ರಾಯಲ್ ಛತ್ತರಿಗಳು ಭುಜ್ ನ ಒಂದು ಪ್ರಶಾಂತ ಸ್ಥಳವಾಗಿದೆ. ಇದು ನಗರದ ಒಳಗಡೆ ಇದೆ. ಅದರೆ ಸುತ್ತಮುತ್ತಲೂ ಜನಜಂಗುಳಿಯ ರಸ್ತೆಯಾಗಲೀ, ದೊಡ್ಡ ಕಟ್ಟಡವಾಗಲೀ ಇಲ್ಲ. ಇಲ್ಲಿರುವ ಸ್ಮಾರಕಗಳು ತುಂಬಾ ಆಕರ್ಷಕವಾಗಿವೆ. ಇದರಲ್ಲಿ ಕೆಲವು ಸ್ಮಾರಕಗಳು 2001 ರಲ್ಲಿ ನಡೆದ ಭೂಕಂಪದಲ್ಲಿ ನಾಶವಾದವು. 2 ನೇಯ ರಾಯಧನಜಿ, ಲಖಪತಿಜಿ ,ಅತ್ತು ದೇಸರಜಿಯ ಸ್ಮಾರಕಗಳು ಈಗಲೂ ಉಳಿದುಕೊಂಡಿವೆ. ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿ ಆನಂದಿಸಬಹುದು.