ಭಾರತದಲ್ಲಿರುವ ಕೆಲವೇ ಕೆಲವು ಸೃಷ್ಟಿಕರ್ತ ಬ್ರಹ್ಮನ ದೇವಸ್ಥಾನಗಳಲ್ಲಿ ಆದಿ ಬ್ರಹ್ಮ ದೇವಸ್ಥಾನವೂ ಒಂದು. ಈ ದೇವಸ್ಥಾನವು ಖೋಖಾನ್ ಹಳ್ಳಿಯಲ್ಲಿದೆ. ಭುಂತರಿನಿಂದ ಸುಮಾರು 4 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವನ್ನು ಮರದಿಂದಲೇ ಮಾಡಿದ್ದು ಬ್ರಹ್ಮನ ಮೂರ್ತಿ ಇಲ್ಲಿದೆ. ಮೊಹ್ರಾಗಳಿಂದ ಆವೃತ್ತವಾದ ಬ್ರಹ್ಮನ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ವಿಷ್ಣುವಿನ ಮೂರ್ತಿಯನ್ನೂ ಕೂಡಾ ಇಲ್ಲಿ ಸ್ಥಾಪಿಸಲಾಗಿದೆ. ನಾಲ್ಕು ಛಾವಣಿಯನ್ನು ಹೊಂದಿರುವ ಈ ದೇವಸ್ಥಾನ ಪಗೋಡಾ ಶೈಲಿಯದ್ದು. ಪ್ರವೇಶದ್ವಾರದ ಮೇಲಿನ ಕೆತ್ತನೆಯು ಪೌರಾಣಿಕ ಕಥೆಗಳನ್ನು ಹೇಳುತ್ತವೆ.
ಈ ದೇವಸ್ಥಾನದ ಒಂದು ಬದಿಯಲ್ಲಿ ಗಾರ್ ಜೋಗನಿ ಮತ್ತು ಇನ್ನೊಂದು ಕಡೆ ಮನಿಕರನ್ ಜೋಗನಿ ನಿಂತಿದ್ದಾರೆ. ನಾಗನಿ ಬಿರ್ಶು, ಖೋಖನ್ ಹಬ್ಬ, ಮೋಹಾಲ್ ಹಬ್ಬ ಮತ್ತು ಭುಲಾಂಗ್ ಬಿರ್ಶು ಹಬ್ಬಗಳನ್ನು ಇಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ.