ಬೋರ್ಡಿ ಪಟ್ಟಣದಿಂದ 24 ಕಿ.ಮೀ. ದೂರದಲ್ಲಿರುವ ದಹನು ಕೋಟೆ ಕಲ್ಲಿನಿಂದ ನಿರ್ಮಿತವಾಗಿರುವ 38 ಅಡಿ ಎತ್ತರದ ಹಾಗು 10 ಅಡಿಗಳಷ್ಟು ದಪ್ಪ ಗೋಡೆಗಳಿರುವ ಬೃಹತ್ ಕೋಟೆ. ದಂತಕಥೆಯ ಪ್ರಕಾರ, ಚಿಮಾಜಿ ರಾವ್ ಅಪ್ಪನ ನೆತೃತ್ವದಲ್ಲಿ, ಮರಾಠರು ಈ ಕೋಟೆಯನ್ನು ಕ್ರಿ.ಶ. 1739 ರ ಜನವರಿ ತಿಂಗಳಲ್ಲಿ ವಶಪಡಿಸಿಕೊಂಡಿದ್ದರು. ಆದರೆ, "ಟ್ರಿಟಿ ಆಫ್ ಬಸ್ಸೇನ್" ಒಪ್ಪಂದದಡಿ ಕ್ರಿ.ಶ 1817ರಲ್ಲಿ ಬ್ರಿಟಿಷರು ಈ ಕೋಟೆಯನ್ನು ಅಲಂಕರಿಸಿಕೊಂಡು, ನಂತರದ ವರ್ಷಗಳಲ್ಲಿ ಇದನ್ನು ಜೈಲನ್ನಾಗಿ ಪರಿವರ್ತಿಸಿದರು.
1818 ರಲ್ಲಿ ತಾರಸಿ(ಛಾವಣಿ)ಯೊಂದು ನಾಶವಾಗಿದ್ದನ್ನು ಹೊರತುಪಡಿಸಿದರೆ, ಇಂದಿಗೂ ಸುಭದ್ರವಾಗಿರುವ ದಹನು ಕೋಟೆ ವಾಸ್ತುಶಿಲ್ಪಿಗಳು, ಇತಿಹಾಸಕಾರರಿಗೆ ಆಸಕ್ತಿಯ ತಾಣವಾಗಿದೆ.