ಸಮುದ್ರವು ಆಕಾಶದೊಂದಿಗೆ ಜೋಡಿಕೊಂಡಂತೆ ರಮಣೀಯವಾಗಿ ಕಾಣುವ ಕ್ಷಿತಿಜ ನೇಸರ ಧಾಮವು ಇಲ್ಲಿದೆ. ಗುಡ್ಡದ ಮೇಲಿರುವ ಈ ಧಾಮವು ಅರಬ್ಬೀ ಸಮುದ್ರದ ಸುಂದರ ನೋಟದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಾಜ್ಯ ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿರುವ ಈ ಧಾಮದಲ್ಲಿ ವಸತಿ ವ್ಯವಸ್ಥೆಗೆ ಬಾಡಿಗೆಗೆ ರೂಮುಗಳು ಸಿಗುತ್ತವೆ. ಅರಣ್ಯ ಇಲಾಖೆಯೇ ನಿರ್ವಹಿಸುತ್ತಿರುವ ಈ ವಸತಿ ಗೃಹಗಳಲ್ಲಿ ಊಟದ ವ್ಯವಸ್ಥೆಯೂ ಇದೆ. ಬೈಂದೂರಿಗೆ ಬರುವ ಪ್ರವಾಸಿಗರು ಇಲ್ಲಿ ಒಂದೆರಡು ದಿನ ಕಳೆದು ದಣಿವಾರಿಸಿಕೊಂಡು ಹೋಗಬಹುದಾಗಿದೆ.