ಫಾರೆಸ್ಟ್ ಪಾರ್ಕ್ ಒರಿಸ್ಸಾದ ದಾಜಧಾನಿ ಭುಬನೇಶ್ವರದ ಪ್ರಸಿದ್ಧ ಉದ್ಯಾನವನಗಳಲ್ಲಿ ಒಂದಾಗಿದೆ. ಈ ಅದ್ಭುತವಾದ ಉದ್ಯಾನವನವು ಕ್ಯಾಪಿಟಲ್ ಆಸ್ಪತ್ರೆಯ ಸಮೀಪದಲ್ಲಿ ನೆಲೆಗೊಂಡಿದೆ. ಈ ಉದ್ಯಾನವನಕ್ಕೆ ಸ್ಥಳೀಯರು ಮತ್ತು ಪ್ರವಾಸಿಗರು ಎಲ್ಲರೂ ಭೇಟಿ ನೀಡುತ್ತಿರುತ್ತಾರೆ. ಈ ಉದ್ಯಾನವನದಲ್ಲಿ ವಿಶಾಲವಾದ ಆಟದ ಮೈದಾನ, ದೊಡ್ಡದಾದ ಹಸಿರು ಮರಗಳು ಮತ್ತು ಗಿಡಗಳು ಎಲ್ಲರನ್ನು ಆಕರ್ಷಿಸುತ್ತಿವೆ. ಇಡೀ ಉದ್ಯಾನವನವು ಹಸಿರು ಹಾಸಿನಿಂದ ಆವೃತವಾಗಿದೆ. ಬೆಳಗಿನ ತಂಗಾಳಿಯಲ್ಲಿ ಇಲ್ಲಿ ವಾಯುವಿಹಾರಕ್ಕೆಂದು ಹಲವಾರು ಜನರು ಆಗಮಿಸುತ್ತಿರುತ್ತಾರೆ.
ಇಲ್ಲಿನ ಸ್ವಚ್ಚಗಾಳಿಯು ಬೆಳಗ್ಗೆ ಮತ್ತು ಸಂಜೆಗಳ ಸಮಯದಲ್ಲಿ ಇಲ್ಲಿಗೆ ಬರುವ ಜನರಿಗೆ ಆಹ್ಲಾದಕತೆಯನ್ನು ಮತ್ತು ಮನಸ್ಸಿಗೆ ಮುದವನ್ನು ನೀಡುತ್ತದೆ. ಇಲ್ಲಿನ ಹುಲ್ಲು ಹಾಸಿನ ಮೇಲೆ ಆಟವಾಡಲು ಮಕ್ಕಳು ಸಹ ಇಷ್ಟಪಡುತ್ತಾರೆ. ಈಗಿನ ದೈನಂದಿನ ಜಂಜಡಗಳ ನಡುವೆ ಈ ಉದ್ಯಾನವನವು ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಒಂದು ಸವಿಯಾದ ಅನುಭವಗಳ ನೆನಪನ್ನು ನೀಡುತ್ತದೆ.