Search
  • Follow NativePlanet
Share
ಮುಖಪುಟ » ಸ್ಥಳಗಳು » ಭುಜ್ » ಆಕರ್ಷಣೆಗಳು
  • 01ಪ್ರಾಗ ಮಹಲ್

    ಇದು 19 ನೇ ಶತಮಾನದಲ್ಲಿ ಇಟಾಲಿಯನ - ಗೋಥಾಲಿಕ ಶೈಲಿಯಲ್ಲಿ ನಿರ್ಮಾಣವಾಗಿದ್ದು ತುಂಬಾ ಆಕರ್ಷಕವಾಗಿದೆ. ಇಲ್ಲಿ ಅನೇಕ ಬಾಲಿವುಡ ಚಲನ ಚಿತ್ರಗಳನ್ನು ಚಿತ್ರಿಕರಿಸಲಾಗಿದೆ. ಉದಾ: ಹಮ ದಿಲ ದೇ ಚುಕೆ ಸನಮ ಮತ್ತು ಲಗಾನ. ಇಲ್ಲಿ ಅನೇಕ ಗುಜರಾತಿ ಚಲನ ಚಿತ್ರಗಳನ್ನು ಸಹ ಚಿತ್ರೀಕರಿಸಲಾಗಿದೆ. ಇದರ ಬಹುತೇಕ ಭಾಗವು 2001 ರ ಭೂಕಂಪದಲ್ಲಿ...

    + ಹೆಚ್ಚಿಗೆ ಓದಿ
  • 02ಹಮೀರಸರ ಸರೋವರ

    ಇದು ಮಾನವ ನಿರ್ಮಿತ ಸರೋವರ ಆಗಿದ್ದು ಭುಜ್ ನಗರದ ಮಧ್ಯದಲ್ಲಿದೆ. ಇದರ ಹೆಸರು ಇಲ್ಲಿನ ಆಡಳಿತಗಾರನಾದ ಜಡೆಜಾ ರಾವ, ಹಮೀರನಿಂದಾಗಿ ಬಂದಿದೆ. ಇದು ಸುಮಾರು 450 ವರ್ಷಗಳಷ್ಟು ಹಳೆಯದ್ದಾಗಿದ್ದು, ಈಗ ಒಂದು ವರ್ಣಮಯವಾದ ಉದ್ಯಾನವನವನ್ನು ಹೊಂದಿದೆ. ಇದೊಂದು ಪ್ರವಾಸಿ ಆಕರ್ಷಕ ಸ್ಥಳವಾಗಿದೆ.

    + ಹೆಚ್ಚಿಗೆ ಓದಿ
  • 03ಐನಾ ಮಹಲ್

    ಇದು ಭುಜ್ ನಗರದ ಹಮೀರಸರ ಸರೋವರದ ಈಶಾನ್ಯ ಮೂಲೆಯಲ್ಲಿದೆ. ಐನಾ ಮಹಲ್ ಅಥವಾ ಕನ್ನಡಿ ಮಹಲ್ ನೋಡಲು ತುಂಬಾ ಮನಮೋಹಕವಾಗಿದೆ. ಇದನ್ನು 18 ನೇ ಶತಮಾನದಲ್ಲಿ ಮಧ್ಯಭಾಗದಲ್ಲಿ ನಿರ್ಮಿಸಲಾಗಿದೆ. ರಾಮ ಸಿಂಗ ಮಲಾಮ ಎಂಬ ವ್ಯಕ್ತಿಯು ಇಂಡೋ – ಯರೋಪಿಯನ್ ಶೈಲಿಯಲ್ಲಿ ಇದನ್ನು ನಿರ್ಮಿಸಿದ್ದಾನೆ. ಇಲ್ಲಿ ಅತ್ಯುತ್ತಮ ಕಲಾ ಚಿತ್ರಗಳು...

    + ಹೆಚ್ಚಿಗೆ ಓದಿ
  • 04ಕಚ್ ವಸ್ತು ಸಂಗ್ರಹಾಲಯ

    ಈ ವಸ್ತು ಸಂಗ್ರಹಾಲಯವು ನೋಡಲು ಆಕರ್ಷಕವಾಗಿದೆ.ಇಲ್ಲಿ ವರ್ಣಚಿತ್ರಗಳು, ಹಳೆಯ ನಾಣ್ಯಗಳ ಸಂಗ್ರಹ, ಸಂಗೀರ ಉಪಕರಣಗಳು, ಕರಕುಶಲ ವಸ್ತುಗಳು , ಹಸ್ತ ಕೃತಿಗಳು, ಪ್ರಾಚೀನ ಲಿಪಿ ಶಾಸನಗಳನ್ನು ಇಲ್ಲಿ ನೋಡಬಹುದು. ಇದು ಗುಜರಾತಿನ ಹಳೆಯ ವಸ್ತು ಸಂಗ್ರಹಾಲಯಗಳಲ್ಲಿ ಬಹು ಪ್ರಮುಖವಾದ ಸ್ಥಾನವನ್ನು ಪಡೆದಿದ್ದು, ಹಮೀರಸರ ಸರೋವರದ...

    + ಹೆಚ್ಚಿಗೆ ಓದಿ
  • 05ಭಾರತೀಯ ಸಂಸ್ಕತಿ ದರ್ಶನ

    ಭಾರತೀಯ ಸಂಸ್ಕತಿ ದರ್ಶನವು ಕಾಲೇಜು ರಸ್ತೆಯಲ್ಲಿದ್ದು, ಇದು ಕಚ್ ನ ಜಾನಪದ ಕಲೆ ಮತ್ತು ಕರಕುಶಲ ಕಲೆಯ ವ್ಯಾಪಕವಾಗಿ ಪ್ರಸಾರ ಮಾಡುವ ಮತ್ತು ಅದನ್ನು ಪ್ರದರ್ಶನ ಮಾಡುವ ಒಂದು ಕೇಂದ್ರವಾಗಿದೆ. ಇದು ಸೋಮವಾರ ಹೊರತು ಪಡಿಸಿ ವಾರದ ಎಲ್ಲ ದಿನಗಳು ತೆರೆದಿರುತ್ತದೆ. ಇಲ್ಲಿ ಅಪರೂಪವಾದ ಕರಕುಶಲ ಸಂಗ್ರಹವಿದೆ. ಇವುಗಳಲ್ಲಿ ಬಹುತೇಕ...

    + ಹೆಚ್ಚಿಗೆ ಓದಿ
  • 06ಸ್ವಾಮಿ ನಾರಾಯಣ ದೇವಸ್ಥಾನ

    ಇದು ರಾಮಕುಂಡ ಮೆಟ್ಟಿಲು ಬಾವಿಯ ಹತ್ತಿರದಲ್ಲಿದೆ. ಭುಜನ ಸ್ವಾಮಿ ನಾರಾಯಣ ದೇವಸ್ಥಾನವು ತುಂಬಾ ಸುಂದರವಾದ ಪರಿಸರವನ್ನು ಹೊಂದಿದೆ. ಈ ಸ್ಥಳದಲ್ಲಿ ನೀವು ದೇಶದ ಇತರ ಸ್ಥಳದಲ್ಲಿರುವ ಸ್ವಾಮಿ ನಾರಾಯಣ ದೇವಾಲಯದಂತೆ ರಾಧಾ ಕೃಷ್ಣರ ವಿವಿಧ ಭಂಗಿಯಲ್ಲಿರುವ ಸುಂದರವಾದ ಮರದ ಮೂರ್ತಿಗಳನ್ನು ನೊಡಬಹುದು.

    + ಹೆಚ್ಚಿಗೆ ಓದಿ
  • 07ಕಪ್ಪು ಬೆಟ್ಟಗಳು ( ಕಾಲೋ ದುಂಗಾರ)

    ಪ್ರಶಾಂತ ಮತ್ತು ನಿಗೂಢವಾದ ಸ್ಥಳ ಇದಾಗಿದು, ಇದು ಖಾವಡದ ಉತ್ತರ ದಿಕ್ಕಿನಿಂದ ಸುಮಾರು 25 ಕೀಲೊ ಮೀಟರ ದೂರದಲ್ಲಿದೆ. ಇದು ಕಚನ ಅತ್ಯಂತ ಎತ್ತರದ ಬೆಟ್ಟವಾಗಿದ್ದು, ಅತಿ ಎತ್ತರದ ತುದಿಯನ್ನು ಹೊಂದಿದೆ. ಇದು ಕಚನ ಗ್ರೇಟ ರಾಣವು ಕಚ ನಗರದ  ಪಕ್ಷಿ ನೋಟವನ್ನು ಒದಗಿಸುತ್ತದೆ. ಇಲ್ಲಿ 400 ವರ್ಷಗಳ ಹಳೆಯದಾದ ದತ್ತಾತ್ರೆಯ...

    + ಹೆಚ್ಚಿಗೆ ಓದಿ
  • 08ಕಚ್ ಮರಭೂಮಿ ವನ್ಯ ಮೃಗಧಾಮ

    ಕಚ್ ಮರಭೂಮಿ ವನ್ಯ ಮೃಗಧಾಮ

    ಕಚ್ ಮರಭೂಮಿ ವನ್ಯ ಮೃಗಧಾಮದ ಸಂಪೂರ್ಣ ಪ್ರದೇಶವು ತುಂಬಾ ಆಕರ್ಷಕವಾಗಿದೆ. 1986 ರಲ್ಲಿ ಈ ಪ್ರದೇಶವನ್ನು ಕಚ್ ಮರಭೂಮಿ ವನ್ಯ ಮೃಗಧಾಮ ಎಂದು ಘೋಷಿಸಲಾಯಿತು. ಇಲ್ಲಿ ಅಪರೂಪದ ತಳಿಗಳ ಪಕ್ಸಿಗಳು ಮತ್ತು ಆಗಾಧ ಪ್ರಮಾಣದ ಸಸ್ತನಿ ಪ್ರಾಣಿಗಳು ಇಲ್ಲಿವೆ. ಗ್ರೇಟ ರಾಣ ಅಫ್ ಕಚನ ಪ್ರಸ್ತುತ ಸ್ಥಳವು ಒಂದು ದೊಡ್ಡ ಜೌಗು...

    + ಹೆಚ್ಚಿಗೆ ಓದಿ
  • 09ಶಾರದ ಬೌಗ್ ಅರಮನೆ

    ಶಾರದ ಬೌಗ ಇದೊಂದು ಸುಂದರ ಅರಮನೆಯಾಗಿದ್ದು, ಇಲ್ಲಿ ಕಚ್ ನ ರಾಜರು ವಾಸಿಸುತ್ತಿದ್ದರು. ಕಚ್ ಪ್ರದೇಶದ ಕೊನೆಯ ರಾಜನಾದ ಮದನಸಿಂಗನು 1991 ರಲ್ಲಿ ಮರಣ ಹೊಂದಿದಾಗ ಅವನು ಇಲ್ಲಿಯೇ ವಾಸವಾಗಿದ್ದನು. ನಂತರ ಈ ಅರಮನೆಯಲ್ಲಿ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ಈ ವಸ್ತು ಸಂಗ್ರಹಾಲಯದಲ್ಲಿ ಕೇವಲ ಕರಕುಶಲ ವಸ್ತುಗಳಿಲ್ಲ....

    + ಹೆಚ್ಚಿಗೆ ಓದಿ
  • 10ರಾಯಲ್ ಛತ್ತರಿಗಳು

    ರಾಯಲ್ ಛತ್ತರಿಗಳು ಭುಜ್ ನ ಒಂದು ಪ್ರಶಾಂತ ಸ್ಥಳವಾಗಿದೆ.  ಇದು ನಗರದ ಒಳಗಡೆ ಇದೆ. ಅದರೆ ಸುತ್ತಮುತ್ತಲೂ ಜನಜಂಗುಳಿಯ ರಸ್ತೆಯಾಗಲೀ, ದೊಡ್ಡ ಕಟ್ಟಡವಾಗಲೀ ಇಲ್ಲ. ಇಲ್ಲಿರುವ ಸ್ಮಾರಕಗಳು ತುಂಬಾ ಆಕರ್ಷಕವಾಗಿವೆ. ಇದರಲ್ಲಿ ಕೆಲವು ಸ್ಮಾರಕಗಳು 2001 ರಲ್ಲಿ ನಡೆದ ಭೂಕಂಪದಲ್ಲಿ ನಾಶವಾದವು. 2 ನೇಯ ರಾಯಧನಜಿ, ಲಖಪತಿಜಿ...

    + ಹೆಚ್ಚಿಗೆ ಓದಿ
  • 11ರಾಮಕುಂಡ ಮೆಟ್ಟಿಲು ಬಾವಿ

    ರಾಮಕುಂಡ ಮೆಟ್ಟಿಲು ಬಾವಿಯು ತುಂಬಾ ಆಕರ್ಷಕವಾಗಿದ್ದು, ಇದು ಕಚ್ ನ ವಸ್ತು ಸಂಗ್ರಹಾಲಯ ಮತ್ತು ರಾಮಧುನ ದೇವಾಲಯದ ಹತ್ತಿರದಲ್ಲಿದೆ. ಈ ಬಾವಿಯ ಬಳಿ  ಕೆಲ ಸಮಯವನ್ನು ಕಳೆಯುವುದು ಪ್ರವಾಸಿಗರಿಗೆ  ಆರಾಮದಾಯಕವಾಗಿರುತ್ತದೆ. ಇದರ ಗೋಡೆಯ ಮೇಲೆ ರಾಮಾಯಣ ಭಂಗಿಗಳು  ಮತ್ತು ವಿಷ್ಣುವಿನ ಹತ್ತು ಅವತಾರಗಳ ಸುಂದರ...

    + ಹೆಚ್ಚಿಗೆ ಓದಿ
  • 12ಭುಜೋಡಿ

    ಕಲಾಪ್ರಿಯರು ಖಂಡಿತವಾಗಿಯೂ ಈ ಸ್ಥಳವನ್ನು ಪ್ರೀತಿಸುತ್ತಾರೆ. ಭುಜ್ ನಿಂದ ಕೇವಲ 8 ಕೀಲೊ ಮೀಟರ ದೂರದಲ್ಲಿರುವ ಒಂದು ಚಿಕ್ಕ ಪಟ್ಟಣವಾಗಿದೆ. ಈ ಪಟ್ಟಣದಲ್ಲಿರುವ ಬಹುತೇಕ ಸ್ಥಳೀಯರು ಕರಕುಶಲ ಕರ್ಮಿಗಳಾಗಿದ್ದಾರೆ. ಇದನ್ನು ಕಚ್ ನ ಜವಳಿ ಕೇಂದ್ರ ಎಂದು ಕರೆಯುತ್ತಾರೆ. ಇಲ್ಲಿ ಉತ್ತಮ ಹಸ್ತ ಕೌಶಲವಿರುವ ನೇಕಾರರನ್ನು,...

    + ಹೆಚ್ಚಿಗೆ ಓದಿ
  • 13ಧಾಮಡ್ಕಾ

    ಭುಜ್ ನಲ್ಲಿ ಅನೇಕ ಆಸಕ್ತಿಕರ ಪಟ್ಟಣಗಳಿವೆ. ಈ ಪಟ್ಟಣಗಳು ಕರಕುಶಲ ಕಲೆ ಮತ್ತು ಜವಳಿಗಳಿಗೆ ಹೆಚ್ಚು ಪ್ರಸಿದ್ಧಿಯನ್ನು ಪಡೆದಿವೆ. ಧಾಮಡ್ಕಾ ಇಂತಹ ನಗರಗಳಲ್ಲಿ ಒಂದು. ಇದು ಭುಜ್ ನ ಪೂರ್ವದಿಂದ 50 ಕೀಲೊ ಮೀಟರ ದೂರದಲ್ಲಿದೆ. ಇದು ಕರಕುಶಲ ಕರ್ಮಿಗಳ ಕೇಂದ್ರವಾಗಿದೆ.  ಅರ್ಜಾಖ ಬ್ಲಾಕ ಮುದ್ರಣ ತಂತ್ರಜ್ಞಾನದಲ್ಲಿ ಇವರ ಹಸ್ತ...

    + ಹೆಚ್ಚಿಗೆ ಓದಿ
  • 14ಕೇರಾ

    ಕೇರಾ ಇದು ಭುಜ್ ನ ದಕ್ಷಿಣದಿಂದ 22 ಕೀಲೊ ಮೀಟರ ದೂರದಲ್ಲಿದೆ. ಇದು ಸೋಲಂಕಿ ರಾಜವಂಶಕ್ಕೆ ಸೇರಿದ ಶಿವನ ದೇವಾಲಯವನ್ನು ಹೊಂದಿದೆ. ಈ ದೇವಾಲಯದ ಬಹುಭಾಗವು 1819ರಲ್ಲಿ ನಡೆದ ಭೂಕಂಪದಲ್ಲಿ ನಾಶವಾಯಿತು. ಆದರೆ ಈ ದೇವಾಲಯದ ಗರ್ಭಗುಡಿಯ ಭಾಗ ಮತ್ತು ಮೂರ್ತಿಯು ಈಗಲೂ ಹಾಗೆಯೇ ಉಳಿದಿದೆ. ಇದಕ್ಕೆ ಹತ್ತಿರವಾಗಿ ಕಪಿಲಕೋಟನ ಕೋಟೆಯಿದ್ದು...

    + ಹೆಚ್ಚಿಗೆ ಓದಿ
  • 15ಖಾವಡಾ

    ಖಾವಡಾ

    ಪ್ರವಾಸಿಗರು ಅನೇಕ ಕಾರಣಗಳಿಗೆ ಖಾವಡಾಕ್ಕೆ ಭೇಟಿ ಕೊಡುವುದು ಒಳ್ಳೆಯದು. ಇದು ಇಂಡಿಯಾ ಮತ್ತು ಪಾಕಿಸ್ತಾನ ಗಡಿ ಪ್ರದೇಶದಿಂದ ಸುಮಾರು ಕೇವಲ 30 ಕೀಲೊ ಮೀಟರ ದೂರದಲ್ಲಿದೆ. ಇದು ಕಚ್ ಪ್ರದೇಶದ ಕೊನೆಯ ಗ್ರಾಮವಾಗಿದೆ. ಇದು ಕರಕುಶಲ ಕಲೆ,ಚರ್ಮದ ಉತ್ಪನ್ನಗಳು,  ಸ್ಥಳೀಯ ಕುಶಲ ಕರ್ಮಿಗಳಿಂದ ತಯಾರಿಸಲ್ಪಡುವ ಕಲಾತ್ಮಕ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri