Search
  • Follow NativePlanet
Share

ಬಿಹಾರ ಪ್ರವಾಸೋದ್ಯಮ : ನಳಂದ ಭಗ್ನಾವಶೇಷಗಳ ನಡುವೆ ಒಂದು ಸುತ್ತು

ಬಿಹಾರ ರಾಜ್ಯವು ಜನಸಂಖ್ಯೆಯಲ್ಲಿ ಭಾರತದ ಮೂರನೇ ಅತಿ ದೊಡ್ಡ ರಾಜ್ಯವಾಗಿದ್ದು ಮತ್ತು ಭೌಗೋಳಿಕವಾಗಿ ಹನ್ನೆರಡನೇಯ ಅತಿ ದೊಡ್ಡ ರಾಜ್ಯವಾಗಿದೆ. ಬಿಹಾರ ಎಂಬ ಪದವು ವಿಹಾರ ಎಂಬ ಶಬ್ದದಿಂದ ಉತ್ಪತ್ತಿಯಾಗಿದ್ದು ಇದರ ಅರ್ಥ ಸಂನ್ಯಾಸಿ ಮಂದಿರ ಎಂದಾಗುತ್ತದೆ. ಬಿಹಾರ ಒಂದೊಮ್ಮೆ ಜೈನ , ಹಿಂದು , ಮತ್ತು ವಿಶೇಷವಾಗಿ ಬುದ್ಧರ ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿತ್ತು. ಇಲ್ಲಿಯೇ ಬೋಧಗಯ ಇದ್ದು, ಈ ಸ್ಥಳದಲ್ಲಿ ಭಗವಾನ ಬುದ್ಧನು ಜ್ಞಾನೋದಯವನ್ನು ಸಾಧಿಸಿದನು.

ಈ ಸ್ಥಳದಲ್ಲಿಯೇ ಜೈನ ಧರ್ಮದ ಸ್ಥಾಪಕನಾದ ಭಗವಾನ ಮಹಾವೀರನು ಜನ್ಮ ತಳೆದು, ನಿರ್ವಾಣವನ್ನು ಪಡೆದನು. ಬಿಹಾರ ರಾಜ್ಯವು ಪಶ್ಚಿಮದಲ್ಲಿ ಉತ್ತರ ಪ್ರದೇಶ ರಾಜ್ಯ , ಉತ್ತರ ದಲ್ಲಿ ನೇಪಾಳ ದೇಶ, ಪೂರ್ವದಲ್ಲಿ ಪಶ್ಚಿಮ ಬಂಗಾಳದ ಉತ್ತರದ ಭಾಗ ಮತ್ತು ದಕ್ಷಿಣದಲ್ಲಿ ಜಾರ್ಖಂಡ ರಾಜ್ಯವನ್ನು ಗಡಿ ಪ್ರದೇಶಗಳಾಗಿ ಒಳಗೊಂಡಿದೆ.

ಬಿಹಾರ ಮತ್ತು ಅದರ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಬಿಹಾರದ ಪ್ರವಾಸೋದ್ಯಮವು ಸುಂದರ ಸ್ಥಳಗಳನ್ನು ವಿಕ್ಷೀಸುವ ಅವಕಾಶವನ್ನು ಒದಗಿಸುತ್ತದೆ. ಇಲ್ಲಿ ಪ್ರಕೃತಿ ಸೌಂದರ್ಯ ಉಳ್ಳ ಅನೇಕ ಸ್ಥಳಗಳನ್ನು ನೋಡಬಹುದು. ಸರೋವರಗಳು, ಜಲಪಾತಗಳು, ಬಿಸಿ ನೀರಿನ ಬುಗ್ಗೆಗಳು ಮುಂತಾದವುಗಳನ್ನು ಇಲ್ಲಿ ನೋಡಬಹುದು. ಪ್ರಾಚೀನ ಬಿಹಾರವು ಪ್ರಾಚೀನ ಮತ್ತು ಸಾಂಪ್ರದಾಯಿಕ ಭಾರತದ ಶೈಕ್ಷಣಿಕ, ಸಾಂಸ್ಕತಿಕ ಒಂದು ಪ್ರಮುಖ ಕೇಂದ್ರವಾಗಿತ್ತು.  ಇದು ಪಾಟ್ನಾದ ಸಮೀಪದಲ್ಲಿದ್ದು ಬಿಹಾರ ರಾಜ್ಯದ ರಾಜಧಾನಿಯಾಗಿತ್ತು. ನಳಂದ ಮತ್ತು ವಿಕ್ರಮ ಶೀಲಗಳು ಪ್ರಸಿದ್ದ ಕಲಿಕಾ ಕೇಂದ್ರಗಳಾಗಿದ್ದು 5 ಮತ್ತು 8 ನೇ ಶತಮಾನದಲ್ಲಿ ಕ್ರಮವಾಗಿ ಸ್ಥಾಪನೆ ಯಾಗಿದ್ದವು. ಈ ಎರಡು ವಿಶ್ವವಿದ್ಯಾಲಯಗಳು ಅಂದಿನ ಕಾಲದಲ್ಲಿಯೇ ತನ್ನ ಶೈಕ್ಷಣಿಕ ಗುಣಮಟ್ಟದ ಕಾರಣದಿಂದಾಗಿ ಅಂತರಾಷ್ಟ್ರೀಯ ಪ್ರಸಿದ್ಧಿಯನ್ನು ಪಡೆದಿದ್ದವು.

ಬಿಹಾರ ರಾಜ್ಯವು ಅನೇಕ ಧರ್ಮದವರಿಗೆ ಒಂದು ಅತ್ಯಂತ ಪವಿತ್ರ ಸ್ಥಳವಾಗಿದೆ. ಹಿಂದುಗಳಿಗೆ, ಭೌದ್ದ ಧರ್ಮೀಯರಿಗೆ, ಜೈನರಿಗೆ , ಸಿಖರಿಗೆ ಮತ್ತು ಇಸ್ಲಾಂ ಧರ್ಮಿಯರಿಗೆ ಇದು ಅತ್ಯಂತ ಪವಿತ್ರ ಸ್ಥಳವಾಗಿದೆ. ಬಿಹಾರ ರಾಜ್ಯದಲ್ಲಿರುವ ಮಹಾಭೋಧಿ ದೇವಸ್ಥಾನ ಇದು ಬುದ್ಧರ ಪವಿತ್ರ ಕೇಂದ್ರವಾಗಿದ್ದು, ಯುನೆಸ್ಕೊದ ವಿಶ್ವ ಪಾರಂಪಾರಿಕ ತಾಣಗಳಲ್ಲಿ ಸ್ಥಾನವನ್ನು ಪಡೆದಿದೆ. ಪಾಟ್ನಾದ ಮಹಾತ್ಮ ಗಾಂಧಿ ಸೇತುವೆಯನ್ನು  1980 ರ ದಶಕದಲ್ಲಿ  ಜಗತ್ತಿನ ಅತ್ಯಂತ ಉದ್ದನೆಯ ಸೇತುವೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿತ್ತು. ಪಾಟ್ನಾ ಮತ್ತು ರಾಜಗೀರ ನಗರಗಳನ್ನು ಬಿಹಾರದ ಎರಡು ಪ್ರಮುಖ ಐತಿಹಾಸಿಕ ನಗರಗಳೆಂದು ಗುರುತಿಸಲಾಗುತ್ತದೆ.

ಬಿಹಾರದ ಇತಿಹಾಸ ಮತ್ತು ಸಾಂಸ್ಕತಿಕ ಪರಂಪರೆ

ಬಿಹಾರ ಒಂದೊಮ್ಮೆ ಜೈನ , ಹಿಂದು , ಮತ್ತು ವಿಶೇಷವಾಗಿ ಬುದ್ಧರ ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿತ್ತು. ಇಲ್ಲಿಯೇ ಬೋಧಗಯ ಇದ್ದು, ಈ ಸ್ಥಳದಲ್ಲಿ ಭಗವಾನ ಬುದ್ಧನು ಜ್ಞಾನೋದಯವನ್ನು ಸಾಧಿಸಿದನು. ಇಲ್ಲಿಯೇ ನಳಂದ ವಿಶ್ವವಿದ್ಯಾಲಯವಿದ್ದು, ಕ್ರಿ.ಪೂ 5 ನೇ ಶತಮಾನದಲ್ಲಿ ಸ್ಥಾಪನೆಯಾಗಿತ್ತು. ಇದು ಬುದ್ಧರ ಪ್ರಸಿದ್ದ ಕಲಿಕಾ ಕೇಂದ್ರವಾಗಿತ್ತು. ಅದರಂತೆ ರಾಜಗೀರ ನಗರವು ಸಹ ಜೈನರಿಗೂ ಮತ್ತು ಬುದ್ದರಿಗೂ ಸಮಾನವಾದ ಪ್ರಾಶಸ್ತ್ಯವನ್ನು ನೀಡಿತ್ತು.

ಈ ಸ್ಥಳದಲ್ಲಿಯೇ ಜೈನ ಧರ್ಮದ ಸ್ಥಾಪಕನಾದ ಭಗವಾನ ಮಹಾವೀರನು ಜನ್ಮ ತಳೆದು, ನಿರ್ವಾಣವನ್ನು ಪಡೆದನು. ಬೋಧಗಯ ಒಂದು ಅದ್ಭುತ ಸ್ಥಳವಾಗಿದ್ದು , ಭೌದ್ದ ಧರ್ಮವನ್ನು ಅಧ್ಯಯನ ಮಾಡ ಬಯಸುವ ಪ್ರತಿಯೊಬ್ಬರೂ ಇಲ್ಲಿಗೆ ಭೇಟಿ ನೀಡಲೇ ಬೇಕು. ಮತ್ತು ರಾಜಗೀತ ಸಾಸಾರಾಮ ಮತ್ತು ವಿಶೇಷವಾಗಿ ನಳಂದ ನಗರಗಳು ಸಹ ಇಲ್ಲಿನ ಅತ್ಯಂತ ಆಕರ್ಷಕ ಸ್ಥಳಗಳಲ್ಲಿ ಒಂದಾಗಿದ್ದು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಆನಂದದ ಜೊತೆಗೆ ಐತಿಹಾಸಿಕ ಜ್ಞಾನವನ್ನು ಸಹ ಪಡೆಯಬಹುದು.

ಬಿಹಾರ ರಾಜ್ಯವು ಹಲವು ವರ್ಷಗಳವರೆಗೆ ಶೈಕ್ಷಣಿಕ ಮತ್ತು ಸಾಂಸ್ಕತಿಕ ಪ್ರಮುಖ ಕೇಂದ್ರವಾಗಿ ಪ್ರಸಿದ್ಧಿಯಾಗಿತ್ತು. ಕ್ರಿ.ಪೂ 240 ರಲ್ಲಿ ಇದ್ದ ಮಗಧ ಗುಪ್ತ ಸಾಮ್ರಾಜ್ಯವು ಶೈಕ್ಷಣಿಕ ಮತ್ತು ಸಾಂಸ್ಕತಿಕವಾಗಿ ಎಷ್ಟು ಮುಂದುವರೆದಿತ್ತೋ ಎಂದರೆ ಆ ಅವಧಿಯನ್ನು ಭಾರತದ ಇತಿಹಾಸದಲ್ಲಿ ಸುವರ್ಣ ಯುಗ ಎಂದು ಪರಿಗಣಿಸಲಾಗಿದೆ. ಆ ಸಮಯದಲ್ಲಿ ಗುಪ್ತ ಸಾಮ್ರಾಜ್ಯವು ವಿಜ್ಞಾನ, ಗಣಿತ, ಖಗೋಳ ಶಾಸ್ತ್ರ, ಸಂಸ್ಕತಿ, ವಾಣೀಜ್ಯ, ಧರ್ಮ , ಭಾರತೀಯ ತತ್ವಶಾಸ್ತ್ರದಲ್ಲಿ ತುಂಬಾ ಆಗಾಧವಾಗಿ ಮುಂದುವರೆದಿತ್ತು.

ವಿಕ್ರಮಶೀಲ ಮತ್ತು ನಳಂದ ವಿಶ್ವವಿದ್ಯಾಲಯಗಳು ಪ್ರಾಚೀನ ಭಾರತದ ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಚ ಕಲಿಕಾ ಕೇಂದ್ರಗಳಾಗಿವೆ. ಕ್ರಿ.ಪೂ 400 ಮತ್ತು ಕ್ರಿ.ಪೂ 1000 ರ ನಡುವೆ ಹಿಂದು ಧರ್ಮವು ಬುದ್ಧ ಧರ್ಮದ ಕೆಲಮಟ್ಟಿನ ವಿನಾಶ ದಿಂದಾಗಿ ಊರ್ಜಿತವನ್ನು ಕಂಡಿತು ಎಂದು ಕೆಲವು ಬರಗರಾರರು ಹೇಳುತ್ತಾರೆ. ಈ ಸಮಯದಲ್ಲಿ ಕೆಲವು ಹಿಂದು ರಾಜರು ಭೌದ್ಧ ಧರ್ಮವನ್ನು ಉಳಿಸಲು, ಬೌದ್ದ ಸಂನ್ಯಾಸಿಗಳಿಗೆ ಅಪಾರ ಮೊತ್ತದ ಹಣವನ್ನು ಬ್ರಹ್ಮವಿಹಾರಗಳನ್ನು ನಿರ್ಮಿಸಲು ನೀಡಿದರು.

ಬಿಹಾರದ ಆಹಾರಗಳು, ಜಾತ್ರೆಗಳು ಮತ್ತು  ಹಬ್ಬಗಳು

ಬಿಹಾರದ ವಿವಿಧ ತರಹದ ರುಚಿಕರ ತಿಂಡಿಗಳು, ಆಹಾರಗಳು ಬಿಹಾರ ಪ್ರವಾಸೋದ್ಯಮದ ಒಂದು ಅವಿಭಾಜ್ಯ ಅಂಗವಾಗಿದೆ. ಬಿಹಾರದ ಆಹಾರ ಪದಾರ್ಥಗಳು ಪ್ರಧಾನವಾಗಿ ಸಸ್ಯಾಹಾರಿಯಾಗಿದೆ. ಏಕೆಂದರೆ ಬಿಹಾರ ಸಾಂಪ್ರದಾಯಿಕ ಸಮಾಜವು ಬುದ್ಧ , ಜೈನ ಮತ್ತು ಹಿಂದು ಧರ್ಮದಿಂದ ಹೆಚ್ಚು ಪ್ರಭಾವಿತವಾಗಿದ್ದು, ಈ ಧರ್ಮದಲ್ಲಿ ಅಹಿಂಸೆಯೇ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ. ಇಲ್ಲಿ ನೀವು ಮೊಟ್ಟೆ, ಚಿಕನ್, ಮೀನು ಮತ್ತು ಪ್ರಾಣಿಗಳ ಮಾಂಸಗಳ ಆಹಾರವನ್ನು  ಹೆಚ್ಚಿಗೆ ಕಾಣಲಾರಿರಿ.

ಆದರೆ ಬಿಹಾರದ ಕೆಲವು ಕಡೆ ನೀವು ರುಚಿಕರವಾದ ಚಿಕನ್ ಮತ್ತು ಮಟನ್ ಆಹಾರಗಳನ್ನು ತಿಂದು ಆನಂದಿಸಬಹುದು. ಬಿಹಾರದ ಈ ಸ್ಥಳಗಳಲ್ಲಿ ಈ ಮಾಂಸಹಾರಿ ಆಹಾರಗಳು ಬಹು ಸಾಮಾನ್ಯವಾಗಿದೆ. ಬಿಹಾರವು ಸತ್ತು ಪರಾಠಾ ಎಂಬಂತಹ ಆಹಾರ ಪದಾರ್ಥಗಳಿಗೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು, ಇದನ್ನು ಚೋಖಾ ಮತ್ತು ಹುರಿದ ಕಡಲೆ ಹಿಟ್ಟನ್ನು ಕಲಸಿ ಅದರಲ್ಲಿ ಆಲೂಗಡ್ಡೆ ಮತ್ತು ಮಸಾಲಾವನ್ನು ತುಂಬಿ ತಯಾರಿಸುತ್ತಾರೆ.

ಛತ್ ಇದು ಬಿಹಾರದ ಪ್ರಾಚೀನ ಮತ್ತು ಮಹತ್ವದ ಜಾತ್ರೆಯಾಗಿದ್ದು, ವರ್ಷದಲ್ಲಿ ಎರಡು ಬಾರಿ ಆಚರಿಸಲ್ಪಡುತ್ತದೆ. ಒಂದು ಸಲ ಬೇಸಿಗೆ ಯಲ್ಲಿ ಆಚರಿಸಲ್ಪಡುತ್ತದೆ. ಆಗ ಇದನ್ನು ಛೈತಿ ಛಾತ್ತ ಎಂದು ಕರೆಯುತ್ತಾರೆ. ಇನ್ನೊಂದು ಸಲ ದೀಪಾವಳಿಯ ಒಂದು ವಾರದ ನಂತರ ಆಚರಿಸಲ್ಪಡುತ್ತದೆ. ಆಗ ಇದನ್ನು ಕಾರ್ತಿಕ ಛಾತ್ತ ಎಂದು ಕರೆಯುತ್ತಾರೆ. ಛಾತ್ತ ಈ ಜಾತ್ರೆಯಲ್ಲಿ ವಿಶೇಷವಾಗಿ ಸೂರ್ಯ ದೇವರನ್ನು ಆರಾಧಿಸಲಾಗುತ್ತದೆ. ಈ ಸಮಯದಲ್ಲಿ ಸೂರ್ಯ ದೇವರಿಗೆ ಎರಡು ಬಾರಿ ಅಂದರೆ ಮುಂಜಾನೆ ಮತ್ತು ಸಾಯಂಕಾಲದಲ್ಲಿ  ನದಿಯ ತೀರದಲ್ಲಿ ಅಥವಾ ಹೆಚ್ಚು ನೀರು ಇರುವ ಸ್ಥಳದಲ್ಲಿ ಧಾರ್ಮಿಕ ಸ್ನಾನ ಮತ್ತು ಪೂಜೆಯನ್ನು ಮಾಡಲಾಗುತ್ತದೆ.

ಛತ್ ಇದು ಬಿಹಾರದ ಒಂದು ಪ್ರಸಿದ್ದ ಹಬ್ಬವಾಗಿದ್ದು, ಇದರ ಹೊರತಾಗಿಯೂ ಇಲ್ಲಿ ಭಾರತದ ಇತರ ಭಾಗಗಳಲ್ಲಿ ಆಚರಿಸುವಂತಹ ಅನೇಕ ಪ್ರಮುಖ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಬಿಹಾರದಲ್ಲಿ ಮಕರ ಸಂಕ್ರಾಂತಿ, ಸರಸ್ವತಿ ಪೂಜೆ ಮತ್ತು ಹೋಳಿ ಸಂಭ್ರಮಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಸೋನೆಪುರದಲ್ಲಿ ನಡೆಯುವ ಜಾನುವಾರು ಜಾತ್ರೆಯು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು, ಇದು ದೀಪಾವಳಿಯ ಹದಿನೈದು ದಿನದ ನಂತರ ಆರಂಭವಾಗಿ ಒಂದು ತಿಂಗಳು ಪೂರ್ತಿ ನಡೆಯುತ್ತದೆ. ಈ ಜಾತ್ರೆಯು ಏಷ್ಯಾದ ಅತಿ ದೊಡ್ಡ ಜಾನುವಾರು ಜಾತ್ರೆ ಎಂದು ಪರಿಗಣಿತವಾಗಿದೆ. ಪ್ರತಿವರ್ಷವು ಸೋನೆಪುರ ನಗರದ ಗಂಡಕ ನದಿಯ ತೀರದ ಮೇಲೆ ಈ ಜಾತ್ರೆಯನ್ನು ಆಯೋಜಿಸಲಾಗುತ್ತದೆ.

ಬಿಹಾರ ಸ್ಥಳಗಳು

  • ಜಮುಯಿ 18
  • ಮುಂಗೇರ್ 29
  • ಔರಂಗಾಬಾದ್-ಬಿಹಾರ್ 12
  • ಹಾಜಿಪುರ್ 15
  • ಗಯಾ 14
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu