Search
  • Follow NativePlanet
Share
ಮುಖಪುಟ » ಸ್ಥಳಗಳು » ಚಂಬಾ » ಹವಾಮಾನ

ಚಂಬಾ ಹವಾಮಾನ

ಗರಿಷ್ಠ ಚಳಿಗಾಲದ ತಿಂಗಳುಗಳನ್ನು ಹೊರತು ಪಡಿಸಿ ಚಂಬಾಗೆ ವರ್ಷದ ಯಾವುದೇ ಸಮಯದಲ್ಲಿ ಭೇಟಿ ಮಾಡಬಹುದು. ಮಾರ್ಚ್ ಮತ್ತು ಜೂನ್ ನಡುವಿನ ಅವಧಿಯಲ್ಲಿ ಅನುಕೂಲಕರ ಹವಾಗುಣವಿರುವ ಕಾರಣದಿಂದ ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಇದಲ್ಲದೆ, ಜುಲೈ ಮತ್ತು ಅಕ್ಟೋಬರ್ಗಳ ನಡುವಿನ ದಿನಗಳನ್ನು ಪ್ರವಾಸಕ್ಕೆ ಸೂಕ್ತವೆಂದು ಪರಿಗಣಿಸಲಾಗುತ್ತದೆ.

ಬೇಸಿಗೆಗಾಲ

(ಮಾರ್ಚ್-ಜೂನ್  ): ಚಂಬಾದಲ್ಲಿ ಬೇಸಿಗೆಯ ಋತುಮಾನ ಮಾರ್ಚ್ ತಿಂಗಳಲ್ಲಿ ಆರಂಭವಾಗಿ ಜೂನ್ ತನಕ ಇರುತ್ತದೆ. ಈ ಋತುವಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ, 30°C ಮತ್ತು 14°C  ದಾಖಲಾಗಿದ್ದು, ಈ ಕಾಲದಲ್ಲಿ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಚಂಬಾ ಗಿರಿಧಾಮಕ್ಕೆ  ಭೇಟಿನೀಡುವರು.

ಮಳೆಗಾಲ

(ಜುಲೈ-ಅಕ್ಟೋಬರ್): ಚಂಬಾದಲ್ಲಿ ಮಾನ್ಸೂನ್ ಜುಲೈ ಮತ್ತು ಅಕ್ಟೋಬರ್ ತಿಂಗಳುಗಳ ನಡುವೆ ವಿಸ್ತರಿಸಿರುತ್ತದೆ. ಆದರೆ ಈ  ಪ್ರದೇಶವು ಮಳೆಗಾಲದಲ್ಲಿ ಸಾಧಾರಣ ಅಥವಾ ಕಡಿಮೆ ಮಳೆ ಪಡೆಯುತ್ತದೆ.

ಚಳಿಗಾಲ

(ನವೆಂಬರ್-ಫೆಬ್ರವರಿ): ಚಳಿಗಾಲವು ನವೆಂಬರ್ನಲ್ಲಿ ಆರಂಭಗೊಂಡು ಫೆಬ್ರವರಿ ತನಕ ಇರುತ್ತದೆ. ಈ ಋತುವಿನಲ್ಲಿ ಚಂಬಾದ ಕನಿಷ್ಠ ತಾಪಮಾನ 4°C ಇರುತ್ತಿದ್ದು, ಸಾಮಾನ್ಯವಾಗಿ ಜನವರಿ ಮತ್ತು ಫೆಬ್ರವರಿಯಲ್ಲಿ ಹಿಮಪಾತವನ್ನು ಅನುಭವಿಸುತ್ತದೆ, ಆದರೆ ಕಳೆದ ಕೆಲವು ವರ್ಷಗಳಿಂದ, ಚಂಬಾದಲ್ಲಿ ಯಾವುದೇ ಹಿಮಪಾತವು ಕಂಡುಬಂದಿಲ್ಲ.