ಗುರುದ್ವಾರ ಸಾಹಿಬ್ ಅನ್ನು 1907 ರಲ್ಲಿ ನಿರ್ಮಿಸಲಾಯಿತು. ಚೈಲ್ ಬಜಾರಿನಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಪಾಂಢವಾ ಬೆಟ್ಟದಲ್ಲಿರುವ ಈ ಗುರುದ್ವಾರಾವು ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಇದು ಸಿಖ್ ದೇವಾಲಯವಾದರೂ, ಇದರ ವಾಸ್ತುಶಿಲ್ಪ ಗೋವಾ ಚರ್ಚ್ ಗಳ ವಿನ್ಯಾಸವನ್ನು ಹೋಲುತ್ತದೆ. ಸುತ್ತಲೂ ಹಸಿರು ಹುಲ್ಲುಹಾಸುಗಳಿಂದ ಈ ಹಳದಿ ಬಣ್ಣದ ರಚನೆಯು ಸುತ್ತಮುತ್ತಲಿನ ಅದ್ಭುತ ನೋಟವನ್ನು ಒದಗಿಸುತ್ತದೆ. ಪ್ರತಿ ದಿನ ಹಲವಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಎರಡು ಗೋಪುರದ ರಚನೆ, ಗುರುದ್ವಾರದ ಮುಖ್ಯ ಪ್ರವೇಶ ದ್ವಾರವನ್ನು ಮಹತ್ವ ಪೂರ್ಣಗೊಳಿಸುತ್ತದೆ.