Search
  • Follow NativePlanet
Share
ಮುಖಪುಟ » ಸ್ಥಳಗಳು » ಬುಲಂದ್ ಶಹರ್ » ಹವಾಮಾನ

ಬುಲಂದ್ ಶಹರ್ ಹವಾಮಾನ

ಬುಲಂದ್ ಶಹರ್ ನಗರಕ್ಕೆ ಭೇಟಿ ನೀಡಲು ನವೆಂಬರ್ ತಿಂಗಳಿನಿಂದ ಎಪ್ರಿಲ್ ತಿಂಗಳು ಸೂಕ್ತ. ಯಾಕೆಂದರೆ ಈ ಸಮಯದಲ್ಲಿ ಆಹ್ಲಾದಕರ ಮತ್ತು ತಂಪಾದ ವಾತಾವರಣ ವಿರುತ್ತದೆ. ಉಳಿದ ಸಮಯದಲ್ಲಿ ಇಲ್ಲಿ ವಿಪರೀತ ಸೆಖೆಯ ವಾತಾವರಣವಿರುತ್ತದೆ.

ಬೇಸಿಗೆಗಾಲ

ಬೇಸಿಗೆ ತಿಂಗಳು ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ, ಈ ಸಮಯದಲ್ಲಿ ಉಷ್ಣಾಂಶ 45 ಡಿಗ್ರಿಯವರೆಗಿದ್ದು, ಬಿಸಿಗಾಳಿ ಬೀಸುತ್ತದೆ.

ಮಳೆಗಾಲ

ಮಳೆಗಾಲ ಜುಲೈ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗಿರುತ್ತದೆ. ಈ ಸಮಯದಲ್ಲಿ ನಗರದಲ್ಲಿ ಉತ್ತಮ ಮಳೆಯಾಗುತ್ತದೆ. ಈ ಸಮಯದಲ್ಲಿ ಇಲ್ಲಿ ತೇವದ ಮತ್ತು ಹಸಿ ವಾತಾವರಣವಿರುತ್ತದೆ.

ಚಳಿಗಾಲ

ಚಳಿಗಾಲ ಡಿಸೆಂಬರ್ ತಿಂಗಳಿನಿಂದ ಫೆಬ್ರವರಿ ತಿಂಗಳವರೆಗಿರುತ್ತದೆ. ಈ ಸಮಯದಲ್ಲಿ ಆಹ್ಲಾದಕರ ಮತ್ತು ತಂಪಾದ ವಾತಾವರಣವಿದ್ದು ಉಷ್ಣಾಂಶ 12 ರಿಂದ 25 ಡಿಗ್ರಿಯ ವರೆಗಿರುತ್ತದೆ.