ಚಾರಣದಂತಹ ಸಾಹಸಪ್ರಿಯರಿಗೆ ಇಂದ್ರಹಾರ್ ರಹದಾರಿ ಹೇಳಿ ಮಾಡಿಸಿದ ಜಾಗ. ಇಂದ್ರಹಾರ ಪಾಸ್(ರಹದಾರಿ) ಒಂದು ಪ್ರಮುಖ ಪ್ರವಾಸಿ ಗಮ್ಯಸ್ಥಾನವಾಗಿದ್ದು ದೌಲಾಧರ್ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ 4342 ಮೀಟರ್ ಎತ್ತರದಲ್ಲಿದೆ. ಈ ರಹದಾರಿ ಚಂಬಾ ಮತ್ತು ಕಂಗ್ರಾ ಜಿಲ್ಲೆಗಳ ಭೌಗೋಳಿಕ ಗಡಿ. ಇಲ್ಲಿಗೆ ನಾವು ಧರ್ಮಶಾಲ ಅಥವಾ ಮ್ಯಾಕ್ಲಿಯೋಗಂಜ್ ನಿಂದ ಚಾರಣ ಹೊರಟು ಸುಲಭವಾಗಿ ತಲುಪಬಹುದು. ಏಪ್ರಿಲ್ ತಿಂಗಳಿನಿಂದ ಅಕ್ಟೋಬರ್ ಮಧ್ಯಭಾಗದಲ್ಲಿ ಇಲ್ಲಿನ ಚಾರಣವನ್ನು ಆಸ್ವಾದಿಸಬಹುದು.