ಒಂಟೆ ಸಂತಾನೋತ್ಪತಿ ಕೇಂದ್ರವು ಬಿಕಾನೇರ್ ನ ನಗರದ ಕೇಂದ್ರ ಭಾಗದಿಂದ 8 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಸರ್ಕಾರಿ ಒಂಟೆ ಸಂತಾನೋತ್ಪತಿ ಕೇಂದ್ರವೆಂದು ಕರೆಯಲ್ಪಡುತ್ತದೆ. ಅಲ್ಲದೆ ಇದು ಏಶಿಯಾದ ಅತಿ ದೊಡ್ಡ ಒಂಟೆ ಸಂತಾನೋತ್ಪತಿ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಫಾರಂ ಅನ್ನು 1984 ರಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ ಸ್ಥಾಪಿಸಿತು. 2000 ಎಕರೆಗಳಷ್ಟು ವಿಶಾಲವಾದ ಈ ಕೇಂದ್ರವನ್ನು ಒಂಟೆಗಳ ಸಂತಾನೋತ್ಪತಿಗೆ ಮತ್ತು ತರಬೇತಿಗಾಗಿ ಮೀಸಲಿಡಲಾಗಿದೆ.
ಈ ಪರಿಷತ್ತಿನ ಸದಸ್ಯರು ಇಲ್ಲಿ ಒಂಟೆಗಳ ಮೇಲೆ ವಿಶೇಷವಾದ ಪ್ರಯೋಗಗಳನ್ನು ಮತ್ತು ಸಂಶೋಧನೆಗಳನ್ನು ಕೈಗೊಳ್ಳುತ್ತಿರುತ್ತಾರೆ.