Search
  • Follow NativePlanet
Share
ಮುಖಪುಟ » ಸ್ಥಳಗಳು » ಭುವನೇಶ್ವರ » ಆಕರ್ಷಣೆಗಳು » ಡೆರಸ್ ಜಲಾಶಯ

ಡೆರಸ್ ಜಲಾಶಯ, ಭುವನೇಶ್ವರ

1

ಡೆರಸ್ ಜಲಾಶಯವು ಭುಬನೇಶ್ವರದ ಹೊರವಲಯದಲ್ಲಿರುವ ಚಂದಕ ರಾಷ್ಟ್ರೀಯ ಉದ್ಯಾನವನದ ಬಳಿಯಲ್ಲಿ ನೆಲೆಗೊಂಡಿದೆ. ಈ ಜಲಾಶಯವು ಒಡಿಶಾದ ಮೂರನೆಯ ಅತಿ ದೊಡ್ಡ ಜಲಾಶಯವಾಗಿದೆ. ಈ ಸ್ಥಳದ ಸೌಂದರ್ಯವು ಎಂತಹವರ ಮನಸ್ಸನ್ನು ಸಹ ಸೂರೆಗೊಳ್ಳುತ್ತದೆ. ಇಲ್ಲಿನ ಪ್ರಶಾಂತವಾದ ವಾತಾವರಣ ಮತ್ತು ಪ್ರಾಕೃತಿಕ ಸೌಂದರ್ಯವು ಪ್ರವಾಸಿಗರಿಗೆ ವಿಶ್ರಾಂತಿಯನ್ನು ಮತ್ತು ಅವರ ಮನಸ್ಸಿಗೆ ಮುದವನ್ನು ನೀಡುತ್ತದೆ. ಈ ಜಲಾಶಯವು ಮಳೆ ನೀರನ್ನು ಸಂಗ್ರಹಿಸುವ ಸಲುವಾಗಿ ನಿರ್ಮಿಸಲಾಗಿದೆ. ಈ ಜಲಾಶಯದ ಬಳಿಯಲ್ಲಿ ಕಾಟೇಜ್‍ಗಳನ್ನು ನಿರ್ಮಿಸಲಾಗಿದೆ. ಈ ಜಲಾಶಯವನ್ನು ಒಂದು ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಇದರ ಸುತ್ತಲಿನ ನೋಟವು ಕಾಟೇಜುಗಳ ಬಳಿಯಿಂದ ನಯನ ಮನೋಹರವಾಗಿ ಕಾಣುತ್ತದೆ.

ಬೆಟ್ಟದ ಮೇಲೆ ಇರುವ ಕಾಟೇಜ್‍ಗಳು ಮೂರು ಉತ್ತಮ ಪೀಠೋಪಕರಣಗಳನ್ನು ಹೊಂದಿರುವ ಗುಡಿಸಲು ಮಾದರಿಯ ಕುಟೀರಗಳನ್ನು ಹೊಂದಿದೆ. ಜಲಾಶಯದಿಂದ ಆರಂಭವಾಗಿ ಅದರ ಸುತ್ತ ಸಾಗುವ 40 ಕಿ.ಮೀ ಉದ್ದದ ಮಾರ್ಗದರ್ಶಿ ಸಹಿತವಾದ ಪ್ರವಾಸವನ್ನು ಇಲ್ಲಿ ಆಯೋಜಿಸಲಾಗುತ್ತದೆ. ಪ್ರವಾಸಿಗರು ಈ ಜಲಾಶಯವನ್ನು ನೋಡಲು ಒಂದು ಪ್ರವಾಸವನ್ನು ಕೈಗೊಳ್ಳಬಹುದು. ಅನುಕೂಲವಿದ್ದರೆ ಇಲ್ಲಿನ ಕಾಟೇಜ್‍ಗಳಲ್ಲಿ ರಾತ್ರಿಯನ್ನು ಕಳೆಯಬಹುದು. ಈ ಜಲಾಶಯಕ್ಕೆ ವರ್ಷದ ಯಾವುದೇ ಸಮಯದಲ್ಲಿ ಬೇಕಾದರು ಭೇಟಿ ನೀಡಬಹುದು.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri