Search
  • Follow NativePlanet
Share

ಭುಜ್ : ರಾಜಹಂಸಗಳ ವಿರಾಮದ ತಾಣ

70

ಭುಜ್ ಇದು ಆಳವಾದ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಗರವಾಗಿದ್ದು, ಕಚ್ ನ ಜಿಲ್ಲಾ ಮುಖ್ಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ನಗರದ ಪೂರ್ವ ಭಾಗದಲ್ಲಿರುವ ಭುಜಿಯೋ ದುಂಗಾರ ಎಂಬ ಬೆಟ್ಟದ ಕಾರಣದಿಂದಾಗಿ ಮತ್ತು ಭುಜಂಗ ಎಂಬ ದೊಡ್ಡ ಸರ್ಪದ ಕಾರಣದಿಂದಾಗಿ ಈ ನಗರಕ್ಕೆ ಭುಜ್ ಎಂಬ ಹೆಸರು ಬಂದಿದೆ ಎಂದು ನಂಬಲಾಗಿದೆ. ಭುಜಂಗ ನಾಗ ದೇವತೆಗೆ ಈ  ಬೆಟ್ಟದ ಮೇಲೆ ದೇವಾಲಯವನ್ನು ನಿರ್ಮಿಸಲಾಗಿದೆ.

ಇತಿಹಾಸ:

ಭುಜ ನಗರವು ಭಾರತದ ಇತಿಹಾಸದೊಂದಿಗೆ ತಳುಕು ಹಾಕಿಕೊಂಡಿದೆ. ಭುಜ ನಗರ ಇತಿಹಾಸವು ಪೂರ್ವ ಇತಿಹಾಸ ಕಾಲದಿಂದಲೂ ಆರಂಭವಾಗುತ್ತದೆ. ಸಿಂಧು ಕಣಿವೆ ನಾಗರಿಕತೆ ಮತ್ತು ಅಲೇಗ್ಜಾಂಡರನ ಆಕ್ರಮಣ ಕಾಲದಿಂದ ಗುಜರಾತಿನ ರಾಜರಾದ ಜಡೇಜ ರಜಪೂತರ ಮತ್ತು ಬ್ರಿಟಿಷರ ಆಡಳಿತದವರೆಗೂ ಇದು ತನ್ನ ಐತಿಹಾಸಿಕ ವ್ಯಾಪ್ತಿಯನ್ನು ಹೊಂದಿದೆ. 18 ನೇ ಶತಮಾನದ;;ಒ ರಾವ ಗೋಡಜಿ ಭುಜ್ ನ ಕೋಟೆಯನ್ನು ನಿರ್ಮಿಸಿದರು. ಮೊಘಲ ಸಾಮ್ರಾಜ್ಯ ಅವನತಿಯ ಸಮಯದಲ್ಲಿ ಹುಟ್ಟಿಕೊಂಡ ರಾಜಕೀಯ ಪರಿಸ್ಥಿತಿಯಿಂದ ಕಚ ಪ್ರದೇಶವನ್ನು ರಕ್ಷಿಸಲು ಈ ಕೋಟೆಯನ್ನು ನಿರ್ಮಿಸಲಾಯಿತು. ಈ ಕೋಟೆಯು 11 ಮೀಟರ ಉದ್ದದ ಗೋಡೆಯನ್ನು ಮತ್ತು ನಗರದ ಸುತ್ತ 51 ಗನಗಳನ್ನು ಒಳಗೊಂಡಿದೆ.

ಐತಿಹಾಸಿಕ ಮಹತ್ವದ ಸ್ಥಳಗಳು:

ಭುಜ್ ನಲ್ಲಿ ಹಲವಾರು ಐತಿಹಾಸಿಕ ಸ್ಥಳಗಳಿವೆ. ಶಾರದ ಬೌಗ ಇದೊಂದು ಸುಂದರ ಅರಮನೆಯಾಗಿದ್ದು, ಇಲ್ಲಿ ಕಚ್ ನ ರಾಜರು ವಾಸಿಸುತ್ತಿದ್ದರು. ಕಚ್ ಪ್ರದೇಶದ ಕೊನೆಯ ರಾಜನಾದ ಮದನಸಿಂಗನು 1991 ರಲ್ಲಿ ಮರಣ ಹೊಂದಿದಾಗ ಅವನು ಇಲ್ಲಿಯೇ ವಾಸವಾಗಿದ್ದನು. ಐನಾ ಮಹಲ ಮತ್ತು ಕನ್ನಡಿ ಮಹಲ ಅನ್ನು ರಾಜ ಲಖಪತಿಯು ನಿರ್ಮಿಸಿದನು. ರಾಮ ಸಿಂಗ ಮಲಾಮ ಎಂಬ ವ್ಯಕ್ತಿಯು ಇಂಡೋ – ಯರೋಪಿಯನ್ ಶೈಲಿಯಲ್ಲಿ ಇದನ್ನು ನಿರ್ಮಿಸಿದ್ದಾನೆ. ಪ್ರಾಗ ಮಹಲ್  19 ನೇ ಶತಮಾನದಲ್ಲಿ ಇಟಾಲಿಯನ – ಗೋಥಾಲಿಕ ಶೈಲಿಯಲ್ಲಿ ನಿರ್ಮಾಣವಾಗಿದ್ದು ತುಂಬಾ ಆಕರ್ಷಕವಾಗಿದೆ.

ರಾಮಕುಂಡ ಮೆಟ್ಟಿಲು ಬಾವಿಯು ನೋಡಲು ಆಕರ್ಷಕವಾಗಿದ್ದು, ಅದರ ಗೋಡೆಯ ಮೇಲೆ ರಾಮಾಯಣ ಭಂಗಿಗಳು  ಮತ್ತು ವಿಷ್ಣುವಿನ ಹತ್ತು ಅವತಾರಗಳ ಸುಂದರ ಮೂರ್ತಿಗಳನ್ನು ಕಾಣಬಹುದು. ಇಲ್ಲಿರುವ ರಾಯಲ್ ಛತ್ತರಿಯ ಸ್ಮಾರಕಗಳು ಮನಮೋಹಕವಾಗಿವೆ. ಕಚ್ ನ ವಸ್ತು ಸಂಗ್ರಹಾಲಯವು ಕ್ರಿ.ಪೂ ಒಂದನೇ ಶತಮಾನಕ್ಕೆ ಸೇರಿದ ಕ್ಷತ್ರಪ ರಾಜವಂಶಕ್ಕೆ ಸೇರಿದ ಅಪರೂಪದ ಶಾಸನಗಳನ್ನು ಹೊಂದಿದೆ. ಹಮೀರಸರ ಸರೋವರ ಮತ್ತು ಸ್ವಾಮಿ ನಾರಾಯಣ ದೇವಸ್ಥಾನ ನೋಡಲು ತುಂಬಾ ಆಕರ್ಷಣೀಯವಾಗಿದೆ.

ಧರ್ಮ:

ಭುಜ ನಗರದ ಸ್ವಾಮಿ ನಾರಾಯಣ ಸಂಪ್ರದಾಯ ಇಲ್ಲಿರುವ ಪ್ರಸಿದ್ಧ ದೇವಾಲಯವಾಗಿದೆ. ಇಲ್ಲಿನ ಪ್ರಮುಖ ಪ್ರಮುಖ ಧರ್ಮಗಳು ಎಂದರೆ ವೈಷ್ಣವ ಹಿಂದು ಧರ್ಮ, ಜೈನ ಧರ್ಮ ಮತ್ತು ಇಸ್ಲಾಂ ಧರ್ಮ. ಲಖಪತದಲ್ಲಿ ಸಿಖ ಗುರುದ್ವಾರವಿದೆ. ಗುರು ನಾನಕರು ಕಚಗೆ ಭೇಟಿ ನೀಡಿದಾಗ ಈ ಸ್ಥಳದಲ್ಲಿ ವಾಸವಾಗಿದ್ದರು.

ನೈಸರ್ಗಿಕ ಪರಿಸರ ವ್ಯವಸ್ಥೆಗಳು:

ಖಾವಡಾ ಇದು ಭುಜ ನಗರದಿಂದ ಕೇವಲ 66 ಕೀಲೊ ಮೀಟರ ದೂರಲ್ಲಿದೆ. ಇಲ್ಲಿರುವ ಹ್ಯಾಮ್ಲೆಟ ಎಂಬ ಪ್ರದೇಶವು ರಾಜಹಂಸಗಳ ನಿರ್ಗಮನ ಬಿಂದು ಆಗಿದೆ. ಇಲ್ಲಿ ಪ್ರತಿ ವರ್ಷವೂ ಇಲ್ಲಿ ಸಾವಿರಾರು ರಾಜಹಂಸಗಳು ವಲಸೆ ಬರುತ್ತವೆ. ಇದು ಜಗತ್ತಿನ ಅತಿ ದೊಡ್ಡ ರಾಜಹಂಸಗಳ ಕಾಲೋನಿಯಾಗಿದೆ. ಇದನ್ನು ನೋಡುವುದೇ ಕಣ್ಣಿಗೆ ಆನಂದ. ಈ ಕಾಲೋನಿಯು ಜಾಮಲುಂಡಲಿಯ ಎಂಬ ಮರಭೂಮಿಯಲ್ಲಿರುವ ಸರೋವರದ ಹತ್ತಿರ ಇದೆ. ಇಲ್ಲಿಗೆ ಪ್ರತಿವರ್ಷವೂ ಅಕ್ಟೋಬರ ಮತ್ತು ಮಾರ್ಚ ತಿಂಗಳಿನಲ್ಲಿ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.

ಇಲ್ಲಿಗೆ ನೀವು ತಲುಪಲು ಒಂಟೆ ಸವಾರಿಯನ್ನು ಮಾಡಲೇಬೇಕು. ಇದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ. ಛಾರಿ ಧಂಧವು ಇನ್ನೊಂದು ಉತ್ತಮ ಪಾರಿಸಾರಿಕ ಸ್ಥಳವಾಗಿದ್ದು ಇದು ಭುಜ್ ನ ವಾಯುವ್ಯ ಭಾಗದಿಂದ 80 ಕೀಲೊ ಮೀಟರ ದೂರದಲ್ಲಿದೆ. ಇದರ ಅರ್ಥ ಆಳವಿಲ್ಲದ ಜೌಗು ಪ್ರದೇಶ ಎಂದರ್ಥ. ಇಲ್ಲಿ ಪ್ರವಾಸಿಗರು ಮತ್ತು ಪಕ್ಷಿ ಪ್ರಿಯರು ಅನೇಕ ಪಕ್ಷಿಗಳ ಅಪರೂಪದ ತಳಿಗಳನ್ನು ನೋಡಬಹುದು. ಇಲ್ಲಿ ನೆಲಗುಬ್ಬಿಗಳು, ಜಲ ನೋಣಗಳನ್ನು ಕಾಣಬಹುದು.

ಕಚ್ ನ ಕಪ್ಪು ಬೆಟ್ಟವು ನೋಡಲು ಅಕರ್ಷಕವಾಗಿದ್ದು , ಇದು ಖಾವಡ ದಿಂದ 25 ಕೀಲೊ ಮೀಟರ ದೂರದಲ್ಲಿದೆ. ಇದು ತುಂಬಾ ಎತ್ತರವಾಗಿದೆ. ಇದು ಕಚನ ಗ್ರೇಟ ರಾಣವು ಕಚ ನಗರದ  ಪಕ್ಷಿ ನೋಟವನ್ನು ಒದಗಿಸುತ್ತದೆ. ಇಲ್ಲಿ 400 ವರ್ಷಗಳ ಹಳೆಯದಾದ ದತ್ತಾತ್ರೆಯ ದೇವಸ್ಥಾನವಿದ್ದು ಪ್ರವಾಸಿ ಆಕರ್ಷಣೆಯ ತಾಣವಾಗಿದೆ. ದತ್ತಾತ್ರೇಯ ಸ್ವಾಮಿಯು ಮೂರು ತಲೆಗಳನ್ನು ಹೊಂದಿದ್ದು, ಇದು ಶಿವ , ವಿಷ್ಣು ಮತ್ತು ಬ್ರಹ್ಮನನ್ನು ಪ್ರತಿನಿಧಿಸುತ್ತದೆ. ಈ ಬೆಟ್ಟವು ಪಾಕಿಸ್ತಾನ ಗಡಿ ಪ್ರದೇಶಕ್ಕೆ ತುಂಬಾ ಹತ್ತಿರದಲ್ಲಿದ್ದು, ಇಲ್ಲಿ ಆರ್ಮಿ ಪೋಸ್ಟ ಇದೆ. ಇಲ್ಲಿ ಕೇವಲ ಸೈನಿಕ ಸಿಬ್ಬಂದಿ ಮಾತ್ರ ಇರುತ್ತಾರೆ.

ಭುಜ್ ನ ಇತರ ಪ್ರವಾಸಿ ಆಕರ್ಷಣೆಗಳು ಸಹ ತುಂಬಾ ಪ್ರಸಿದ್ಧವಾಗಿವೆ. ಕಚ್ ವಿಶೇಷವಾಗಿ ತನ್ನ ಉಡುಪು ಕಸೂತಿ ಕಲೆಗೆ ಹೆಚ್ಚು ಪ್ರಸಿದ್ದವಾಗಿದೆ. ಈ ನಗರವು ಐತಿಹಾಸಿಕವಾಗಿಯೂ ಹೆಚ್ಚು ಪ್ರಸಿದ್ದವಾಗಿದ್ದು, ಶತಮಾನಗಳಿಂದಲೂ ಪ್ರಗತಿ ಪಥದತ್ತ ಧಾವಿಸುತ್ತಿದೆ. ಇಲ್ಲಿ ಪ್ರವಾಸಿಗರು ಸುಂದರ ಪ್ರವಾಸದ ಅನುಭವವನ್ನು ಪಡೆಯಬಹುದು.

ಭುಜ್ ಪ್ರಸಿದ್ಧವಾಗಿದೆ

ಭುಜ್ ಹವಾಮಾನ

ಉತ್ತಮ ಸಮಯ ಭುಜ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಭುಜ್

  • ರಸ್ತೆಯ ಮೂಲಕ
    ಭುಜ್ ನಗರವನ್ನು ಸರಕಾರಿ ಇಲ್ಲವೇ ಖಾಸಗಿ ಕಂಪನಿ ಬಸಗಳ ಮೂಲಕ ಸುಲಭವಾಗಿ ತಲುಪಬಹುದು. ಇಲ್ಲಿಗೆ ಬರಲು ಲಕ್ಸುರಿ, ಸ್ಲೀಪರ, ನಾನ್-ಸ್ಲೀಪರ್ ಮುಂತಾದ ವಿಶೇಷವಾದ ಬಸ್ಸುಗಳು ಪ್ರವಾಸಿಗರಿಗೆ ಅಹ್ಮದಾಬಾದನಿಂದ ಸಿಗುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಭುಜ್ ಎಕ್ಸಪ್ರೆಸ್ಸ ಮತ್ತು ಕಚ್ ಎಕ್ಸಪ್ರೆಸ್ಸ ಈ ಎರಡು ರೇಲ್ವೆಗಳು ಪ್ರತಿದಿನವು ಭುಜ್ ಮತ್ತು ಅಹ್ಮದಾಬಾದ ನಡುವೆ ಚಲಿಸುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಭುಜ್ ನಲ್ಲಿ ವಿಮಾನ ನಿಲ್ದಾಣವಿದ್ದು ಇಲ್ಲಿ ಪ್ರತಿದಿನವೂ ಭುಜ ಮತ್ತು ಮುಂಬಯಿಯ ನಡುವೆ ಹಾರಾಡುವ ವಿಮಾನ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri