ಚಂಡಿಪುರದಿಂದ 32 ಕಿಲೋಮೀಟರ ದೂರದಲ್ಲಿ ನೀಲಗಿರಿಯಿದೆ, ಈ ಪಟ್ಟಣ ನೀಲಗಿರಿ ಬೆಟ್ಟಕ್ಕೆ ಹತ್ತಿರಕ್ಕೆ ಇದೆ. ನೀಲಗಿರಿ ಹೆಸರೇ ಹೇಳುವಂತೆ ’ನೀಲಿ ಬೆಟ್ಟ’. ನೀಲಿ ಬಣ್ಣದಾಗಿರುವುದಾಗಿರುವುದರಿಂದ ಇದಕ್ಕೆ ನೀಲಗಿರಿ ಎಂದು ಹೆಸರು ಬಂದಿದೆ. ಈ ಬೆಟ್ಟದ ಮೇಲೆ ಪಂಚಲಿಂಗೇಶ್ವರ ದೇವಾಲಯವಿದೆ. ಅದ್ದೂರಿ ಅರಮನೆ, ಜಗನ್ನಾಥ ದೇವಾಲಯ ಇಲ್ಲಿಗೆ ಹತ್ತಿರದಲ್ಲಿದ್ದು ಪ್ರಮುಖ ಆಕರ್ಷಣೆಯಾಗಿದೆ.
ಪ್ರಾಚೀನ ಚಿನ್ನ ಮತ್ತು ವಜ್ರದ ಆಭರಣಗಳು ಜೊತೆಗೆ ನೀಲಗಿರಿಯ ರಾಜರು ಮತ್ತು ರಾಣಿಯರು ಧರಿಸಿದ ಉಡುಗೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಹಲವಾರು ತಿಂಡಿಯ ಅಂಗಡಿಗಳೂ ರಸ್ತೆಯುದ್ದಕ್ಕೂ ಲಭ್ಯವಿದೆ. ಅತ್ಯಾಕರ್ಷಕವಾದ ಖುಂಖಟ್ ಅಣೆಕಟ್ಟು ಕೂಡಾ ಹತ್ತಿರದಲ್ಲಿದ್ದು ಅದನ್ನೂ ವೀಕ್ಷಿಸಬಹುದಾಗಿದೆ. ಹಳೆಯ ಲೈಟ್ ಹೌಸ್ ಅಣೆಕಟ್ಟಿನ ಹತ್ತಿರದಲ್ಲಿದೆ. ನೀಲಗಿರಿ ಸಿಹಿ ತಿನಿಸುಗಳಿಗೂ ಹೆಸರುವಾಸಿ. ಬಾಯಿ ನೀರೂರಿಸುವ ಸಿಹಿ ತಿನುಸುಗಳನ್ನು ಕಾಚರಿ ಬಜಾರಿನಲ್ಲಿ ಪಡೆಯಬಹುದಾಗಿದೆ.