ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಪ್ಯಾರಾ ಗ್ಲೈಡಿಂಗ್, ಬೀರ್

ನೋಡಲೇಬೇಕಾದ

ಬೀರ್ ನಗರದಲ್ಲಿರುವ ಪ್ಯಾರಾ ಗ್ಲೈಡಿಂಗ್ ಅತ್ಯಂತ ಸಾಹಸಮಯ ಹಾಗೂ ಥ್ರಿಲ್ಲಿಂಗ್ ಕ್ರೀಡೆಯಾಗಿದೆ. ಈ ಕ್ರೀಡೆಯೇ ಇಲ್ಲಿನ ಕೇಂದ್ರ ಆಕರ್ಷಣೆಯಾಗಿದ್ದು ಇದನ್ನು 'ಭಾರತದ ಪ್ಯಾರಾಗ್ಲೈಡಿಂಗ್ ರಾಜಧಾನಿ'ಎಂದೇ ಕರೆಯುತ್ತಾರೆ. ಪ್ಯಾರಾ ಗ್ಲೈಡಿಂಗ್ ಗೆ ಅನುಕೂಲವಾಗುವಂತಹ ವಿಶಾಲವಾದ ಮೈದಾನಗಳಿವೆ. ಲ್ಯಾಂಡಿಂಗ್ ಸ್ಥಳವು ಬಿಲ್ಲಿಂಗ್ ನಲ್ಲಿದೆ, ಇದು ಬೀರ್ ನಿಂದ ಸುಮಾರು 14 ಕಿ.ಮೀ.ದೂರದಲ್ಲಿದೆ.

ಬೀರ್ ಚಿತ್ರಗಳು, ಪ್ಯಾರಾಗ್ಲೈಡಿಂಗ್

ಅನುಭವವಿಲ್ಲದೆ ಆಡಲು ಸಾಧ್ಯವಿಲ್ಲದ ಈ ಕ್ರೀಡೆಗೆ ತರಬೇತಿ ಬೇಕೇ ಬೇಕು. ಬೀರ್ ನಗರದಲ್ಲಿ ಪ್ರವಾಸವನ್ನು ಆಯೋಜಿಸುವ ಅನೇಕ ಖಾಸಗಿ ಸಂಸ್ಥೆಗಳಿದ್ದು ಅವರು ಪ್ರವಾಸಿಗರಿಗೆ ಮೂಲಭೂತ ತರಬೇತಿ ನೀಡುತ್ತಾರೆ. ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ವಿಮಾನಯಾನ ಕೇಂದ್ರ ಹಾಗೂ ಹಿಮಾಚಲ ಪ್ರದೇಶ ಸರ್ಕಾರದ ಸಹಯೋಗದೊಂದಿಗೆ 'ಪ್ಯಾರಾ ಗ್ಲೈಡಿಂಗ್ ಫ್ರೀ ವಲ್ಡ್ ಕಪ್' ಕ್ರೀಡೆ ಇಲ್ಲಿ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆಸಲಾಗುತ್ತದೆ.

ಆಸಕ್ತರು ಮಾರ್ಚ್ ನಿಂದ ಮೇ ವರೆಗೆ ಹಾಗೂ ಅಕ್ಟೋಬರ್ ನಿಂದ ನವೆಂಬರ್ ತಿಂಗಳ ಅಂತ್ಯದವರೆಗೆ ನಡೆಯುವ ಪ್ಯಾರಾ ಗ್ಲೈಡಿಂಗ್ ತರಬೇತಿಯಲ್ಲಿ ಪಾಲ್ಗೊಳ್ಳಬಹುದು. ಈ ಮಾಸಗಳಲ್ಲಿ ಈ ಪ್ರದೇಶದ ಹವಾಮಾನವು ಹಿತಕರವಾಗಿರುತ್ತದೆ.

Please Wait while comments are loading...