ಪಂಚಲಿಂಗೇಶ್ವರ ಚಂಡಿಪುರದಿಂದ 36 ಕಿಲೋಮೀಟರ್ ದೂರದಲ್ಲಿದೆ. ಇದು ಹಚ್ಚ ಹಸಿರಿನ ರಾಕ್ಷಸಾಕಾರದ ಬೆಟ್ಟಗಳು, ಪಂಚಲಿಂಗೇಶ್ವರ ಪ್ರವಾಸಿಗರಿಗೆ ನಿಶ್ಯಬ್ದವಾದ, ಏಕಾಂತವಾದ ವಾತಾವರಣದ ಅನುಭವಾಗುತ್ತದೆ. ಈ ಪ್ರದೇಶವು ಶಿವ ದೇವರ ದೇವಾಲಯಕ್ಕಾಗಿ ಹೆಸರುವಾಸಿಯಾಗಿದ್ದು ಬೆಟ್ಟದ ಮೇಲಿದೆ.
ಐದು ಶಿವನ ಲಿಂಗವು ಎರಡು ಬಂಡೆಯ ನಡುವೆ ಉದ್ಭವಾಗಿದೆ. ನೀರಿನ ಧಾರೆಗಳು ಲಿಂಗದ ಮೇಲೆ ಬೀಳುತ್ತದೆ. ಈ ದೇವಾಲಯದ ಬದಿಯಲ್ಲಿ ಹಲವು ಅರ್ಚಕರು ಪೂಜಾ ಕೈಂಕರ್ಯಗಳನ್ನು ನಡೆಸುತ್ತಾರೆ.
ಈ ದೇವಾಲಯಕ್ಕೆ ಭೇಟಿ ನೀಡಲು ಯಾತ್ರಾರ್ಥಿಗಳು ಬೆಟ್ಟದ ತಪ್ಪಲಿನಿಂದ 263 ಮೆಟ್ಟಲು ಹತ್ತ ಬೇಕಾಗುತ್ತದೆ. ಹಲವು ಸಣ್ಣ ಸಣ್ಣ ನೀರಿನ ಧಾರೆಗಳು ಇಲ್ಲಿ ಧುಮುಕುತ್ತದೆ. ಇದು ಪ್ರವಾಸಿಗರಿಗೆ ನೆಚ್ಚಿನ ಪಿಕ್ನಿಕ್ ತಾಣವಾಗಿದೆ. ಪಿಕ್ನಿಕ್ ನಡೆಸಲು ಬೆಟ್ಟದ ತಪ್ಪಲಿನಲ್ಲಿ ಮಾತ್ರ ಅನುಮತಿ ನೀಡಲಾಗುತ್ತದೆ.