Search
  • Follow NativePlanet
Share

ಚೌಲ್ - ಪೋರ್ಚುಗೀಸರ ನಗರ.

13

ಚೌಲ್ ಹಿಂದಿನ ದಿನಗಳಲ್ಲಿ  ಪೋರ್ಚುಗೀಸ್ ಭಾರತದ ಒಂದು ನಗರವಾಗಿತ್ತು. ಈಗ ಇದು ಪ್ರಮುಖವಾಗಿ ಅವಶೇಷಗಳು ಮತ್ತು ಸ್ಮಾರಕಗಳಿಂದ ತುಂಬಿದೆ. ಚೌಲ್ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ದಕ್ಷಿಣಕ್ಕೆ ಇದ್ದು, ಮುಂಬೈನಿಂದ 60 ಕಿ.ಮೀ ದೂರದಲ್ಲಿದೆ.

ಭಾರತದಲ್ಲಿ ಪೋರ್ಚುಗೀಸರು ಸುಮಾರು 500 ವರ್ಷಗಳ ಹಿಂದೆ 1521 ರಲ್ಲಿ ಚೌಲ್ ನಲ್ಲಿ ಪ್ರಥಮಬಾರಿಗೆ ತಮ್ಮ ನೆಲೆಯನ್ನು ಸ್ಥಾಪಿಸಿದರು ಎಂದು ಇತಿಹಾಸವು ನಮಗೆ ತಿಳಿಸುತ್ತದೆ. ನಂತರ ಈ ನಗರವನ್ನು ಅಹಮದ್ ನಗರದ ಸುಲ್ತಾನನಾದ ನಿಜಾಮ್ ಶಾಹಿಯು 1570 ರಲ್ಲಿ ನಾಶಗೊಳಿಸಿದನು. ಮುಂದೆ 1613 ರಲ್ಲಿ ಚೌಲ್ ನಗರವು ಪುನರ್ ನಿರ್ಮಾಣಗೊಂಡಿತು.

ಭೇಟಿ ನೀಡಬೇಕಾದ ಸ್ಥಳಗಳು

ಅಲಿಬಾಗ್ ಬಳಿಯಿರುವ ಈ ಯಾತ್ರಾ ಸ್ಥಳವು ಹಲವಾರು ರಾಜವಂಶಗಳ ಏಳಿಗೆಗೆ ಮತ್ತು ಪತನಕ್ಕೆ ಸಾಕ್ಷಿಯಾಗಿ ನಿಂತಿದೆ. ಈ ಊರಿನಲ್ಲಿ ಪೋರ್ಚುಗೀಸರ ಸ್ಮಾರಕಗಳು, ಹಳೆಯ ಚರ್ಚುಗಳು ಮತ್ತು ಸಿನಗಾಗ್ (ಯಹೂದ್ಯರ ಆರಾಧನಾ ಸ್ಥಳಗಳು) ಗಳು ತುಂಬಿ ತುಳುಕುತ್ತಿವೆ.

ಕೊರ್ಲೈ ಕೋಟೆಯ ಬಳಿಯಿರುವ ಚೌಲ ಕಡು ದೀಪದ ಗೋಪುರ (ಲೈಟ್ ಹೌಸ್) ನೋಡಲು ಅತ್ಯಂತ ಸುಂದರವಾದ ಸ್ಥಳವಾಗಿದೆ. ಕೊರ್ಲೈ ಕೋಟೆ ಮತ್ತು ಚೌಲ್ ಕೋಟೆಗಳೆರಡು ಒಟ್ಟಿಗೆ ನಿಮ್ಮನ್ನು ಗತಕಾಲಕ್ಕೆ ಕೊಂಡೊಯ್ಯುತ್ತವೆ.

ಪರಿಸರ ಪ್ರೇಮಿಗಳು ತಪ್ಪದೆ ಇಲ್ಲಿನ ರೆವ್ಡಂಡ ಬೀಚ್ ಗೆ ಭೇಟಿ ಕೊಡಬೇಕು. ನೀವು ಇಲ್ಲಿನ ನಯನ ಮನೋಹರವಾದ ದೃಶ್ಯ ವೈಭವವನ್ನು ಸವಿಯುತ್ತ, ದೂರ ದಿಗಂತವನ್ನು ವೀಕ್ಷಿಸುತ್ತ, ನಿಮ್ಮದೆ ಆದ ಆಲೋಚನೆಗಳ ನಡುವೆ ಏಕಾಂತದಲ್ಲಿ ಲೀನವಾಗಬಹುದು.

ಇಲ್ಲಿನ ದತ್ತ ಮಂದಿರವು ಕೇವಲ ಧಾರ್ಮಿಕ ಪ್ರಾಮುಖ್ಯತೆಯನ್ನಷ್ಟೆ ಅಲ್ಲದೆ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಈ ಸ್ಥಳದ ಮೇಲ್ಭಾಗದಿಂದ ಸುತ್ತ ಮುತ್ತಲ ಪ್ರದೇಶವನ್ನು ವೀಕ್ಷಿಸಿದರೆ ನೀವು ಖಂಡಿತ  ಮಂತ್ರ ಮುಗ್ಧರಾಗುತ್ತೀರಿ.

ಕೆಲವು ವಾಸ್ತವಾಂಶಗಳು

ಚೌಲ್ ನಲ್ಲಿ ವರ್ಷಾಪೂರ್ತಿ ಅತ್ಯಂತ ಆರಾಮದಾಯಕವಾದ ಹವಾಗುಣವಿರುತ್ತದೆ. ಇಲ್ಲಿನ ಹವಾಗುಣ ಯಾವುದೇ ಕಾಲದಲ್ಲೂ ಅಹಿತವನ್ನುಂಟು ಮಾಡುವುದಿಲ್ಲ. ಈ ಊರು ತನ್ನ ಬೆಚ್ಚನೆಯ ವಾತಾವರಣದಿಂದಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಚಳಿಗಾಲವು ಈ ಐತಿಹಾಸಿಕ ನಗರವನ್ನು ಸುತ್ತಿ ನೋಡಲು ತಕ್ಕ ಸಮಯವಾಗಿದೆ.

ಚೌಲ್ ನಗರವು ಎಲ್ಲ ಪ್ರಮುಖ ನಗರಗಳೊಂದಿಗೆ ಉತ್ತಮ ರಸ್ತೆ, ರೈಲು ಮತ್ತು ವಿಮಾನಯಾನ ಸಂಪರ್ಕವನ್ನು ಹೊಂದಿದೆ. ಈ ಪುಟ್ಟ ಚಿತ್ತಾಕರ್ಷಕವಾದ ನಗರವು ನೀವು ಸುತ್ತಾಡಲೆಂದು ನಿಮಗಾಗಿ ಕಾದು ಕುಳಿತಿದೆ. ಹೊರಡಿ ಚೌಲ್ ನಿಮಗಾಗಿ ಇತಿಹಾಸದಲ್ಲಿ ಲೀನವಾಗುವ ಅವಕಾಶವನ್ನು ಒದಗಿಸುತ್ತದೆ.

ಚೌಲ್ ಪ್ರಸಿದ್ಧವಾಗಿದೆ

ಚೌಲ್ ಹವಾಮಾನ

ಉತ್ತಮ ಸಮಯ ಚೌಲ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಚೌಲ್

  • ರಸ್ತೆಯ ಮೂಲಕ
    ಚೌಲ್ ಮುಂಬಯಿಯಿಂದ 108 ಕಿ.ಮೀ ದೂರದಲ್ಲಿ, ಅಲಿಬಾಗ್ ಗೆ ಸಮೀಪದಲ್ಲಿದೆ. ಇದು ಮುಂಬಯಿ-ಗೋವಾ ರಾಷ್ಟ್ರೀಯ ಹೆದ್ದಾರಿಯ ನಡುವೆ ನೆಲೆಸಿರುವುದರಿಂದ ಸುಲಭವಾಗಿ ಚೌಲ್ ತಲುಪಬಹುದು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಮತ್ತು ಕೆಲವು ಖಾಸಗಿ ಬಸ್ಸುಗಳು ಪ್ರತಿದಿನ ಮುಂಬಯಿ ಮತ್ತು ಪುಣೆಯಿಂದ ಚೌಲ್ ಗೆ ಹೋಗಿ ಬರುತ್ತಿರುತ್ತವೆ. ಕೆಲವು ಖಾಸಗಿ ಪ್ರವಾಸ ಆಯೋಜಕರು ಮತ್ತು ಸಂಘಟಕರು ಪ್ರತಿದಿನ ಮುಂಬಯಿ ಮತ್ತು ಪುಣೆಯಿಂದ ದೈನಂದಿನ ಪ್ರವಾಸಗಳನ್ನು ಚೌಲ್ ಗೆ ಆಯೋಜಿಸುತ್ತಿರುತ್ತಾರೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಚೌಲ್ ಗೆ ಸಮೀಪದ ರೈಲು ನಿಲ್ದಾಣವು ಪೆನ್ ನಲ್ಲಿದೆ. ಇದು ಚೌಲ್ ನಿಂದ 30 ಕಿ.ಮೀ ದೂರದಲ್ಲಿದೆ. ಪೆನ್ ನಿಲ್ದಾಣವು ಕೊಂಕಣ ರೈಲ್ವೆ ಹಾದಿಯಲ್ಲಿದ್ದು, ಮಹಾರಾಷ್ಟ್ರದೊಳಗಿನ ಮತ್ತು ಹೊರರಾಜ್ಯದ ಪ್ರಮುಖ ರಾಜ್ಯಗಳೊಂದಿಗೆ ಉತ್ತಮ ರೈಲು ಸಂಪರ್ಕ ಸೇವೆಯನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮುಂಬಯಿಯ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಚೌಲ್ ಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಮುಂಬಯಿಯ ಈ ವಿಮಾನ ನಿಲ್ದಾಣವು ಎಲ್ಲ ರಾಜ್ಯಗಳ ಪ್ರಮುಖ ನಗರಗಳಿಂದ ದೈನಂದಿನ ಮತ್ತು ನಿರಂತರ ವಿಮಾನಗಳ ಸೌಲಭ್ಯವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri