ಹಳ್ಳಿ ಸಫಾರಿಯು ನಿಮ್ಮನ್ನು ಚಂಬಲ್ ವನ್ಯಧಾಮಕ್ಕೆ ಸಮೀಪದ ಹಳ್ಳಿಗಳಲ್ಲಿ ಸುತ್ತಾಡುವ ಅವಕಾಶವನ್ನು ಒದಗಿಸುತ್ತದೆ. ಈ ಹಳ್ಳಿಗಳು ನಿಮಗೆ ಭಾರತದ ಹಳ್ಳಿಗಾಡು ಜೀವನದ ನೈಜ ಪರಿಚಯವನ್ನು ಮತ್ತು ಅವುಗಳ ಕುರಿತಾದ ಒಳನೋಟವನ್ನು ಒದಗಿಸುತ್ತವೆ. ಇವುಗಳ ಮೂಲಕ ಹಾದು ಹೋಗುವಾಗ ನೀವು ಕುಂಬಾರರು ಮಟ್ಕಾ (ಮಡಿಕೆಗಳು), ಖುಲ್ಲಾರಗಳು (ಮಣ್ಣಿನ ಬಟ್ಟಲುಗಳು) ಮತ್ತು ಇನ್ನಿತರ ಸಾಂಪ್ರದಾಯಿಕ ವಸ್ತುಗಳನ್ನು ಮಾಡುತ್ತಿರುವುದನ್ನು ನೀವು ನೋಡಬಹುದು. ಇದರ ಜೊತೆಗೆ ಚಮ್ಮಾರರು ಶೂ ಮುಂತಾದ ಚರ್ಮದ ಉತ್ಪನ್ನಗಳ ತಯಾರಿಯಲ್ಲಿ ತೊಡಗಿರುವುದನ್ನು ಸಹ ನೋಡಬಹುದು. ಇಲ್ಲಿನ ಅಂಗಡಿಗಳಲ್ಲಿ ಸಾಂಪ್ರದಾಯಿಕ ಸಿಹಿ ತಿನಿಸುಗಳನ್ನು, ಉಡುಪುಗಳನ್ನು ಮತ್ತು ಜಿಗ್ಗೆರಿಗಳನ್ನು ಮಾರಲಾಗುತ್ತದೆ.
ಹಳ್ಳಿ ಸಫಾರಿಯು ಈ ವನ್ಯಧಾಮದ ನಯನ ಮನೋಹರವಾದ ಹಾದಿಗಳ ಮೂಲಕ ನಿಮ್ಮನ್ನು ಕೊಂಡೊಯ್ಯುತ್ತದೆ. ಹೀಗೆ ಸಾಗುವಾಗ ನೀವು ಹಲವು ಪ್ರಾಣಿ ಮತ್ತು ಪಕ್ಷಿಗಳನ್ನು ನೋಡಬಹುದು.ಸ್ಥಳೀಯ ಜನರ ಜೀವನ ಶೈಲಿ ಮತ್ತು ರೀತಿ-ರಿವಾಜುಗಳನ್ನು ಅರಿತು ಕೊಳ್ಳಲು ಈ ಹಳ್ಳಿ ಸಫಾರಿಯು ನಿಮಗೆ ಅನುಖೂಲ ಮಾಡಿಕೊಡುತ್ತದೆ. ಇಲ್ಲಿನ ಜನ ಜೀವನವು ತುಂಬಾ ನಿಧಾನ ಗತಿಯಲ್ಲಿ ಸಾಗುತ್ತದೆ ಹಾಗು ಇಲ್ಲಿನವರು ಪರಸ್ಪರರನ್ನು ಅರಿತು ಕೊಂಡಿರುತ್ತಾರೆ. ಇಲ್ಲಿನ ಸ್ಥಳೀಯರು ಅತಿಥಿ ಸತ್ಕಾರಕ್ಕೆ ಹೆಸರುವಾಸಿ. ಸ್ನೇಹ ಪರರಾದ ಇವರು ನಿಮಗೆ ಬೇಕಾದ ಮಾಹಿತಿ ಮತ್ತು ಉತ್ತರಗಳಿಗು ಮೀರಿದ ಅನುಭವಗಳನ್ನು ನಿಮಗಾಗಿ ಒದಗಿಸುತ್ತಾರೆ.