Search
  • Follow NativePlanet
Share

ಭಗ್ಸು (ಭಗ್ಸುನಾಗ್) - ಸೌಂದರ್ಯದ ಖನಿ!

15

ಹಿಮಾಚಲ ಪ್ರದೇಶದ ಸುಂದರ ಪ್ರವಾಸಿ ತಾಣವಾಗಿರುವ ಭಗ್ಸು ಮ್ಯಾಕ್ಲಿಯೋಗಂಜ್ ಗೆ ಹತ್ತಿರದಲ್ಲಿದೆ. ಈ ಪ್ರವಾಸಿ ಗಮ್ಯಸ್ಥಾನ ಮನೆಮಾತಾಗಿರುವುದು ಇಲ್ಲಿರುವ ಪ್ರಾಚಿನ ದೇವಸ್ಥಾನ ಮತ್ತು ಮನಮೋಹಕ ಜಲಪಾತದಿಂದ. ಧಾರ್ಮಿಕ ಮಹತ್ವದ ಸ್ಪರ್ಶವುಳ್ಳದ್ದರಿಂದ ಮತ್ತು ಧರ್ಮಶಾಲಾದ ಸನ್ನಿಧಿಯಲ್ಲಿರುವುದರಿಂದ ವರ್ಷಂಪ್ರತಿ ಪ್ರವಾಸಿಗರನ್ನು ಸೆಳೆಯುತ್ತದೆ.

ಭಗ್ಸುವಿನಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಸಿದ್ದ ತಾಣವೆಂದರೆ ಪ್ರಾಚೀನ ಭಗ್ಸುನಾಗ್ ದೇವಸ್ಥಾನ, ಮ್ಯಾಕ್ಲಿಯೋಗಂಜ್ ನಿಂದ ಸುಮಾರು 3 ಕಿಲೋ ಮೀಟರ್ ದೂರದಲ್ಲಿದೆ. ಈ ದೇವಸ್ಥಾನ ಹಿಂದೂ ಲಯ ದೇವತೆ ಶಿವನಿಗೆ ಸಮರ್ಪಿತವಾಗಿದೆ. ದೇವಸ್ಥಾನದ ಆಸುಪಾಸಿನಲ್ಲಿ ಹತ್ತಾರು ನೀರಿನ ಕೊಳಗಳು ಮತ್ತು ಟೈಗರ್ ಹೆಡ್ ನೀರಿನ ನಳಿಗೆಗಳಿವೆ. ಹುಲಿ ತಲೆಯ ನೀರಿನ ನಳಿಗೆಯನ್ನು ಹಿಂದೂಗಳು ಪವಿತ್ರವೆಂದು ನಂಬುತ್ತಾರೆ. ಹಿತಕರವಾದ ವಾತಾವರಣ ಮತ್ತು ನಿಸರ್ಗದತ್ತ ಪರಿಸರವುಳ್ಳ ಈ ಪ್ರದೇಶ ಸೌಂದರ್ಯವನ್ನು ಹೆಚ್ಚಿಸಿದೆ.

ಇಂದ್ರಹಾರ ಪಾಸ್(ರಹದಾರಿ) ಒಂದು ಪ್ರಮುಖ ಪ್ರವಾಸಿ ಗಮ್ಯಸ್ಥಾನವಾಗಿದ್ದು ದೌಲಾಧರ್ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ 4342 ಮೀಟರ್ ಎತ್ತರದಲ್ಲಿದೆ. ಈ ರಹದಾರಿ ಚಂಬಾ ಮತ್ತು ಕಂಗ್ರಾ ಜಿಲ್ಲೆಗಳ ಭೌಗೋಳಿಕ ಗಡಿ. ಇಲ್ಲಿಗೆ ನಾವು ಧರ್ಮಶಾಲ ಅಥವಾ ಮ್ಯಾಕ್ಲಿಯೋಗಂಜ್ ನಿಂದ ಚಾರಣ ಹೊರಟು ಸುಲಭವಾಗಿ ತಲುಪಬಹುದು. ಪ್ರವಾಸಿಗರು ಧರ್ಮಶಾಲಾ ಮತ್ತು ಚಂಬ ನಡುವಿನ ಚಾರಣದ ದಾರಿಯಲ್ಲಿ ಮಿಂಕೈನಿ ಪಾಸ್ ಅನ್ನೂ ಭೇಟಿ ಮಾಡಬಹುದು. ಉತ್ತರ ಭಾಗದ ಪ್ರದೇಶದ ಶೃಂಗದಿಂದ ಪ್ರವಾಸಿಗರು ಭವ್ಯ ಪರ್ವತ ಶ್ರೇಣಿಯ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಭಗ್ಸು(ಭಗ್ಸುನಾಗ್) ಪ್ರದೇಶವನ್ನು ಬೇರೇ ಬೇರೇ ವಿಧದ ಸಾರಿಗೆ ಸಂಪರ್ಕದ ಮೂಲಕ ಸುಲಭವಾಗಿ ತಲುಪಬಹುದು. ಧರ್ಮಶಾಲಾ ವಿಮಾನನಿಲ್ದಾಣ ಭಗ್ಸುವಿಗೆ ಹತ್ತಿರದಲ್ಲಿರುವ ವಿಮಾನನಿಲ್ದಾಣವಾಗಿದ್ದು ದೆಹಲಿ ಮತ್ತು ಕುಲುವಿನಿಂದ ಬಹಳಷ್ಟು ವಿಮಾನಗಳು ಇಲ್ಲಿ ಸಂಚರಿಸುತ್ತಿರುತ್ತವೆ. ಭಗ್ಸುವಿಗೆ ಹತ್ತಿರದಲ್ಲಿರುವ ರೈಲ್ವೇ ನಿಲ್ದಾಣವೆಂದರೆ ಪಠಾನಕೋಟ್ ರೈಲ್ವೇ ನಿಲ್ದಾಣ. ರೈಲ್ವೇ ನಿಲ್ದಾಣದಿಂದ ಭಗ್ಸುವಿಗೆ ಬಾಡಿಗೆ ಕ್ಯಾಬ್ಸ್ ಅಥವಾ ಕಾರ್ ದೊರೆಯುತ್ತದೆ. ಅಲ್ಲದೆ ಹತ್ತಾರು ಬಸ್ ಗಳೂ ಕೂಡ ಮ್ಯಾಕ್ಲಿಯೋಗಂಜ್ ಮತ್ತು ಧರ್ಮಶಾಲದಿಂದ ದೊರೆಯುತ್ತವೆ.

ಭಗ್ಸುವಿನಲ್ಲಿ ಸಮಶೀತೋಷ್ಣ ವಲಯದ ವಾತಾವರಣವಿದ್ದು ಸೌಮ್ಯವಾದ ಬೇಸಿಗೆ ಮತ್ತು ಶೀತಕರ ಚಳಿಗಾಲ ಅನುಭವಕ್ಕೆ ಬರುತ್ತದೆ. ಕಡಿಮೆ ಉಷ್ಣಾಂಶವಿರುವುದನ್ನು ಹೊರತುಪಡಿಸಿದರೆ ಚಳಿಗಾಲ ಭಗ್ಸುವಿಗೆ ಭೇಟಿ ನೀಡಲು ಪ್ರಶಸ್ತವಾದ ಸಮಯ. ಅದರಲ್ಲೂ ಹಿಮಪಾತವನ್ನು ನೋಡಲಿಚ್ಚಿಸುವವರು ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡಬೇಕು. ಶೀತದ ವಾತಾವರಣದಿಂದ ದೂರವಿರಲು ಇಚ್ಚಿಸುವವರು ಬೇಸಿಗೆಯಲ್ಲಿ ಹಿತಕರ ವಾತಾವರಣವಿರುವುದರಿಂದ ಬೇಸಿಗೆಯಲ್ಲಿ ಭೇಟಿ ಮಾಡಬಹುದು.

ಭಗ್ಸು ಪ್ರಸಿದ್ಧವಾಗಿದೆ

ಭಗ್ಸು ಹವಾಮಾನ

ಉತ್ತಮ ಸಮಯ ಭಗ್ಸು

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಭಗ್ಸು

  • ರಸ್ತೆಯ ಮೂಲಕ
    ಹತ್ತಾರು ಖಾಸಗಿ ಮತ್ತು ಸರ್ಕಾರಿ ಬಸ್ ಸೌಕರ್ಯಗಳ ಸೇವೆಯನ್ನು ಭಗ್ಸು ಹೊಂದಿದೆ. ಮ್ಯಾಕ್ಲಿಯೋಗಂಜ್ ನಿಂದ ಭಗ್ಸುವಿಗೆ ಬಸ್ ಸೌಲಭ್ಯಗಳು ಸುಲಭವಾಗಿ ದೊರೆಯುತ್ತವೆ. ಕೆಳಗಿನ ಧರ್ಮಶಾಲಾದವರೆಗೂ ಬಸ್ ಸಂಚಾರವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪಠಾನಕೋಟ್ ರೈಲ್ವೇ ನಿಲ್ದಾಣ ಭಗ್ಸುವಿಗೆ ಹತ್ತಿರದಲ್ಲಿದೆ. ನವದೆಹಲಿಯಿಂದ ಹತ್ತಾರು ರೈಲುಗಳು ಪಠಾನಕೋಟ್ ಗಿವೆ. ಬಸ್ಸುಗಳು, ಟ್ಯಾಕ್ಸಿ ಅಥವಾ ಕ್ಯಾಬ್ಸ್ ಗಳು ರೈಲ್ವೇ ನಿಲ್ದಾಣದಿಂದ ಭಗ್ಸುವಿಗೆ ಲಭ್ಯ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಧರ್ಮಶಾಲಾ ವಿಮಾನನಿಲ್ದಾಣ ಭಗ್ಸುವಿಗೆ ಹತ್ತಿರದಲ್ಲಿರುವ ವಿಮಾನನಿಲ್ದಾಣವಾಗಿದ್ದು ದೆಹಲಿ ಮತ್ತು ಕುಲುವಿನಿಂದ ಬಹಳಷ್ಟು ವಿಮಾನಗಳು ಇಲ್ಲಿಗಿವೆ. ದೆಹಲಿ ವಿಮಾನ ನಿಲ್ದಾಣ ಭಗ್ಸುವಿಗೆ ಹತ್ತಿರದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮತ್ತು ಕ್ಯಾಬ್ಸ್ ಗಳು ಬಾಡಿಗೆಗೆ ಲಭ್ಯವಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri