Search
  • Follow NativePlanet
Share
ಮುಖಪುಟ » ಸ್ಥಳಗಳು » ಬುಂದಿ » ಹವಾಮಾನ

ಬುಂದಿ ಹವಾಮಾನ

ಅಕ್ಟೋಬರಿನಿಮದ ಮಾರ್ಚ್‌‌ನ ಅವಧಿಯು ಉತ್ತಮವಾಗಿದ್ದು, ಈ ಅವಧಿಯಲ್ಲಿ ವಾತಾವರಣವು ಪ್ರಶಾಂತವಾಗಿರುತ್ತದೆ. ಜೂನ್‌ನಿಂದ ಸಪ್ಟೆಂಬರ‍್ ತಿಂಗಳ ಅವಧಿ ಕೂಡಾ ಸಣ್ಣ ಟ್ರಿಪ್‌ಗಳಿಗೆ ಸೂಕ್ರವಾಗಿದ್ದು, ಈ ಸಂದರ್ಭದಲ್ಲಿ ವಾತಾವರಣವು ತಂಪಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್‌‌ನಿಂದ ಮೇ): ಬುಂದಿಯಲ್ಲಿನ ವಾತಾವರಣವು ಅತಿ ಉಷ್ಣದ್ದಾಗಿದ್ದು, ಮಾರ್ಚ್‌‌ನಿಂದ ಆರಂಭವಾಗಿ ಮೇಯಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿನ ತಾಪಮಾನವು ಈ ಅವಧಿಯಲ್ಲಿ 35 ಡಿಗ್ರಿಗಳಿಂದ 42 ಡಿಗ್ರಿಗಳವರೆಗೆ ಇರುತ್ತದೆ. ಅತ್ಯಂತ ಉಷ್ಣ ವಾತಾವರಣದಿಂದಾಗಿ ಪ್ರವಾಸಿಗರು ಈ ಅವಧಿಯಲ್ಲಿ ಬುಂದಿಗೆ ಪ್ರವಾಸ ಕೈಗೊಳ್ಳುವುದು ಸೂಕ್ತವಲ್ಲ.

ಮಳೆಗಾಲ

(ಜೂನ್‌ನಿಂದ ಸಪ್ಟೆಂಬರ‍್): ಬುಂದಿಯಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಗಾಲದ ಸಂದರ್ಭದಲ್ಲಿ ಮಳೆಯಾಗುತ್ತದೆ. ಮಳೆಯಿಂದಾಗಿ ಒಣ ವಾತಾವರಣವು ತಂಪಾಗುತ್ತದೆ.

ಚಳಿಗಾಲ

(ನವೆಂಬರಿನಿಂದ ಫೆಬ್ರುವರಿ): ಬುಂದಿಯಲ್ಲಿ ಚಳಿಗಾಲ ಆರಂಭವಾಗುವುದು ನವೆಂಬರಿನಲ್ಲಿ ಮತ್ತು ಕೊನೆಗೊಳ್ಳುವುದು ಫೆಬ್ರುವರಿಯಲ್ಲಿ. ಈ ಸಂದರ್ಭದಲ್ಲಿ ಇಲ್ಲಿನ ವಾತಾವರಣವು ತಂಪಾಗಿ  ಪ್ರಶಾಂತವಾಗಿರುತ್ತದೆ. ಈ ಅವಧಿಯಲ್ಲಿ ತಾಪಮಾನವು 5 ಡಿಗ್ರಿಗಳಿಂದ 30 ಡಿಗ್ರಿಗಳ ತನಕ ಇರುತ್ತದೆ.