ರೆವ್ಡಂಡವು ಅಲಿಬಾಗ್ ಬಳಿಯಿದ್ದು, ಚೌಲ್ ಗ್ರಾಮದಿಂದ 17 ಕಿ.ಮೀ ದೂರದಲ್ಲಿದೆ. ಈ ತಾಣವು ಐತಿಹಾಸಿಕ ಮಹತ್ವವನ್ನು ಪಡೆದಿದೆ. ಈ ಪ್ರದೇಶವು ಶಿವಾಜಿಯ ಆಳ್ವಿಕೆಯ ಕಾಲಕ್ಕೆ ಸೇರಿದಂತೆ ಕಾಣುವುದಾದರೂ, ಇದು ಆ ಕಾಲಕ್ಕೆ ಸೇರಿಲ್ಲ.
ಈ ಪ್ರದೇಶವು ಅಡಿಕೆ ಮರ ಮತ್ತು ತೆಂಗಿನ ಮರಗಳಿಂದ ಕಂಗೊಳಿಸುತ್ತದೆ. ಈ ಪ್ರದೇಶವನ್ನು ಸ್ಥಳೀಯರು ಮರಾಠಿಯಲ್ಲಿ ನರಲಚಿ ಬಾಗ್ ಎಂದು ಕರೆಯುತ್ತಾರೆ. ಬಕುಲಿ ಎಂಬ ಒಂದು ಬಗೆಯ ಸುಗಂಧಭರಿತ ಪುಷ್ಪವು ಈ ಪ್ರದೇಶದಲ್ಲಿ ವಿಶೇಷವಾಗಿ ಕಂಡು ಬರುತ್ತದೆ.
ರೆವ್ಡಂಡ ಬೀಚ್ ಸೌಂದರ್ಯಭರಿತವಾಗಿದ್ದು, ಪ್ರತ್ಯೇಕವಾಗಿ ಏಕಾಂತತೆಯಿಂದು ಕೂಡಿದೆ. ಇದು ಕಪ್ಪು ಮಣ್ಣಿನಿಂದ ಕೂಡಿದೆ. ಅಲ್ಲದೆ ಇದು ಗಾಳಿಯ ಕಾಟವಿಲ್ಲದ ಬೀಚ್ ಆಗಿದೆ.