ಇಲ್ಲಿನ ಜನರ ನಂಬಿಕೆಯ ಪ್ರಕಾರ, ಇದು ಥಾಸಿಯಾಮಾನ ಮಿಥುನ್ ಎಂಬ ಆಕಳು ಕರುವಿಗೆ ಜನ್ಮ ನೀಡಿದ ಸ್ಥಳವಾಗಿದೆ. ಈ ಪ್ರಸ್ಥಭೂಮಿಯು ಇರುವ ಎತ್ತರ ನೋಡಿದರೆ ಇಲ್ಲಿ ಮಿಥುನ್ ಆಕಳು ಮೇಲೆ ಹತ್ತಲು ಸಾಧ್ಯವಿಲ್ಲ. ಆದರೆ ಇಲ್ಲಿನ ನಂಬಿಕೆಯ ಪ್ರಕಾರ, ಥಾಸಿಯಾಮಾನು ಚಾಂಗ್ಲ್ ತಿನ್ಲೇರಿ ಎಂಬ ಹೆಸರಿನ ಯಕ್ಷಿಣಿಯ ಜೊತೆಗೆ ಸಂಬಂಧ ಹೊಂದಿದ್ದ ಹಾಗೂ ಈ ಯಕ್ಷಿಣಿಯೆ ಥಾಸಿಯಾಮಾನಿಗೆ ಒಂದು ವರದಾನವನ್ನು ನೀಡಿತ್ತು. ಇದರ ಪ್ರಕಾರ ಆತನ ಮಿಥುನ್ ಹೆಚ್ಚು ಕರುಗಳನ್ನು ಹೆತ್ತು ಆತನನ್ನು ಶ್ರೀಮಂತನನ್ನಾಗಿ ಮಾಡುತ್ತದೆ. ಅಲ್ಲದೆ ಸ್ವತಃ ಯಕ್ಷಿಣಿಯೆ ಮಿಥುನ್ ನನ್ನು ಸುರಕ್ಷಿತವಾಗಿ ಇಷ್ಟು ಎತ್ತರಕ್ಕೆ ಮುನ್ನಡೆಸಿದಳು. ಇದರಿಂದ ಹುಲಿಗಳಿಂದಲೂ ಅದಕ್ಕೆ ರಕ್ಷಣೆ ದೊರೆಯಿತು.
ಥಾಸಿಯಾಮಾ ಸೆನೊ ನೈಹ್ನಾ, ಚಂಫೈ ನಿಂದ ಸುಮಾರು 86 ಕಿಲೋಮೀಟರ್ ದೂರದಲ್ಲಿದ್ದು, ವಾಪೈ ಹಳ್ಳಿಯಲ್ಲಿ, ಕರಗ್ಗಿ craggy ಬೆಟ್ಟದ ಮೇಲೆನ ಸುಂದರ ಪ್ರಸ್ಥಭೂಮಿಯಾಗಿದ್ದು. ಈ ಪ್ರಸ್ಥಭೂಮಿಯ ಭೇಟಿ ವಾಸ್ತವವಾಗಿ ಒಂದು ಅತ್ಯಾಕರ್ಷಕ ಮತ್ತು ರೋಮಾಂಚಕ ಅನುಭವವನ್ನು ನೀಡುತ್ತದೆ.
ಥಾಸಿಯಾಮಾ ಸೆನೊ ನೈಹ್ನಾ ತಲುಪಲು, ಚಂಫೈ ನಿಂದ ಪ್ರವಾಸಿ ವಾಹನಗಳನ್ನು ಬಾಡಿಗೆಗೆ ತೆಗೆದುಕೊಂಡು ಹೋಗಬಹುದು.