೀಯ ಹಾಗು ಅಂತಾರಾಷ್ಟ್ರೀಯ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಬಹುಪಾಲಿನಲ್ಲಿ ಅತಿ ದುಬಾರಿ ಬ್ರ್ಯಾಂಡ್ ಗಳನ್ನು ಇಲ್ಲಿ ಖರೀದಿಸಬಹುದಾಗಿದೆ. ಈ ಮಾಲ್ ಏರೇನ್ಸ್ ಗೊಲ್ಡ್ ಸೌಕ್ ಗ್ರುಪ್ ನ ಭಾಗವಾಗಿದ್ದು, ಇದರ ಮುಖ್ಯ ವಿಭಾಗವು ಹರಿಯಾಣದ ಗುರ್ಗಾಂವ್ ನಲ್ಲಿದೆ.

ಚೆನ್ನೈನ ಈ ಗೊಲ್ಡ್ ಮಾಲ್ ನಲ್ಲಿ ಹೈಪರ್ ಮಾರ್ಕೆಟ್, ಉಡುಪುಗಳ ಅಂಗಡಿಗಳು, ಕೈಗಡಿಯಾರ ಅಂಗಡಿಗಳು, ಆಭರಣದ ಅಂಗಡಿಗಳು ಮತ್ತು ಮಲ್ಟಿಪ್ಲೆಕ್ಸ್ ಗಳನ್ನು ಕಾಣಬಹುದು. ಇಲ್ಲಿ ದೊರಕುವ ಕೆಲವು ಪ್ರಮುಖ ಅಂತಾರಾಷ್ಟ್ರೀಯ ಬ್ರ್ಯಾಂಡ್ ಗಳನ್ನು ಹೆಸರಿಸಬಹುದಾದರೆ ಅವುಗಳು ಇಂತಿವೆ: ಟಿಸ್ಸಾಟ್, ರಾಡೊ, ಸಿಟಿಜನ್, ಕಾರ್ಬನ್, ವುಡ್ ಲ್ಯಾಂಡ್, ಲಿವೈಸ್, ಲ್ಯುಸೆರಾ, ಜಾನ್ ಪ್ಲೆಯರ್ಸ್, ನಾವಿಗೇಟರ್, ರಿಬಾಕ್, ಲಿಲಿಪುಟ್, ಒಮೇಗಾ, ಟ್ಯಾಗ್ ಹ್ಯೂರ್, ಅಡೋರಾ ಮತ್ತು ಮೊಂಟ್ ಬ್ಲಾಂಕ್. ಇನ್ನು ಭಾರತೀಯ ಬ್ರ್ಯಾಂಡ್ ಗಳೆಂದರೆ, ಕಿಯಾ, ನಿರ್ವಾಣಾ, ಸಂಗಿನಿ, ರೀಡ್ ಆಂಡ್ ಟೇಲರ್, ಸೈನಸ್, ಗ್ಯಾಲಾಕ್ಸಿ, ನಕ್ಷತ್ರ, ಟೈಮ್ಸ್ ಗಡಿಯಾರಗಳು, ಸುಲ್ತಾನ್ ಆಭರಣಗಳು, ವುಮ್ಮಿಡಿ ಬಂಗಾರು ಸ್ರಿಹರಿ ಸನ್ಸ್, ಜಿಮ್ಸನ್ ಗಡಿಯಾರಗಳು, ಮಲಬಾರ್ ಗೊಲ್ಡ್, ಎಲ್.ಕೆ.ಎಸ್ ಗೊಲ್ಡ್ ಹೌಸ್, ರೇವತಿ ಜೆವೆಲರ್ಸ್ ಮುಂತಾದವು.

ಇವುಗಳಲ್ಲದೆ ಈ ಮಾಲ್ ನಲ್ಲಿ ಪ್ಯಾಂಟಾಲೂನ್ ಸ್ಟೋರ್ ಅನ್ನು ಸಹ ಕಾಣಬಹುದಾಗಿದೆ.

ಅಲ್ಸಾ ಮಾಲ್

ಚೆನ್ನೈನ ಎಗ್ಮೋರ್ ಪಕ್ಕದಲ್ಲಿರುವ ರಸ್ತೆ(ಮಾಂಟಿಯೆಥ್ ರೋಡ್)ಯಲ್ಲಿ ನೆಲೆಸಿದೆ ಅಲ್ಸಾ ಮಾಲ್. ಪ್ರಖ್ಯಾತ ಸ್ಪೆನ್ಸರ್ ಪ್ಲಾಜಾ ನವೀಕರಣಗೊಳ್ಳುತ್ತಿದ್ದ ಸಂದರ್ಭದಲ್ಲೆ ಅಂದರೆ ಎಂಬತ್ತರ ದಶಕದಲ್ಲಿ ಇದನ್ನು ಸ್ಥಾಪಿಸಲಾಯಿತು. ಸ್ಪೆನ್ಸರ್ ಪ್ಲಾಜಾದ ನಂತರ ಚೆನ್ನೈನಲ್ಲಿ ಕಾಣಬಹುದಾದ ಹಳೆಯ ಮಾಲ್ ಇದು.

ಫ್ಯಾಷನ್ ಸ್ಟ್ರೀಟ್

ಯೋಗ್ಯ ಬೆಲೆ ಅಥವಾ ಕಡಿಮೆ ಬೆಲೆಯಲ್ಲಿ ಉತ್ತಮವಾದುದನ್ನು ಖರಿದಿಸಬೇಕೆನಿಸಿದರೆ, ಒಮ್ಮೆ ಭೇಟಿ ನೀಡಿ ಚೆನ್ನೈನ ಫ್ಯಾಷನ್ ಸ್ಟ್ರೀಟ್ ಅಥವಾ ಕಾಟನ್ ಸ್ಟ್ರೀಟ್ ಗೆ. ನಿಸ್ಸಂಶಯವಾಗಿ ಮಾಲ್ ಗಳಿಗಿಂತಲೂ ಅಧಿಕ ಜನದಟ್ಟಣೆ ಇಲ್ಲಿರುತ್ತದೆ.

ಉದ್ದವಾಗಿರುವ ಈ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಸಾಕಷ್ಟು ವ್ಯಾಪಾರಿಗಳು ವಿವಿಧ ಉಡುಪು, ವಸ್ತ್ರ, ವಸ್ತುಗಳನ್ನು ಉತ್ತಮ ಬೆಲೆಗೆ ಮಾರುತ್ತಿರುವುದನ್ನು ಗಮನಿಸಬಹುದು. ಆದ್ದರಿಂದ ಕಾಲೇಜ್ ಯುವಕ ಯುವತಿಯರಿಗೆ ಇದೊಂದು ಪ್ರಿತೀಯ ಶಾಪಿಂಗ್ ತಾಣ. ಇಲ್ಲಿ ದೊರೆಯುವ ಉಡುಗೆ ತೊಡುಗೆಗಳು ಕಡಿಮೆ ದುಬಾರಿಯಾಗಿರುವುದೂ ಅಲ್ಲದೆ ಆಧುನಿಕ ಕಾಲದ ಜೀವನ ಶೈಲಿಗೆ ತಕ್ಕಂತಿರುತ್ತವೆ. ಆದರೆ ಗಮನದಲ್ಲಿಡಬೇಕಾದ ಸಂಗತಿಯೆಂದರೆ ಚೌಕಾಸಿ ಎಂಬುದು ನಿಮ್ಮ ಖರಿದಿಯಲ್ಲಿ ಅವಿಭಾಜ್ಯ ಅಂಗವಾಗಿರಬೇಕು. ಇಲ್ಲವಾದರೆ ವ್ಯಾಪಾರಿಗಳು ನಿಮ್ಮಿಂದ ಯಥೇಚ್ಚವಾಗಿ ಸುಲಿಗೆ ಮಾಡಬಹುದು.

ಸಾಮಾನ್ಯವಾಗಿ ಇಲ್ಲಿನ ವ್ಯಾಪಾರಿಗಳು ಪ್ರತಿದಿನ ಬೆಳಿಗ್ಗೆ 11 ಘಂಟೆಗೆ ತಮ್ಮ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ತೆರೆಯುತ್ತಾರಾದರೂ, ಮಧ್ಯಾಹ್ನದ 2 ಘಂಟೆಯ ನಂತರವೆ ವ್ಯಾಪಾರ ವಹಿವಾಟುಗಳು ರಭಸತೆಯನ್ನು ಪಡೆಯುತ್ತದೆ. ಸಾರ್ವಜನಿಕ ರಜೆಗಳನ್ನು ಹೊರತುಪಡಿಸಿ ಎಲ್ಲ ದಿನಗಳಲ್ಲೂ ತೆರೆದಿರುವ ಈ ಸ್ಟ್ರೀಟ್ ರಾತ್ರಿ ಎಂಟು ಘಂಟೆಯವರೆಗೆ ಚಟುವೆಟಿಕೆಯಿಂದ ಕೂಡಿರುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat