ಭೋಪಾಲ್ ನಲ್ಲಿರುವ ಅಕ್ವೇರಿಯಂ, ರಾಜ್ ಭವನ ಮತ್ತು ಹಳೆಯ ಅಸೆಂಬ್ಲಿ ಹಾಲ್ ನ ಹತ್ತಿರದಲ್ಲಿದೆ. ಇದನ್ನು 1977ರಲ್ಲಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಯಿತು. ಹಾಗೆಯೇ ಇಲ್ಲಿ ವಿವಿಧ ಭಾರತೀಯ ಮತ್ತು ವಿದೇಶಿ ಮೀನುಗಳನ್ನು ಕಾಣಬಹುದು. ಈ ಸ್ಥಳವು ಮಕ್ಕಳೊಂದಿಗೆ ಭೇಟಿ ನೀಡಬಹುದಾದ ಸ್ಥಳ. ಅಕ್ವೇರಿಯಂ ಎರಡು ಮಹಡಿಯಲ್ಲಿ ಒಳಗೊಂಡಿದೆ; ಮೇಲಿನ ಮಹಡಿ ಗೋಲ್ಡನ್ ಶಾರ್ಕ್, ರೋಸಿ ಬಾರ್ಬ್, ಗೋಲ್ಡನ್ ಪ್ಲೇಟಾ, ಗೋಲ್ಡನ್ ಗೊರ್ಮಿ, ಪ್ಯಾರಡೈಸ್ ಬ್ಲೂ, ಕಿಂಗ್ ಕೋಬ್ರಾಸ್, ಕಿಂಗ್ ಜೀಬ್ರಾ, ಮೊದಲಾದ ಅನೇಕ ಮೀನುಗಳ ನೆಲೆಯಾಗಿರುವ 40 ಗಾಜಿನ ಅಕ್ವೇರಿಯಮ್ ಗಳನ್ನು ಹೊಂದಿದೆ.
ಕೆಳಗಿನ ಮಹಡಿಯಲ್ಲಿ ಇತರ ರಾಜ್ಯಗಳ ಹಲವು ಮೀನುಗಳು ನೆಲೆಯಾಗಿರುವ 26 ದೊಡ್ಡ ಅಕ್ವೇರಿಯಮ್ ಹೊಂದಿದೆ. ಇಲ್ಲಿನ ಮೀನುಗಳಲ್ಲಿ ಕೆಲವು ಸರೋವರಗಳಿಂದ ತಂದವು ಮತ್ತು ಕೆಲವು ಕೊಳಗಳು ಮತ್ತು ನದಿಗಳಿಂದ ತಂದವುಗಳಾಗಿವೆ. ಇಲ್ಲಿರುವ ಕೆಲವು ಪ್ರಮುಖ ಮೀನುಗಳೆಂದರೆ, ರೋಹು, ಕೋಲೆಟ್, ಕಟ್ಲಾ, ಪಡಿನ್, ಸವಾಲ್/ಸ್ವಾಲ್, ಟಿಕ್ಟೋ, ಬಾಮ್ ಮೀನು, ಮಿರ್ಗಲ್ ಮತ್ತು ಪೆನ್ಸಿಲ್-ಫೈರಾ ಮೊದಲಾದವು. ಈ ಅಕ್ವೇರಿಯಂ ಎರಡು ಋತುಗಳಲ್ಲಿ ಅಂದರೆ, ಏಪ್ರಿಲ್ ನಿಂದ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಿಂದ ಮಾರ್ಚ್ ತಿಂಗಳಿನವರೆಗೆ ತೆರೆದಿರುತ್ತದೆ.