ಅರಣ್ಯದೇವಿ ದೇವಸ್ಥಾನ, ಹೆಸರೇ ಸೂಚಿಸುವಂತೆ ಈ ದೇವಸ್ಥಾನವು ಅರಣ್ಯದೇವಿಗೆ ಅರ್ಥಾತ್ ವನದೇವಿಗೆ ಸಮರ್ಪಿತವಾಗಿದೆ. ಈ ದೇವಸ್ಥಾನ ಮತ್ತು ದೇವತೆಯು ಭಕ್ತಾದಿಗಳ ಅಭೀಷ್ಟೆಗಳನ್ನು ಈಡೇರಿಸುವಳು ಎಂಬ ನಂಬಿಕೆಯಿದೆ. ಈ ದೇವಸ್ಥಾನವು ಅರ್ರಾಹ್ ರೈಲ್ವೆ ನಿಲ್ದಾಣದಿಂದ ಕೇವಲ 3.2 ಕಿ. ಮೀ. ನಷ್ಟು ದೂರದಲ್ಲಿದ್ದು, ಇಲ್ಲಿಗೆ ಆಟೋರಿಕ್ಷಾ ಅಥವಾ ಕುದುರೆ ಟಾಂಗಾದ ಮೂಲಕ ಸುಲಭವಾಗಿ ತಲುಪಬಹುದು.