Search
  • Follow NativePlanet
Share
ಮುಖಪುಟ » ಸ್ಥಳಗಳು » ಭಾಗಲ್ಪುರ್ » ಹವಾಮಾನ

ಭಾಗಲ್ಪುರ್ ಹವಾಮಾನ

ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ಭಾಗಲ್ಪುರ್ ಪ್ರವಾಸಿ ಚಟುವಟಿಕೆಗಳು ಬಿರುಸಾಗಿರುತ್ತದೆ. ಭಾಗಲ್ಪುರ್ ಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಕಾಲ ಸೂಕ್ತವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆ ಕಾಲವು ಮಾರ್ಚ್ ನಲ್ಲಿ ಶುರುವಾಗಿ ಮೇ ನಲ್ಲಿ ಕೊನೆಯಾಗುತ್ತದೆ. ತಾಪಮಾನ 25 ಡಿಗ್ರಿ ಗಳಿಂದ 38 ಡಿಗ್ರಿ ಗಳ ವರೆಗೆ ಬದಲಾಗುತ್ತದೆ. ಗರಿಷ್ಟ ಸೆಖೆ ದಿನಗಳಲ್ಲಿ ಉಷ್ಣಾಂಶ 40 ಡಿಗ್ರಿ ಮುಟ್ಟುತ್ತದೆ. ಈ ಸಮಯದಲ್ಲಿ ಈ ಸ್ಥಳವು ಶುಷ್ಕತೆಯಿಂದ ಕೂಡಿರುತ್ತದೆ.

ಮಳೆಗಾಲ

ಭಾಗಲ್ಪುರ್ ನಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಚೆನ್ನಾಗಿ ಮಳೆಯಾಗುತ್ತದೆ. ಈ ಸಮಯದಲ್ಲಿ ತಾಪಮಾನ ಮೂವತ್ತರ ಆಸುಪಾಸಿನಲ್ಲಿದ್ದು, ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಅಕ್ಟೋಬರ್ ಹಾಗೂ ನವೆಂಬರ್ ನಲ್ಲಿ ತಾಪಮಾನ ಮಿತವಾಗಿದ್ದು, ಈ ಸಮಯದಲ್ಲಿ ಭೇಟಿ ನೀಡಲು ಸೂಕ್ತ ಕಾಲವಾಗಿದೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ತನಕ ಚಾಚಿರುವ ಚಳಿಗಾಲದಲ್ಲಿ ಉಷ್ಣತೆಯು ಕನಿಷ್ಠ 11 ಡಿಗ್ರಿ ಗೆ ಇಳಿಯಬಹುದು. ಗರಿಷ್ಟ ತಾಪಮಾನ 18 ಡಿಗ್ರಿ ಗಳು.