ಸಜನ್ಗಡ್ ಒಂದು ಸಣ್ಣ ಹಳ್ಳಿಯಾಗಿದ್ದು ಚಂಡಿಪುರದಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ ಮತ್ತು ನೀಲಗಿರಿ ಬೆಟ್ಟದಿಂದ ಐದು ಕಿಲೋಮೀಟರ್ ದೂರದಲ್ಲಿದೆ. ಸಜನ್ಗಡ್ ದೇವಿಯ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಚಂಡಿಯನ್ನು ಬುದಾರ್ ಚಂಡಿ ಎಂದು ಹೆಸರುವಾಸಿಯಾಗಿದ್ದು ಹಳ್ಳಿಯ ಹೃದಯ ಭಾಗದಲ್ಲಿದೆ. ಈ ದೇವಾಲಯದಲ್ಲಿ ಹಲವು ದೇವರ ಶಿಲ್ಪಕಲೆಯ ಮೂರ್ತಿಗಳಿವೆ, ಇದನ್ನು ಹಳ್ಳಿಯ ಶಕ್ತಿ ಎಂದು ನಂಬಲಾಗುತ್ತದೆ. ಇದರೆಲ್ಲದರ ಹೊರತಾಗಿ ಹಳ್ಳಿಯಲ್ಲಿ ಪ್ರಾಕೃತಿಕ ಸೌಂದರ್ಯದ ಹೊಸ ಲೋಕವನ್ನೇ ಕಾಣಬಹುದಾಗಿದೆ.
ಈ ದೇವಾಲಯ ಪ್ರವೇಶಿಸಿದಾಗ, ಪ್ರವಾಸಿಗರು ತಮ್ಮ ಎಲ್ಲಾ ಕಷ್ಣ, ಕಾರ್ಪಣ್ಯ, ವೈಯಕ್ತಿಕ ತೊಂದರೆಯನ್ನು ಮರೆಯುತ್ತಾರೆ. ಹಲವು ಪುರಾತನ ವಸ್ತುಗಳು ಇಲ್ಲಿ ಲಭ್ಯವಿದ್ದು, ಈ ವಿಷಯದಲ್ಲಿ ಆಸಕ್ತಿ ಇರುವವರು ಇದರ ಲಾಭ ಪಡೆಯ ಬಹುದಾಗಿದೆ. ಜನರು ಇಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸಲು ಬರುತ್ತಾರೆ.