ಚೈಲ್ ಸೇನಾಪಡೆಯ ಶಾಲೆ, ಚೈಲ್ ಸಮುದ್ರ ಮಟ್ಟದಿಂದ 2144 ಮೀಟರ್ ಎತ್ತರದಲ್ಲಿರುವ ಜನಪ್ರಿಯ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಇದು ಮೊದಲ ವಿಶ್ವ ಯುದ್ಧದ ನಂತರ, 1922 ರಲ್ಲಿ ನಿರ್ಮಿಸಲಾದ ಒಂದು ಪ್ರಾಚೀನ ಶಾಲೆಯಾಗಿದೆ. ಕಿಂಗ್ ಜಾರ್ಜ್ ವಿ ಅವರು ದೇಶಭಕ್ತಿ ನಿಧಿಯಿಂದ ರೂ. 250,000 ಗಳನ್ನು ಒಂದು ಕೊಡುಗೆಯ ರೂಪದಲ್ಲಿ ಈ ಶಾಲೆಯ ನಿರ್ಮಾಣಕ್ಕೆ ನೀಡಿದ್ದರು ಎಂದು ಹೇಳಲಾಗುತ್ತದೆ. ಆದ್ದರಿಂದ, ಕೆಡೆಟ್ (ಶಾಲೆಯ ವಿದ್ಯಾರ್ಥಿಗಳು) ಗಳನ್ನು ’ಜಾರ್ಜಿಯನ್ನರು’ ಎಂದು ಕರೆಯಲಾಗುತ್ತದೆ. ಈ ಶಾಲೆಯು ವಿಶ್ವದ ಅತಿ ಎತ್ತರದ ಕ್ರಿಕೆಟ್ ಮತ್ತು ಪೊಲೊ ಮೈದಾನದ ಹೊಂದಿರುವ ಕಾರಣ ಇನ್ನಷ್ಟು ಪ್ರಸಿದ್ಧವಾಗಿದೆ.