ಬಾದಲ್ ಮಹಲ್, ತಾರಾಗಢ ಕೋಟೆಯಲ್ಲಿದೆ. ಇಲ್ಲಿನ ಮ್ಯೂರಲ್ ಪೇಂಟಿಂಗ್ಗಳು ತುಂಬಾ ಜನಪ್ರಿಯ. ಮಹಲಿನ ಗೋಡೆಗಳು ಸುಂದರವಾಗಿ ಪೇಂಟ್ ಮಾಡಲ್ಪಟ್ಟಿದೆ ಮತ್ತು ಮಧ್ಯಯುಗಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಈ ಪೇಂಟಿಂಗ್ಗಳಲ್ಲಿ ಮುಖಗಳು ಮತ್ತು ಹೂವುಗಳನ್ನು ಚಿತ್ರಿಸಲಾಗಿದ್ದು, ಆ ಕಾಲದ ಕೃಷಿ ಚಟುವಟಿಕೆಯನ್ನು ಇಲ್ಲಿ ಕಾಣಬಹುದಾಗಿದೆ. ಹಾಗೂ ಚೀನಾದ ಜೊತೆಗಿನ ಓಪಿಯಂ ವ್ಯವಹಾರವೂ ಕೂಡಾ ಇಲ್ಲಿ ಚಿತ್ರಿತವಾಗಿದೆ.