ಮೆಟ್ಟಿಲು ಬಾವಿಗಳಿಗೆ ಬೋರ್ಗಳು ಎಂದೂ ಕರೆಯಲಾಗುವ ಇವುಗಳು, ಬುಂದಿಯಲ್ಲಿ ತುಂಬಾ ಪ್ರಸಿದ್ಧವಾಗಿದೆ. ಬುಂದಿಗೆ ಪ್ರವಾಸಬರುವ ಪ್ರವಾಸಿಗರು ಒಮ್ಮೆಯಾದರೂ ಇದನ್ನು ನೋಡಬೇಕು. ಈ ಬಾವಿಗಳು ಬೇಸಿಗೆಕಾಲದಲ್ಲಿ ಪ್ರಮುಖ ನೀರಿನ ಮೂಲವಾಗಿದೆ. ಈ ಅವಧಿಯಲ್ಲಿ ಕುಡಿಯುವ ನೀರಿನ ಕೊರತೆಯಿರುತ್ತದೆ.ಬುಂದಿಯಲ್ಲಿ ಸುಮಾರು ಐವತ್ತು ಮೆಟ್ಟಿಲು ಬಾವಿಗಳಿವೆ. ಆದರೆ ಅವುಗಳಲ್ಲಿ ಬಹುತೇಕ ಬಾವಿಗಳು ಕಾಲಾಂತರದಲ್ಲಿ ಹಾಳಾಗಿವೆ. ರಾನಿಜಿ-ಕಿ.ಬೋರಿ, ನಗರ ಸಾಗರ ಕುಂಡ ಮತ್ತು ನಾವಲ್ ಸಾಗರವು ಬುಂದಿಯಲ್ಲಿನ ಪ್ರಮುಖ ಬಾವಿಗಳಾಗಿದೆ. ಈ ಬಾವಿಗಳಿಂದ ನೀರನ್ನು ತೆಗೆದುಕೊಂಡು ಬರುವುದು ಮಹಿಳೆಯರಿಗೊಂದು ವಿಶೇಷ ಸಂಭ್ರಮ. ಈ ಬಾವಿಗಳಿಗೆ ಬರುವುದಕ್ಕೆ ವಿಶಿಷ್ಟ ಬಟ್ಟೆಗಳನ್ನು ತೊಟ್ಟು ಮಹಿಳೆಯರು ಬರುತ್ತಾರೆ.