ಭುಜನಲ್ಲಿ ಹವಾಮಾನವು ವರ್ಷಪೂರ್ತಿ ವ್ಯತ್ಯಯವಾಗುತ್ತಿರುತ್ತದೆ. ಬೇಸಿಗೆ ಕಾಲದಲ್ಲಿ ಅತಿ ಉಷ್ಣಾಂಶವಿದ್ದರೆ, ಮಳೆಗಾಲದಲ್ಲಿ ಮಳೆಯ ಕುರಿತು ನಿರ್ದಿಷ್ಟತೆಯಿಲ್ಲದಿದ್ದರೂ, ಚಳಿಗಾಲದಲ್ಲಿ ಇಲ್ಲಿ ತುಂಬಾ ಹಿತಕರವಾದ ತಾಪಮಾನವಿರುತ್ತದೆ.
ಭುಜ್ ನಲ್ಲಿ ಮಾರ್ಚ, ಎಪ್ರೀಲ ಮತ್ತು ಮೇ ತಿಂಗಳು ತುಂಬಾ ಉಷ್ಣಾಂಶವಿರುವ ತಿಂಗಳುಗಳಾಗಿವೆ. ಈ ಸಮಯದಲ್ಲಿ ಇಲ್ಲಿನ ತಾಪಮಾನವು ಕನಿಷ್ಟ 40 ಡಿಗ್ರಿಯಿಂದ ಗರಿಷ್ಟ 28 ಡಿಗ್ರಿ ಯವರೆಗೂ ಇರುತ್ತದೆ.
ಭುಜ್ ನಲ್ಲಿ ಮಳೆಗಾಲವು ಜೂನನಿಂದ ಸಪ್ಟಂಬರನವರೆಗೂ ಇರುತ್ತದೆ. ಈ ಸಮಯದಲ್ಲಿ ಇಲ್ಲಿ ಹೆಚ್ಚು ಮಳೆ ಬೀಳುತ್ತದೆ. ಅಕ್ಟೋಬರ ಮತ್ತು ನವಂಬರ ತಿಂಗಳಿನಲ್ಲಿ ನೀವು ಭುಜ್ ಗೆ ಭೇಟಿಕೊಡಲು ಯೋಗ್ಯವಾದ ಸಮಯವಾಗಿದೆ. ಇದು ಪೂವಾರ್ಧ ಮಳೆಗಾಲವಾದ್ದರಿಂದ ಆಗ ಇಲ್ಲಿ ಸುಂದರ ವಾತಾವರಣವಿರುತ್ತದೆ.
ಭುಜನಲ್ಲಿ ಚಳಿಗಾಲವು ಡಿಸಂಬರನಿಂದ ಫೆಬ್ರುವರಿಯವರೆಗೂ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನವು ಕನಿಷ್ಟ13 ಡಿಗ್ರಿ ಸೆಲ್ಸಿಯಸನಿಂದ ಗರಿಷ್ಟ 28 ಡಿಗ್ರಿ ಸೆಲ್ಸಿಯಸ ನಡುವೆ ಹೊಯ್ಡಾಡುತ್ತಿರುತ್ತದೆ.