ಕೇರಾ ಇದು ಭುಜ್ ನ ದಕ್ಷಿಣದಿಂದ 22 ಕೀಲೊ ಮೀಟರ ದೂರದಲ್ಲಿದೆ. ಇದು ಸೋಲಂಕಿ ರಾಜವಂಶಕ್ಕೆ ಸೇರಿದ ಶಿವನ ದೇವಾಲಯವನ್ನು ಹೊಂದಿದೆ. ಈ ದೇವಾಲಯದ ಬಹುಭಾಗವು 1819ರಲ್ಲಿ ನಡೆದ ಭೂಕಂಪದಲ್ಲಿ ನಾಶವಾಯಿತು. ಆದರೆ ಈ ದೇವಾಲಯದ ಗರ್ಭಗುಡಿಯ ಭಾಗ ಮತ್ತು ಮೂರ್ತಿಯು ಈಗಲೂ ಹಾಗೆಯೇ ಉಳಿದಿದೆ. ಇದಕ್ಕೆ ಹತ್ತಿರವಾಗಿ ಕಪಿಲಕೋಟನ ಕೋಟೆಯಿದ್ದು ಶಿಥಿಲವಾದ ಸ್ಥಿತಿಯಲ್ಲಿದೆ.