ಕನ್ಸಲ್ ಹಳ್ಳಿಯಿಂದ ಸ್ವಲ್ಪ ದೂರದಲ್ಲೇ ನೆಪ್ಲಿ ಇದೆ. 3245 ಹೆಕ್ಟೇರ್ ನ ಅರಣ್ಯ ಪ್ರದೇಶ ಚಂದೀಗಢ್ ನ ಉತ್ತರದ ಅಂಚಿನಲ್ಲಿದೆ. ಹರ್ಯಾಣದಿಂದ ಲೀಸ್ ಪಡೆಯಲಾಗಿರುವ ಈ ನೈಸರ್ಗಿಕ ಮೀಸಲು ಅರಣ್ಯವು ಕನ್ಸಲ್ ಅರಣ್ಯಕ್ಕಿಂತ ದಟ್ಟ ಹಾಗೂ ವಿಸ್ತಾರವಾಗಿದೆ. ಸಾರಂಗ, ಕತ್ತೆಕಿರುಬ, ನರಿ, ಮೊಲ, ನೀಲಜಿಂಕೆ ಸಹಿತ ವೈವಿಧ್ಯಮ ವನ್ಯಪ್ರಾಣಿಗಳಿವೆ.
ಚಂದೀಗಢ್ ನ ಅರಣ್ಯ ಉಪಸಂರಕ್ಷಣಾಧಿಕಾರಿಯಿಂದ ಪಡೆದ ಪಾಸ್ ಮೂಲಕ ಪ್ರವಾಸಿಗರು ಪ್ರವೇಶಿಸಿದರೆ ನೆಪ್ಲಿಯ ಸಸ್ಯ ಹಾಗೂ ಪ್ರಾಣಿ ಸಂಪತ್ತನ್ನು ನೋಡಬಹುದಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ 8 ಕಿ.ಮೀ. ಉದ್ದದ ಕಾಡು ಚಾರಣ ಮತ್ತು ಕಡಿದಾದ ನೈಸರ್ಗಿಕ ಹಾದಿ ಕನ್ಸಾಲ್ ನಿಂದ ನೆಪ್ಲಿ ಲಾಡ್ಜ್ ನ್ನು ಸಂಪರ್ಕಿಸುತ್ತದೆ.