ಭೀಮಾಶಂಕರ ಗ್ರಾಮದ ಒಳಭಾಗದಲ್ಲಿ 2,100 ರಿಂದ 3,800 ಅಡಿಗಳಷ್ಟು ಎತ್ತರದಲ್ಲಿರುವ ಭೀಮಾಶಂಕರ ವನ್ಯಜೀವಿ ಅಭಯಾರಣ್ಯವು 100 ಚದರ ಕಿಮೀ ಪ್ರದೇಶದಲ್ಲಿ ವ್ಯಾಪಿಸಿದ್ದು, ಸಹ್ಯಾದ್ರಿ ಪರ್ವತ ಶ್ರೇಣಿಗಳ ಸಮೃದ್ಧ ವನರಾಶಿಯ ಮಡಿಲಲ್ಲಿ ಸ್ಥಿತಗೊಂಡಿದೆ.
ಅಳಿವಿನಂಚಿನಲ್ಲಿರುವ ವನ್ಯಜೀವಿಗಳಾದ ಶೆಕ್ರು ಮತ್ತು ದೈತ್ಯ ಜಾತಿಯ ಭಾರತೀಯ ಅಳಿಲುಗಳು, ಕತ್ತೆಕಿರುಬಗಳು, ಫ್ಲೈಯಿಂಗ್ ಅಳಿಲುಗಳು, ಬೊಗಳುವ ಜಿಂಕೆಗಳು, ಚಿರತೆಗಳು, ಮುಳ್ಳುಹಂದಿಗಳು ಮತ್ತು ವೈಲ್ಡ್ ಬೊರ್ಸ್ ಗಳನ್ನು ಇಲ್ಲಿಯ ಅಭಯಾರಣ್ಯದಲ್ಲಿ ಕಾಣಬಹುದು.
ಸರಳೆಸಿಳ್ಳಾರ, ಪಾರಿವಾಳ, ಹರಟೆಮಲ್ಲ ಕ್ವೇಕರ್, ಮಲಬಾರ್ ಬೂದು ಹಾರ್ನ್ ಬಿಲ್ ಮತ್ತು ಬೂದು ಕಾಡು ಕೋಳಿಗಳು, ಪಕ್ಷಿ ವೀಕ್ಷಕರಿಗೆ ಮತ್ತು ನಿಸರ್ಗ ಪ್ರೇಮಿಗಳಿಗೆ ಆನಂದ ನೀಡುವಲ್ಲಿ ಎಅರಡು ಮಾತಿಲ್ಲ.
ಮಾಂತ್ರಿಕ ಗಿಡಮೂಲಿಕೆಗಳು, ಸಸ್ಯಗಳು ಮತ್ತು ಮರಗಳನ್ನೊಳಗೊಂಡಂತೆ ಇಲ್ಲಿನ ವೈವಿಧ್ಯಮಯ ಸಸ್ಯರಾಶಿಯನ್ನು ಸವಿಯಲು ಈ ಅಭಯಾರಣ್ಯಕ್ಕೆ ವಿಶೇಷವಾಗಿ ಮಳೆಗಾಲದಲ್ಲಿ ಭೇಟಿನೀಡಿದರೊಳಿತು.