ವೇಲವದರ್ ರಾಷ್ಟ್ರೀಯ ಪಾರ್ಕ್ 1976ರಲ್ಲಿ ಅಸ್ತಿತ್ವಕ್ಕೆ ಬಂತು. ಇದು ಭಲ್ ಪ್ರಾಂತ್ಯದಲ್ಲಿದ್ದು ಇದು ಸೌರಾಷ್ಟ್ರ ಭಾಗದ ಗುಜರಾತ್ ರಾಜ್ಯದಲ್ಲಿದೆ. ಇದು ಭಾವನಗರದ ಮಹಾರಾಜರ ಖಾಸಾಗಿ ಸ್ವತ್ತಾಗಿತ್ತು, ಅವರು ಇಲ್ಲಿ ಬೇಟೆಗೆ ಬರುತ್ತಿದ್ದರು. ಕಪ್ಪು ಬಣ್ಣದ ಗಂಡು ಜಿಂಕೆ ಈ ರಾಷ್ಟ್ರೀಯ ಪಾರ್ಕಿನ ಆಕರ್ಷಣೆ. ಇಲ್ಲಿ ಕಾಡುಬೆಕ್ಕು, ಜಿಂಕೆ ಮುಂತಾದ ವನ್ಯಜೀವಿಗಳನ್ನು ಕಾಣಬಹುದಾಗಿದೆ.