ದೇವ್ ನಲ್ಲಿರುವ ಸೂರ್ಯ ದೇವಾಲಯವು ಅತಿ ಹಳೆಯದಾದ ಸೂರ್ಯನ ಸ್ಥಾನವಾಗಿದೆ. ಇದು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು, ಈ ದೇವಳದ ಅರ್ಚಕ ವರ್ಗದವರ ಪ್ರಕಾರ ಇದು 9 ಲಕ್ಷ ವರ್ಷಗಳಿಗಿಂತಲೂ ಹಳೆಯದಾಗಿದೆ. ಈ ದೇವಸ್ಥಾನವು ಭಗವಾನ್ ಶ್ರೀರಾಮಚಂದ್ರನ ಕಾಲಾವಧಿಯಾದ ತ್ರೇತಾಯುಗಕ್ಕೆ ಸೇರಿದ್ದು ಎಂದು ಊಹಿಸಲಾಗಿದೆ. ಈ ದೇವಳದ ಕಟ್ಟಡದ ಕುರಿತು ಅನೇಕ ಕಥೆಗಳು ಮತ್ತು ಪುರಾಣಗಳು ತಳುಕು ಹಾಕಿಕೊಂಡಿರುವುದು ಮಾತ್ರವಲ್ಲದೇ, ದೇವಸ್ಥಾನವು ತನ್ನ ವಾಸ್ತುಶಿಲ್ಪ ಮತ್ತು ಕೌಶಲ್ಯಮಯವಾದ, ಅದ್ಭುತವಾದ ಕೆತ್ತನೆಯ ಕೆಲಸಗಳಿಗೆ ಅತ್ಯಂತ ಪ್ರಸಿದ್ಧವಾದುದಾಗಿದೆ.