ಚತ್ರ ಮಹಲ್ನ್ನು ಚತ್ರ ಸಾಲ್, 1660ರಲ್ಲಿ ನಿರ್ಮಿಸಿದರು. ಭಾರತದಲ್ಲಿ ಮೊಘಲರು ಆಳುತ್ತಿದ್ದಾಗ ಈ ಪ್ರದೇಶದಲ್ಲಿ ರಜಪೂತರು ಆಳುತ್ತಿದ್ದರು ಎಂಬುದಕ್ಕೆ ಇದು ಪ್ರಮುಖ ಸಾಕ್ಷಿಯಾಗಿದೆ. ಮೊಘಲರ ಕೆಂಪು ಕಲ್ಲಿನ ನಿರ್ಮಾಣದ ಹೊರತಾಗಿ, ಇಲ್ಲಿನ ಚತ್ರ ಸಾಲವು ಬುಂದಿಯಲ್ಲಿನ ಗಣಿಯಿಂದಲೇ ಕೊರೆದ ಕಲ್ಲುಗಳನ್ನು ಉಪಯೋಗಿಸಿ ನಿರ್ಮಿಸಲಾಗಿತ್ತು. ಮಹಲಿನ ಒಳಾಂಗಣವು ಮ್ಯೂರಲ್ ಶೈಲಿಯ ಪೇಂಟಿಂಗ್ಗಳನ್ನು ಹೊಂದಿದೆ ಮತ್ತು ಗೇಟುಗಳಿಗೆ ಗ್ಲಾಸ್ ಮತ್ತು ಸೂಕ್ಷ್ಮ ಕೆತ್ತನೆಯನ್ನು ಮಾಡಲಾಗಿದೆ.