ಗಯಾ ಹಿಂದೂಗಳಿಗೂ ಒಂದು ಪವಿತ್ರವಾದ ಸ್ಥಳವಾಗಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿರುವ ವಿಷ್ಣುಪ್ರಸಾದ ದೇವಾಲಯ. ಇಲ್ಲಿ ಇದ್ದ ಸುಮಾರು 40 ಸೆಂ.ಮೀ ಉದ್ದದ ವಿಷ್ಣುವಿನ ಪಾದದ ಮೇಲೆ ಈ ದೇವಾಲಯವನ್ನು ಕಟ್ಟಲಾಗಿದೆ ಎಂದು ಹೇಳಲಾಗಿದೆ. ಈ ಪಾದದ ಗುರುತನ್ನು ಧರ್ಮಶಿಲಾ ಎಂದು ಕರೆಯುತ್ತಾರೆ. ಈ ಪಾದದ ಗುರುತು ಮಧ್ಯದಲ್ಲಿ ಕಪ್ಪುಶಿಲೆಯಿಂದ ಇದ್ದು ಸುತ್ತಲೂ ಬೆಳ್ಳಿಯಿಂದ ಆವೃತವಾಗಿದೆ. ಈ ದೇವಾಲಯ 220 ವರ್ಷ ಹಳೆಯದಾಗಿದೆ. ಹಾಗೂ ಫಾಲ್ಗೂ ನದಿಯ ತಟದಲ್ಲಿ ಇದೆ. ಗಯಾಸುರ್ ಎಂಬ ರಾಕ್ಷಸನನ್ನು ತನ್ನ ಬಲ ಕಾಲಿನಿಂದ ನೆಲದ ಆಳಕ್ಕೆ ತಳ್ಳಿ ಶಿಕ್ಷಿಸಿದ ಬಳಿಕ ವಿಷ್ಣುವಿನ ಪಾದದ ಗುರುತು ಅಲ್ಲೇ ಉಳಿಯಿತು ಎಂಬ ಕಥೆ ಚಾಲ್ತಿಯಲ್ಲಿದೆ. ಇಂದೋರ್ ನ ಒಬ್ಬ ರಾಜ ಈ ದೇವಾಲಯವನ್ನು ನವೀಕರಣ ಮಾಡಿದ ಎಂದು ತಿಳಿದು ಬಂದರೂ ಇದರ ನಿರ್ಮಾಣದ ನಿಖರವಾದ ಸಮಯ ಇನ್ನೂ ತಿಳಿದು ಬಂದಿಲ್ಲ.