ಗುಣಸೇರಾ ಗುಡ್ಡದ ತುದಿಯಲ್ಲಿರುವ ಗುಹೆಯ ಒಳಗೆ ಇರುವ ಗುಣಸೇರಾ ದೇವಿ ದೇವಸ್ಥಾನ ಇಲ್ಲಿನ ಇನ್ನೊಂದು ಶ್ರದ್ಧಾ ಭಕ್ತಿ ಸ್ಥಳ. ಪ್ರಸಿದ್ಧ ಆಸರ್ಚುಲಾ ದೇವಾಲಯವೂ ಇಲ್ಲೇ ಸನಿಹದಲ್ಲಿದೆ. ಇಡೀ ದೇವಾಲಯದ ತುಂಬ ಕಲ್ಲಿನ ಸುಂದರ ಕೆತ್ತನೆಗಳಲ್ಲಿ ಹಲವಾರು ದೇವತೆಗಳ ದರ್ಶನವಾಗುತ್ತದೆ. ಈ ಕಲ್ಲಿನ ಕೆತ್ತನೆಗಳನ್ನು ಕೋಲ ರಾಜ 1 ನೇ ಕಾರ್ತಿಕೇಯ ಪುರ ಅನುಸ್ಥಾಪಿಸಿದ ಎಂಬ ನಂಬಿಕೆಯಿದೆ. ಗುಪ್ತರ ಆಳ್ವಿಕೆಯ ಕಾಲದಲ್ಲಿ ಹೆಚ್ಚಿನ ಕೆತ್ತನೆಗಳನ್ನು ಸ್ಥಾಪಿಸಲಾಯಿತು ಎಂದೂ ಹೇಳಲಾಗುತ್ತದೆ.